ತುಳುವರ ಮನಗೆದ್ದ ಚಾಲಿಪೋಲಿಲು 'ಘರ್ ವಾಲಿ'
'ಚಾಲಿಪೋಲಿಲು' ನನ್ನ ಅಭಿನಯದ ಮೂರನೇ ತುಳು ಚಿತ್ರ. ಈ ಚಿತ್ರ ನನಗೆ ನಿರೀಕ್ಷೆಗಿಂತ ಜಾಸ್ತಿ ಹೆಸರನ್ನು ತಂದುಕೊಟ್ಟಿದೆ. ಇಷ್ಟರವರೆಗೆ ಕನ್ನಡ ಚಿತ್ರಗಳಲ್ಲಿ ಅತ್ತೆ, ತಾಯಿ ಮತ್ತಿತರ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನನಗೆ 'ಘರ್ ವಾಲಿ' ಪಾತ್ರ ಕೊಟ್ಟು ಡಿಫರೆಂಟ್ ರೂಪದಲ್ಲಿ ಪ್ರೇಕ್ಷಕರು ನನ್ನ ನಟನೆಯನ್ನು ಸ್ವೀಕರಿಸುವಂತೆ ಮಾಡಿದ್ದಾರೆ. ಈ ಕಾರಣಕ್ಕಾಗಿ ಚಿತ್ರದ ನಿರ್ಮಾಪಕ ಮತ್ತು ಯುವನಿರ್ದೇಶಕರಿಗೆ ಅಭಾರಿಯಾಗಿದ್ದೇನೆ' ಎಂದು ಕನ್ನಡ ಚಿತ್ರರಂಗದ ಖ್ಯಾತನಟಿ ಪದ್ಮಜಾ ರಾವ್ ಹೇಳಿದರು.
ಶುಕ್ರವಾರ (ನ.7) ಮುಂಜಾನೆ ಮಂಗಳೂರು ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತಾಡುತ್ತಿದ್ದರು. ಚಾಲಿಪೋಲಿಲು ಸಿನಿಮಾ ತುಳು ಭಾಷೆಯಲ್ಲಿ ಈವರೆಗೆ ತಯಾರಾದ ಚಿತ್ರಗಳಲ್ಲೇ ಅತ್ಯುತ್ತಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. [ಚಾಲಿಪೋಲಿಲು ಚಿತ್ರ ವಿಮರ್ಶೆ]

ವಾರದ ಗಳಿಕೆಯಲ್ಲೇ ದಾಖಲೆ: ಚಾಲಿಪೋಲಿಲು ಚಿತ್ರ ವಾರದ ಗಳಿಕೆಯಲ್ಲೇ ಹೊಸ ದಾಖಲೆ ಬರೆದಿದೆ. ಸಿನಿಮಾ ತೆರೆಕಂಡಿರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 10 ಥಿಯೇಟರುಗಳಲ್ಲಿ ಒಂದು ವಾರದ ಗಳಿಕೆ ರು. 45,79,776 ದಾಟಿದ್ದು, ಇದು ಉತ್ತಮ ತುಳು ಸಿನಿಮಾವನ್ನು ತುಳುವರು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಾರೆ ಅನ್ನೋದಕ್ಕೆ ಉದಾಹರಣೆ ಎಂದು ಚಿತ್ರದ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ ಹೇಳಿದರು.

ಆ ಬಳಿಕ ಚಾಲಿಪೋಲಿಲು ಬೆಂಗಳೂರು, ಮುಂಬೈ ಹಾಗೂ ವಿದೇಶ ಪ್ರವಾಸವನ್ನು ಕೈಗೊಳ್ಳಲಿದ್ದಾರೆ' ಎಂದು ಚಿತ್ರದ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಕಾರ್ಯಕಾರಿ ನಿರ್ಮಾಪಕ ಜಗನ್ನಾಥ ಶೆಟ್ಟಿ ಬಾಳ, ಚಿತ್ರದ ನಟರುಗಳಲ್ಲಿ ಓರ್ವರಾದ ಲಕ್ಷ್ಮಣಕುಮಾರ್ ಮಲ್ಲೂರು ಉಪಸ್ಥಿತರಿದ್ದರು.


Click it and Unblock the Notifications











