»   » ಯಶ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ 'ಪ್ಯಾರ್ಗೆ' ಪಾರುಲ್: ಏಕೆ ಗೊತ್ತಾ?

ಯಶ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ 'ಪ್ಯಾರ್ಗೆ' ಪಾರುಲ್: ಏಕೆ ಗೊತ್ತಾ?

Posted By:
Subscribe to Filmibeat Kannada

ಸ್ಯಾಂಡಲ್ ವುಡ್ 'ಪ್ಯಾರ್ಗೆ ಆಗ್ಬುಟೈತೆ' ಖ್ಯಾತಿಯ ಪಾರುಲ್ ಯಾದವ್ ನಿಮಗೆಲ್ಲಾ ಗೊತ್ತೇ ಇದೆ ಅಲ್ವಾ. ಸ್ಪೆಷಲ್ ಸ್ಟಾರ್ ಧನಂಜಯ್ ಅಭಿನಯದ 'ಜೆಸ್ಸಿ' ಚಿತ್ರದಲ್ಲಿ ಕಾಣಿಸಿಕೊಂಡ ನಂತರ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆ.[ಬೀದಿ ನಾಯಿಗಳ ದಾಳಿಯಿಂದ ಆಸ್ಪತ್ರೆ ಸೇರಿದ್ದ ಪಾರುಲ್ ಡಿಸ್ಚಾರ್ಜ್!]

ಚಿತ್ರರಂಗದಲ್ಲಿ ಕಾಣಿಸಿಕೊಳ್ಳದಿದ್ರು ಬಹಳ ದಿನಗಳ ನಂತರ ಪಾರುಲ್ ಯಾದವ್ ಮೊನ್ನೆಯಷ್ಟೇ ಫೇಸ್ ಬುಕ್ ಲೈವ್ ಬಂದಿದ್ದರು. ಈ ವೇಳೆ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ಹೇಳಿದ್ದೇನು ತಿಳಿಯಲು ಮುಂದೆ ಓದಿ...

ಫೇಸ್ ಬುಕ್ ಲೈವ್ ನಲ್ಲಿ ಪಾರುಲ್ ಯಾದವ್

ಪಾರುಲ್ ಯಾದವ್ ಮೊನ್ನೆಯಷ್ಟೇ ಫೇಸ್ ಬುಕ್ ಲೈವ್ ಬಂದಿದ್ದರು. ಈ ವೇಳೆ ಅವರು ಅಭಿಮಾನಿಗಳು ಪ್ರಶ್ನೆ ಕೇಳಬಹುದು ಎಂದು ಹೇಳಿದಕ್ಕೆ, ಅಭಿಮಾನಿಯೊಬ್ಬರು ನೀವು ಯಶ್ ಜೊತೆ ನಟಿಸುವುದನ್ನು ನೋಡಬೇಕು ಎಂದ್ದಿದ್ದರು. ಅದಕ್ಕೆ ಪಾರುಲ್ ಕೊಟ್ಟ ಉತ್ತರ...['ಕಾಟನ್ ಪೇಟೆ'ಯಲ್ಲಿ ದುನಿಯಾ ವಿಜಿ ಜೊತೆ ಪತ್ತೆಯಾದ ಪಾರುಲ್]

ನನ್ನ ಫೇವರಿಟ್ ಆಕ್ಟರ್

'ಯಶ್ ಮೈ ಫೇವರಿಟ್ ಆಕ್ಟರ್. ಕನ್ನಡದ ಮೋಸ್ಟ್ ಗುಡ್ ಲುಕ್ಕಿಂಗ್ ಆಕ್ಟರ್ ಯಶ್' ಎಂದು ಉತ್ತರಿಸಿದ್ದಾರೆ.

ಯಶ್ ಡ್ಯಾನ್ಸ್ ತುಂಬಾ ಇಷ್ಟ

" ಯಶ್ ಡ್ಯಾನ್ಸ್ ಅಂದ್ರೆ ತುಂಬಾ ಇಷ್ಟ, ಅವರ ಆಕ್ಟಿಂಗ್ ತುಂಬಾ ಇಷ್ಟ (ಐ ಲವ್ ಹಿಸ್ ಡ್ಯಾನ್ಸ್, ಐ ಲವ್ ಹಿಸ್ ಆಕ್ಟಿಂಗ್) " -ಪಾರುಲ್ ಯಾದವ್, ನಟಿ

ಯಶ್ ಜೊತೆ ನಟಿಸಲು ಕಾಯುತ್ತಿದ್ದೇನೆ

ಯಶ್ ಬಗ್ಗೆ ಮಾತು ಮುಂದುವರೆಸಿ " ಯಶ್ ಹೇರ್ ಸ್ಟೈಲ್ ಇಷ್ಟ, ಅವರ ಜೊತೆ ನಟಿಸಲು ಕಾಯುತ್ತಿದ್ದೇನೆ (ಐ ಲವರ್ ಹಿಸ್ ಹೇರ್ ಡೂಯಿಂಗ್ಸ್, ಐ ಯಾಮ್ ವೈಯ್ ಟಿಂಗ್ ಫಾರ್ ವರ್ಕಿಂಗ್ ವಿತ್ ಯಶ್)" ಎಂದು ಪಾರುಲ್ ಯಾದವ್ ಅಭಿಮಾನಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.

ದರ್ಶನ್ ಜೊತೆ ಆಕ್ಟಿಂಗ್ ಮಾಡೋಕೆ ಇಷ್ಟ ಇದ್ಯಾ?

ಅಭಿಮಾನಿಯೊಬ್ಬರ ಈ ಪ್ರಶ್ನೆಗೆ " ಖಂಡಿತ. ಟಾಪ್ 5 ಕನ್ನಡ ಸ್ಟಾರ್ ಗಳಾದ ಪುನೀತ್, ದರ್ಶನ್, ಯಶ್, ಸುದೀಪ್, ಶಿವರಾಜ್ ಕುಮಾರ್ ಸರ್ ಎಲ್ಲರ ಜೊತೆ ಸಿನಿಮಾದಲ್ಲಿ ನಟಿಸ ಬೇಕು ಎಂದುಕೊಂಡಿದ್ದೇನೆ" ಎಂದು ಉತ್ತರಿಸಿದ್ದಾರೆ.

ಪಾರುಲ್ ಮುಂದಿನ ಸಿನಿಮಾ

ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ 'ಕ್ವೀನ್' ಏಪ್ರಿಲ್ ನಲ್ಲಿ ಶೂಟಿಂಗ್ ಆರಂಭವಾಗುವ ಚಾನ್ಸ್ ಇದೆ ಎಂದು ಹೇಳಿದ್ದಾರೆ.

English summary
Kannada Actress Parul Yadav appreciates Yash, when she was came on Facebook Live.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada