Don't Miss!
- News
ಫೆಬ್ರವರಿ 2023ರ ಮಾಸಭವಿಷ್ಯ: ಸಂಕ್ರಮಣದ ನಂತರದ ಫೆಬ್ರವರಿ ತಿಂಗಳಿನಲ್ಲಿ ಯಾವೆಲ್ಲ ರಾಶಿಗಳಿಗೆ ಶುಭವಾಗಲಿದೆ?
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪುರುಷರ್ಯಾರೂ ಡ್ರಗ್ಸ್ ತೆಗೆದುಕೊಳ್ಳುವುದಿಲ್ಲವಾ? ನಟಿ ಪಾರುಲ್ ಯಾದವ್
ಡ್ರಗ್ಸ್ ಮಾಫಿಯಾದಲ್ಲಿ ಕೇವಲ ನಟಿಯರ ಹೆಸರು ಮಾತ್ರ ಕೇಳಿಬರುತ್ತಿರುವುದರ ವಿರುದ್ಧ ಕೆಂಡಕಾರಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ನಟಿ ರಾಗಿಣಿ, ಸಂಜನಾ ಗಲ್ರಾನಿ ಮತ್ತು ಬಾಲಿವುಡ್ ನಲ್ಲಿ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ ಅರೆಸ್ಟ್ ಆದ ಬಳಿಕ ಡ್ರಗ್ಸ್ ವಿಚಾರದಲ್ಲಿ ಕೇವಲ ನಟಿಮಣಿಯರನ್ನು ಮಾತ್ರ ಟಾರ್ಗೆಟ್ ಮಾಡಲಾಗಿದೆ ಎನ್ನುವ ಆಕ್ರೋಶ ವ್ಯಕ್ತವಾಗುತ್ತಿದೆ.
ಇದೀಗ ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಮತ್ತು ರಕುಲ್ ಪ್ರೀತಿ ಸಿಂಗ್ ಗೆ ಎನ್ ಸಿ ಬಿ ನೋಟಿಸ್ ನೀಡುತ್ತಿದ್ದಂತೆ ನಟಿ ಪಾರುಲ್ ಯಾದವ್ ಸಿಟ್ಟಿಗೆದಿದ್ದಾರೆ. ಪುರುಷರು ಡ್ರಗ್ಸ್ ತೆಗೆದುಕೊಳ್ಳುವುದಿಲ್ಲವಾ ಎಂದು ಪ್ರಶ್ನೆ ಮಾಡಿದ್ದಾರೆ. ಮುಂದೆ ಓದಿ...
ಡ್ರಗ್ಸ್
ಪ್ರಕರಣ:
ನಟಿಯರ
ಖಾಸಗಿ
ವಿಡಿಯೋ
ಸೋರಿಕೆ
ಮಾಡಿದವರ
ವಿರುದ್ಧ
ಸಿಡಿದೆದ್ದ
ನಟಿ
ಪಾರುಲ್

ಪುರುಷರು ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪಾರುಲ್, ಭಾರತದ ಮೋಸ್ಟ್ ವಾನ್ ಟೆಡ್ ಎಂದು ಬರೆದಿರುವ ಪೋಸ್ಟರ್ ನಲ್ಲಿ ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ 6 ನಟಿಯ ಫೋಟೋಗಳಿವೆ. ಫೋಟೋ ಕೆಳಗೆ ರಿಪೀಟ್ ಆಫ್ಟರ್ ಮೀ ಎಂದು ಬರೆದು ಪುರುಷರು ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ ಅಂತ ಬರೆದು ಹ್ಯಾಶ್ ಟ್ಯಾಗ್ ಹಾಕಲಾಗಿದೆ. ಈ ಪೋಸ್ಟರ್ ಅನ್ನು ಶೇರ್ ಮಾಡಿದ್ದಾರೆ.

ಚಿತ್ರರಂಗ ಮಾತ್ರ ಹೈಲೆಟ್ ಆಗುತ್ತಿರುವ ಬಗ್ಗೆ ಅಸಮಾಧಾನ
ಈ ಹಿಂದೆ ಪಾರುಲ್ ಯಾದವ್ ಡ್ರಗ್ಸ್ ಪ್ರಕರಣದ ತನಿಖೆ ವಿಧಾನದ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಮಾದಕ ವಸ್ತು ಸೇವನೆಯ ಪಿಡುಗು ಎಲ್ಲಾ ವಿಭಾಗದಲ್ಲಿಯೂ ಇದೆ. ಆದರೆ ಚಿತ್ರರಂಗದವರನ್ನ ಮಾತ್ರ ಹೈಲೆಟ್ ಮಾಡುತ್ತಿರುವುದು ಎಷ್ಟು ಸರಿ ಎಂದು ನಟಿ ಪಾರುಲ್ ಪ್ರಶ್ನಿಸಿದ್ದರು.
ಡ್ರಗ್ಸ್
ದಂಧೆಯಲ್ಲಿ
ಹೆಸರು
ಕೇಳಿಬರುತ್ತಿದ್ದಂತೆ
ಇನ್ಸ್ಟಾಗ್ರಾಮ್
ಕಾಮೆಂಟ್ಸ್
ಲಿಮಿಟ್
ಮಾಡಿದ
ಮಹೇಶ್
ಬಾಬು
ಪತ್ನಿ

ಜನರ ಗಮನ ಬೇರೆಡೆ ಸೆಳೆಯಲು ಹೆಣೆದಿರುವ ತಂತ್ರವಿದು
ನಟಿಯರನ್ನು ಬಂಧಿಸಿ ಅವರ ಖಾಸಗಿ ವಿಡಿಯೋಗಳನ್ನು ಲೀಕ್ ಮಾಡುತ್ತಿರುವವರ ವಿರುದ್ಧ ಪಾರುಲ್ ಕಿಡಿಕಾರಿದ್ದರು. ದೇಶದಲ್ಲಿ ಭಯಾನಕ ಸಮಸ್ಯೆಗಳು ಸಾಕಷ್ಟಿವೆ. ಆದರೆ ಅಂತಹ ವಿಷಯಗಳು ಯಾಕೆ ಚರ್ಚೆಯಾಗುತ್ತಿಲ್ಲ, ಜನರ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರ ಬೇಕು ಅಂತನೆ ಹೆಣೆದಿರುವ ತಂತ್ರವಿದು ಎಂದು ಪಾರುಲ್ ಆಕ್ರೋಶ ವ್ಯಕ್ತಡಿಸಿದ್ದರು.
Recommended Video

ದೀಪಿಕಾ ಸೇರಿದಂತೆ ಬಾಲಿವುಡ್ ಪ್ರಮುಖ ನಟಿಯರಿಗೆ ನೋಟಿಸ್
ಡ್ರಗ್ಸ್ ಪ್ರಕರಣದಲ್ಲಿ ದೀಪಿಕಾ ಪಡುಕೋಣೆ ಡ್ರಗ್ಸ್ ಚಾಟ್ ಬಹಿರಂಗವಾದ ಬಳಿಕ ದೀಪಿಕಾಗೆ ಎನ್ ಸಿ ಬಿ ನೋಟಿಸ್ ನೀಡಲಿದೆ ಎಂದು ಹೇಳಲಾಗಿತ್ತು. ನಿನ್ನ (ಸೆಪ್ಟಂಬರ್ 23) ದೀಪಿಕಾ ಸೇರಿದಂತೆ ರಕುಲ್ ಪ್ರೀತ್ ಸಿಂಗ್, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಗೆ ಎನ್ ಸಿ ಬಿ ನೋಟಿಸ್ ನೀಡಿದೆ. ಸೆಪ್ಟಂಬರ್ 24 ರಾಕುಲ್, ಸೆಪ್ಟಂಬರ್ 25 ದೀಪಿಕಾ ಹಾಗೂ ಸೆಪ್ಟಂಬರ್ 26ರಂದು ಸಾರಾ ಅಲಿ ಖಾನ್ ಮತ್ತು ಶ್ರದ್ಧಾ ಕಪೂರ್ ಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.