For Quick Alerts
  ALLOW NOTIFICATIONS  
  For Daily Alerts

  ಪಾರುಲ್ ಯಾದವ್ ಗೆ ಅವರಿಬ್ಬರ ಮೇಲೆ ಭಾರಿ 'ಪ್ಯಾರ್'

  |

  ನಟಿ ಪಾರುಲ್ ಯಾದವ್ ಮೇಲೆ ಕನ್ನಡಿಗರಿಗೆ 'ಗೋವಿಂದಾಯ ನಮಃ' ಚಿತ್ರ ನೋಡಿದ ಮೇಲೆ ಪ್ಯಾರ್ಗೆ ಆಗ್ಬಿಟ್ಟಿದ್ದು ಎಲ್ಲರಿಗೂ ಗೊತ್ತು. ಆದರೆ ಸ್ವತಃ ಪಾರುಲ್ ಯಾದವ್ ಅವರಿಗೆ ಯಾರ ಮೇಲೆ ಪ್ಯಾರ್ ಗೆ ಆಗ್ಬಿಟ್ಟಿದೆ ಗೊತ್ತೇ? ಅಣ್ಣಾ ಹಜಾರೆ ಹಾಗೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮೇಲೆ. ಅಣ್ಣಾ ಹಜಾರೆಯ ಭ್ರಷ್ಟಾಚಾರ ನಿರ್ಮೂಲನ ತತ್ವಕ್ಕೆ ಮನಸೋತಿರುವ ಈ ಪ್ಯಾರ್ಗೆ ಆಗ್ಬಿಟ್ಟೈತೆ' ಸುಂದರಿ ನರೇಂದ್ರ ಮೋದಿಯಿಂದ ಭಾರೀ ಪ್ರಭಾವಕ್ಕೊಳಗಾಗಿದ್ದಾರೆ.

  ಮಾತನಾಡಿದರೆ ಮೋದಿ ಬಗ್ಗೆ ಹೇಳಿಯೇ ಮಾತು ಮುಗಿಸುವ ಪಾರುಲ್, ಮೋದಿ ಮುಖ್ಯಮಂತ್ರಿಯಾದ ಮೇಲೆ ಗುಜರಾತ್ ರಾಜ್ಯದಲ್ಲಿ ಆಗಿರುವ ಅಭಿವೃದ್ದಿ ಎಲ್ಲ ರಾಜ್ಯಗಳಿಗೂ ಮಾದರಿ ಎಂದು ಹೇಳಲು ಮರೆಯುವುದಿಲ್ಲ. ಜೊತೆಗೆ, ಒಮ್ಮೆ ಮೋದಿ ಪ್ರಧಾನ ಮಂತ್ರಿಯಾದರೆ ಭಾರತದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಹೇಳತ್ತಾರೆ ಪಾರುಲ್. ಅವರೇ ಮುಂದಿನ ಪ್ರಧಾನಿಯಾಗಲಿ ಎಂದು ಸಾಕಷ್ಟು ದೇವರಿಗೆ ಬಹಳಷ್ಟು ಹರಕೆ ಹೊತ್ತಿದ್ದಾರಂತೆ ಪಾರುಲ್ ಯಾದವ್.

  ಭ್ರಷ್ಟಾಚಾರದ ವಿರುದ್ಧ ಭಾರಿ ಧ್ವನಿ ಎತ್ತಿರುವ 'ಅಣ್ಣಾ ಹಜಾರೆ' ಚಳುವಳಿಯಲ್ಲಿ ಸಕ್ರಿಯಳಾಗಿರುವ ಪಾರುಲ್, ಅದನ್ನು ಕಾರ್ಯರೂಪಕ್ಕೂ ತಂದಿದ್ದಾರಂತೆ. ಅನಿವಾರ್ಯವಾಗಿ ಫೋನಿನಲ್ಲಿ ಮಾತನಾಡಿ ಟ್ರಾಫಿಕ್ ಪೊಲೀಸ್ ಗೆ ಸಿಕ್ಕಿಹಾಕಿಕೊಂಡರೆ ಅಲ್ಲೇ ಲಂಚ ಕೊಟ್ಟು ಪರಾರಿಯಾಗುವ ಬದಲು ನೇರವಾಗಿ ಕೋರ್ಟ್ ಗೆ ಹೋಗಿ ದಂಡ ಕಟ್ಟಿ ಬರುತ್ತಾರಂತೆ. ಪ್ರತಿಯೊಬ್ಬರೂ ಕಾರ್ಯರೂಪಕ್ಕೆ ತರದೇ ಭ್ರಷ್ಟಾಚಾರ ನಿರ್ಮೂಲನೆ ಹೇಗೆ ಸಾಧ್ಯ ಎಂಬುದು ಪಾರುಲ್ ಯಾದವ್ ಕಳಕಳಿ. ಮುಂದೆ ಫೋಟೋ ಜೊತೆಜೊತೆಯಲ್ಲಿ ಪಾರುಲ್ ಯಾದವ್ 'ಜರ್ನಿ' ತಿಳಿಯಿರಿ...

  ಗೋವಿಂದಾಯ ನಮಃ ಚಿತ್ರದ ಮೂಲಕ ಪಾರುಲ್ ಮನೆಮಾತು

  ಗೋವಿಂದಾಯ ನಮಃ ಚಿತ್ರದ ಮೂಲಕ ಪಾರುಲ್ ಮನೆಮಾತು

  ಕೋಮಲ್ ನಾಯಕತ್ವದ 'ಗೋವಿಂದಾಯ ನಮಃ' ಚಿತ್ರದ ಮೂಲಕ ನಟಿ ಪಾರುಲ್ ಯಾದವ್ ಕರ್ನಾಟಕದ ತುಂಬಾ ಮನೆಮಾತಾಗಿದ್ದಾರೆ. ಚಿತ್ರದಲ್ಲಿ ಅಳವಡಿಸಲಾಗಿದ್ದ 'ಪ್ಯಾರ್ಗೆ ಆಗ್ಬಿಟ್ಟೈತೆ..' ಹಾಡು ಅದ್ಯಾವ ಪರಿ ಹಿಟ್ ಆಗಿತ್ತೆಂದರೆ ಆ ಹಾಡಿನ ಜನಪ್ರಿಯತೆಯೇ ಚಿತ್ರವನ್ನು ಯಶಸ್ವಿಯಾಗಿಸಿತು ಎಂದರೆ ತಪ್ಪಿಲ್ಲ.

  ಗೋವಿಂದಾಯ ನಮಃ ಚಿತ್ರದಲ್ಲಿ ಕೋಮಲ್ ಜೊತೆ ಪಾರುಲ್ ರೊಮಾನ್ಸ್!

  ಗೋವಿಂದಾಯ ನಮಃ ಚಿತ್ರದಲ್ಲಿ ಕೋಮಲ್ ಜೊತೆ ಪಾರುಲ್ ರೊಮಾನ್ಸ್!

  ಈ ವರ್ಷದ ಯಶಸ್ವಿ ಚಿತ್ರ 'ಗೋವಿಂದಾಯ ನಮಃ'ದಲ್ಲಿ ನಾಯಕ ನಟ ಕೋಮಲ್ ಜೊತೆ ನಟಿ ಪಾರುಲ್ ರೊಮಾಂಟಿಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿನ 'ಪ್ಯಾರ್ಗೆ ಆಗ್ಬಿಟ್ಟೈತೆ..' ಹಾಡು ಈ ಪಾರುಲ್ ಗೆ ಬಹಳಷ್ಟು ಜನಪ್ರಿಯತೆ ತಂದುಕೊಟ್ಟಿದೆ.

  ಸುದೀಪ್ 'ಬಚ್ಚನ್' ಚಿತ್ರಕ್ಕೆ ಜೊತೆಯಾದ ಪಾರುಲ್ ಯಾದವ್

  ಸುದೀಪ್ 'ಬಚ್ಚನ್' ಚಿತ್ರಕ್ಕೆ ಜೊತೆಯಾದ ಪಾರುಲ್ ಯಾದವ್

  ಗೋವಿಂದಾಯ ನಮಃ ಚಿತ್ರದಲ್ಲಿ ಕೋಮಲ್ ಅವರಿಗೆ ನಾಯಕಿಯಾಗಿ ನಟಿಸಿದ ನಂತರ ಕನ್ನಡದಲ್ಲಿ ಸುದೀಪ್ ಅವರಿಗೆ 'ಬಚ್ಚನ್' ಚಿತ್ರದಲ್ಲಿ ಈ ಪಾರುಲ್ ಯಾದವ್ ಜೊತೆಯಾಗಿದ್ದಾರೆ. ಆ ಚಿತ್ರವು ಸದ್ಯದಲ್ಲೇ ತೆರೆಕಾಣಲಿದೆ.

  ಕನ್ನಡದವಲ್ಲದೇ ತಮಿಳು, ತೆಲುಗಿನಿಂದಲೂ ಪಾರುಲ್ ಗೆ ಆಫರ್

  ಕನ್ನಡದವಲ್ಲದೇ ತಮಿಳು, ತೆಲುಗಿನಿಂದಲೂ ಪಾರುಲ್ ಗೆ ಆಫರ್

  ಕನ್ನಡದಲ್ಲಿ ಗೋವಿಂದಾಯ ನಮಃ ಚಿತ್ರದಲ್ಲಿ ನಟಿಸಿದ ನಂತರ ದಕ್ಷಿಣ ಭಾರತದಲ್ಲಿ ಬಹಳಷ್ಟು ಖ್ಯಾತಿ ಪಡೆದ ಪಾರುಲ್ ಯಾದವ್, ತಮಿಳು ಹಾಗೂ ತೆಲುಗಿನಿಂದಲೂ ಬಹಳಷ್ಟು ಆಫರ್ ಪಡೆದಿದ್ದಾರೆ.

  ನಂದೀಶ ಚಿತ್ರದಲ್ಲಿ ಮತ್ತೆ ಕೋಮಲ್ ಗೆ ಸಾಥ್ ನೀಡಿದ ಪಾರುಲ್

  ನಂದೀಶ ಚಿತ್ರದಲ್ಲಿ ಮತ್ತೆ ಕೋಮಲ್ ಗೆ ಸಾಥ್ ನೀಡಿದ ಪಾರುಲ್

  ಗೋವಿಂದಾಯ ನಮಃ ಚಿತ್ರದಲ್ಲಿ ಕೋಮಲ್ ಜೊತೆ ನಟಿಸಿ ಖ್ಯಾತರಾದ ನಂತರ ಸುದೀಪ್ ಚಿತ್ರ ಬಚ್ಚನ್ ನಟನೆ ಒಪ್ಪಿಕೊಂಡು ನಿಟಿಸಿರುವ ಪಾರುಲ್, ಮತ್ತೆ 'ನಂದೀಶ' ಚಿತ್ರದಲ್ಲಿ ಕೋಮಲ್ ಅವರಿಗೆ ಜೊತೆಯಾಗಿದ್ದಾರೆ.

  English summary
  Govindaya Namaha fame actress Parul Yadav is active in Anna Hajare Movement and working in that way. She also influenced by, Narendra Modi, the Gujrath Chief Minister who has developed Gujrath in his hand. She told that Narendra Modi should become India Prime Minister. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X