For Quick Alerts
  ALLOW NOTIFICATIONS  
  For Daily Alerts

  ಮತ್ತೆ ಬಂದೇ ಬಿಟ್ರು ನಟಿ ರಮ್ಯಾ: ಅಭಿಮಾನಿಗಳಿಗೆ ಖುಷಿಯೋ ಖುಷಿ

  |

  ನಟಿ, ರಾಜಕಾರಣಿ ರಮ್ಯಾ ಮರಳಿ ಬಂದಿದ್ದಾರೆ. ಎಲ್ಲಿ ಹೋಗಿದ್ದರು? ಎಲ್ಲಿಗೆ ಬಂದರು? ಎಂದೆಲ್ಲಾ ತಲೆಕೊಡಿಸಿಕೊಳ್ಳಬೇಡಿ. ಅವರು ಮರಳಿ ಬಂದಿರುವುದು ಸಾಮಾಜಿಕ ಜಾಲತಾಣಕ್ಕೆ.

  ಹೌದು, ಕಳೆದ ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ರಮ್ಯಾ ಅವರು ಸಾಮಾಜಿಕ ಜಾಲತಾಣದಿಂದ ದೂರವಾಗಿದ್ದರು. ತಮ್ಮ ಟ್ವಿಟ್ಟರ್ ಖಾತೆಯನ್ನು ಡಿ-ಆಕ್ಟಿವೇಟ್ ಮಾಡಿ, ಅಜ್ಞಾತಕ್ಕೆ ತೆರಳಿದ್ದರು. ಇತರೆ ಸಾಮಾಜಿಕ ಜಾಲತಾಣ ಖಾತೆಗಳು ಡಿ-ಆಕ್ಟಿವೇಟ್ ಆಗಿದ್ದವು.

  ಇಷ್ಟು ದಿನ ಹುಡುಕಿದರೆ ಸಿಗದಿದ್ದ ರಮ್ಯಾ ಅವರ ಟ್ವಿಟ್ಟರ್ ಖಾತೆ ಮತ್ತೆ ಸಕ್ರಿಯವಾಗಿದೆ. ಹೊಸ ಟ್ವೀಟ್‌ ಅನ್ನು ರಮ್ಯಾ ಮಾಡಿಲ್ಲ, ಆದರೆ ಖಾತೆ ಮಾತ್ರ ಮತ್ತೆ ಸಕ್ರಿಯವಾಗಿದೆ.

  ಜೂನ್ 1 ರಂದು ಕೊನೆಯ ಟ್ವೀಟ್ ಮಾಡಿದ್ದರು

  ಜೂನ್ 1 ರಂದು ಕೊನೆಯ ಟ್ವೀಟ್ ಮಾಡಿದ್ದರು

  ಜೂನ್ 1 ರಂದು ರಮ್ಯಾ ಅವರು ಕೊನೆಯ ಟ್ವೀಟ್ ಮಾಡಿದ್ದರು. ನಾಯಿಯೊಂದು ಕಳೆದುಹೋಗಿದೆ ಹುಡುಕಿಕೊಡಿ ಎಂಬುದು ರಮ್ಯಾ ಮಾಡಿದ್ದ ಕೊನೆಯ ಟ್ವೀಟ್ ಆಗಿತ್ತು. ಖಾತೆ ಸಕ್ರಿಯವಾದ ಮೇಲೆ ಅವರು ಯಾವುದೇ ಹೊಸ ಟ್ವೀಟ್ ಮಾಡಿಲ್ಲ.

  ಅಭಿಮಾನಿಗಳಿಗೆ ಸಂತಸ ತಂದ ಕಮ್‌ ಬ್ಯಾಕ್

  ಅಭಿಮಾನಿಗಳಿಗೆ ಸಂತಸ ತಂದ ಕಮ್‌ ಬ್ಯಾಕ್

  ದೇಶವೇ ಕೊರೊನಾ ವಿರುದ್ಧ ಹೋರಾಡುತ್ತಿರುವ ಸಮಯದಲ್ಲಿ, ರಾಜಕಾರಣಿಗಳು, ನಟ-ನಟಿಯರು ದೇಶದ ಸಂಕಷ್ಟದ ಪರಿಸ್ಥಿತಿಯಲ್ಲಿ ಸ್ಪಂದಿಸುತ್ತಿದ್ದಾರೆ. ಆದರೆ ರಮ್ಯಾ ಅವರು ಈ ಸಮಯದಲ್ಲಿ ಕಾಣುತ್ತಿಲ್ಲ ಎಂಬ ಸಣ್ಣ ಅಸಮಾಧಾನ ಎದ್ದಿತ್ತು, ಅದೇ ಸಮಯದಲ್ಲಿ ರಮ್ಯಾ ವಾಪಸ್ ಬಂದಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

  ಕಾಂಗ್ರೆಸ್ ನ ಸಾಮಾಜಿಕ ಜಾಲತಾಣ ಮುಖ್ಯಸ್ಥೆಯಾಗಿದ್ದ ರಮ್ಯಾ

  ಕಾಂಗ್ರೆಸ್ ನ ಸಾಮಾಜಿಕ ಜಾಲತಾಣ ಮುಖ್ಯಸ್ಥೆಯಾಗಿದ್ದ ರಮ್ಯಾ

  ಕಾಂಗ್ರೆಸ್ ನ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ಆಗಿದ್ದ ರಮ್ಯಾ ಅವರನ್ನು ಲೋಕಸಭೆ ಚುನಾವಣೆ ಬಳಿಕ ಬದಲಾಯಿಸಲಾಗಿತ್ತು, ಹಾಗಾಗಿ ಪಕ್ಷದ ಮೇಲಿನ ಮುನಿಸಿನಿಂದ ರಮ್ಯಾ ಸಾಮಾಜಿಕ ಜಾಲತಾಣದಿಂದ ದೂರ ಉಳಿದರು ಎನ್ನಲಾಗಿತ್ತು.

  ಮತ್ತೆ ಸಿನಿಮಾದೆಡೆ ಮುಖ ಮಾಡಿದರೇ ರಮ್ಯಾ?

  ಮತ್ತೆ ಸಿನಿಮಾದೆಡೆ ಮುಖ ಮಾಡಿದರೇ ರಮ್ಯಾ?

  ಮತ್ತೊಂದು ಮಾಹಿತಿಯ ಪ್ರಕಾರ ರಮ್ಯಾ ಮತ್ತೆ ಸಿನಿಮಾದಲ್ಲಿ ಸಕ್ರಿಯವಾಗುವ ಸಾಧ್ಯತೆ ಇದ್ದು, ಈ ಬಗ್ಗೆ ತಯಾರಿ ನಡೆಸಿದ್ದಾರೆ, ಇದೇ ಕಾರಣದಿಂದ ರಮ್ಯಾ ಸಾಮಾಜಿಕ ಜಾಲತಾಣಕ್ಕೆ ಮರಳಿದ್ದಾರೆ ಎನ್ನಲಾಗುತ್ತಿದೆ.

  English summary
  Actress, Politician Ramya aka Divya Spandana Activated Her Twitter Account. She de activated her account last year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X