»   » ಬಿಗ್ ಮನೆಯಿಂದ 'ದಂಡುಪಾಳ್ಯ'ಕ್ಕೆ ಬಂದ 'ಮಳೆ' ಹುಡುಗಿ ಪೂಜಾ

ಬಿಗ್ ಮನೆಯಿಂದ 'ದಂಡುಪಾಳ್ಯ'ಕ್ಕೆ ಬಂದ 'ಮಳೆ' ಹುಡುಗಿ ಪೂಜಾ

Posted By:
Subscribe to Filmibeat Kannada

ಬಿಗ್ ಬಾಸ್ ಮನೆಯಲ್ಲಿ ಕ್ರಿಕೆಟರ್ ಅಯ್ಯಪ್ಪ ಅವರ ಹಿಂದೆ ಬಿದ್ದು ಕಿಸ್ಸಿಂಗು, ರೊಮ್ಯಾನ್ಸ್ ಅಂತ ಭಾರಿ ಸುದ್ದಿಯಾಗಿದ್ದ ಮಳೆ ಹುಡುಗಿ ಪೂಜಾ ಗಾಂಧಿ ಅವರು ಬಿಗ್ ಮನೆಯಿಂದ ಹೊರಬಂದ ತಕ್ಷಣ ಹೊಸ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ಹೌದು ನಟಿ ಪೂಜಾ ಗಾಂಧಿ ಅವರು ತಮ್ಮ ಮುಂದಿನ ಚಿತ್ರ ದಂಡುಪಾಳ್ಯ ಪಾರ್ಟ್ 2' ಚಿತ್ರಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಈ ಮೊದಲು ಪೂಜಾ ಅವರು 'ದಂಡುಪಾಳ್ಯ' ಸಿನಿಮಾದಲ್ಲಿ ಖತರ್ನಾಕ್ ಕಳ್ಳಿಯ ಪಾತ್ರದಲ್ಲಿ ಮಿಂಚಿದ್ದರು. ಇದೀಗ ಮತ್ತೆ ಕಳ್ಳಿಯಾಗಲು ಹೊರಟಿದ್ದಾರೆ.[ಅಯ್ಯಪ್ಪ ಹೊರನಡೆದ್ರು; ನಟಿ ಪೂಜಾ ಗಾಂಧಿ ಕಣ್ಣೀರು ಹಾಕಿದ್ರು]

Actress Pooja Gandhi Looking Forward to 'Dandupalya 2'

ಬರೋಬ್ಬರಿ 4 ವರ್ಷಗಳ ಬಳಿಕ ಮತ್ತೆ 'ದಂಡುಪಾಳ್ಯ-2' ಸಿನಿಮಾ ಮಾಡಲಾಗುತ್ತಿದ್ದು, ನಟಿ ಪೂಜಾ ಗಾಂಧಿ ಅವರು ಬಿಗ್ ಬಾಸ್ ಮನೆ ಹೊಕ್ಕದಿದ್ದರೆ, ಈಗಾಗಲೇ ಸಿನಿಮಾ ಸೆಟ್ಟೇರಿ ಶೂಟಿಂಗ್ ಆರಂಭ ಆಗ್ತಾ ಇತ್ತು.

ಪೂಜಾ ಅವರ ಗೈರು ಹಾಜರಿ ಇದ್ದಿದ್ದರಿಂದ 'ದಂಡುಪಾಳ್ಯ 2' ಸಿನಿಮಾದ ಶೂಟಿಂಗ್ ಡಿಲೇ ಆಗಿತ್ತು. ಇದೀಗ ಮಳೆ ಹುಡುಗಿ ವಾಪಸಾಗಿರುವುದರಿಂದ ಚಿತ್ರತಂಡ ಮತ್ತೆ ಉತ್ಸುಕತೆ ತೋರಿದ್ದಾರೆ.['ಬಿಗ್ ಬಾಸ್-3' ಫೈನಲ್ ಗೆ ಎಂಟ್ರಿ ಪಡೆದ ಪೂಜಾ ಗಾಂಧಿ, ಆನಂದ್!]

Actress Pooja Gandhi Looking Forward to 'Dandupalya 2'

'ದಂಡು ಪಾಳ್ಯ 2' ಸಿನಿಮಾವನ್ನು ನಿರ್ದೇಶಕ ಶ್ರೀನಿವಾಸ್ ರಾಜು ಅವರು ನಿರ್ದೇಶನ ಮಾಡುತ್ತಿದ್ದು, ಈ ಹಿಂದೆ 'ದಂಡುಪಾಳ್ಯ' ಕ್ಕೂ ಅವರೇ ಆಕ್ಷನ್-ಕಟ್ ಹೇಳಿದ್ದರು. ಮೊದಲ ಭಾಗದಲ್ಲಿ ಚಿತ್ರಕ್ಕೆ ಕೆಲಸ ಮಾಡಿದ್ದ ತಾಂತ್ರಿಕ ತಂಡವೇ ಈ ಸಿನಿಮಾದಲ್ಲೂ ಕೆಲಸ ಮಾಡಲಿದೆ. ಇನ್ನು ಎಲ್ಲವೂ ಅಂದುಕೊಂಡಂತೆ ಭರಭರನೇ ನಡೆದರೆ ಸದ್ಯದಲ್ಲೇ ಸಿನಿಮಾ ಸೆಟ್ಟೇರಲಿದೆ.

English summary
Actress Pooja Gandhi is all set to feature in Srinivas Raju's next. The actress acted in the director's debut film, Dandupalya. After the movie got hit, the team with the producers Prashanth and Girish had then decided to make a sequel to the film, titled Dandupalya 2.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada