For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿಗೆ ಬರಲು ಹಾತೊರೆಯುತ್ತಿದ್ದಾರೆ ನಟಿ ಪ್ರಿಯಾಮಣಿ

  |

  ಬಹುಭಾಷಾ ನಟಿ ಪ್ರಿಯಾಮಣಿ ಕನ್ನಡತಿ ಎಂಬುದು ಗೊತ್ತಿರುವ ಸಂಗತಿಯೇ, ಆದರೆ ಅವರು ಕನ್ನಡಕ್ಕಿಂತಲೂ ಬೇರೆ ಭಾಷೆ ಸಿನಿಮಾಗಳಲ್ಲಿಯೇ ನಟಿಸಿದ್ದು ಹೆಚ್ಚು.

  ಇಂಥಾ ಟ್ಯಾಲೆಂಟ್ ಕೂಡಾ ಇದ್ಯಾ ಸಾಧು ಅವರಿಗೆ..? | Filmibeat Kannada

  ಈ ವರೆಗೆ ಒಂಬತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಪ್ರಿಯಾಮಣಿ ಹತ್ತನೇ ಕನ್ನಡದ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಲಾಕ್‌ಡೌನ್ ಆದ ಬಳಿಕ ಬಿಡುಗಡೆ ಆಗಲಿದೆ.

  2017 ರ ಆಗಸ್ಟ್‌ನಲ್ಲಿ ಪ್ರೇಮಿ ಮುಸ್ತಾಫಾ ರಾಜ್ ಅವರೊಂದಿಗೆ ವಿವಾಹವಾದ ಪ್ರಿಯಾಮಣಿ, ಸಿನಿಮಾದಿಂದ ದೂರಾಗುತ್ತಾರೆ ಎಂಬ ಆತಂಕವಿತ್ತು, ಆದರೆ ಹಾಗಾಗಲಿಲ್ಲ. ಬದಲಿಗೆ ಮೊದಲಿನಂತೆಯೇ ಸಿನಿಮಾಗಳಲ್ಲಿ ಬ್ಯುಸಿಯಾಗಿಯೇ ಇದ್ದಾರೆ.

  ಬೆಂಗಳೂರು ಪ್ರಿಯಾಮಣಿ ತವರು

  ಬೆಂಗಳೂರು ಪ್ರಿಯಾಮಣಿ ತವರು

  ನಟಿ ಪ್ರಿಯಾಮಣಿ ತವರು ಬೆಂಗಳೂರು. ಈ ನಗರದ ಮೇಲೆ ಅವರಿಗೆ ವಿಶೇಷ ಪ್ರೀತಿ. ಬೆಂಗಳೂರಿಗೆ ಬರಲು ಪ್ರಿಯಾಮಣಿ ಹಾತೊರೆಯುತ್ತಿದ್ದಾರಂತೆ. ಲಾಕ್‌ಡೌನ್ ಮುಗಿದ ಕೂಡಲೇ ಮೊದಲು ಬೆಂಗಳೂರಿಗೆ ಬರುತ್ತೇನೆ ಎಂದಿದ್ದಾರೆ ಪ್ರಿಯಾಮಣಿ.

  ಮದುವೆಯಾದ ಮೇಲೆ ಮುಂಬೈ ಸೇರಿರುವ ಪ್ರಿಯಾಮಣಿ

  ಮದುವೆಯಾದ ಮೇಲೆ ಮುಂಬೈ ಸೇರಿರುವ ಪ್ರಿಯಾಮಣಿ

  ಉದ್ಯಮಿ ಮುಸ್ತಾಫಾ ರಾಜ್ ಅವರನ್ನು ಮದುವೆಯಾದ ಮೇಲೆ ಮುಂಬೈ ಸೇರಿಬಿಟ್ಟಿರುವ ಪ್ರಿಯಾಮಣಿ, ಆಗಾಗ್ಗೆ ಶೂಟಿಂಗ್‌ ಗೆ ಮಾತ್ರವೇ ಬೆಂಗಳೂರಿಗೆ ಬರುತ್ತಿದ್ದರು. ಬೆಂಗಳೂರಿಗೆ ಬಂದು ಮೂರು ತಿಂಗಳಾಗಿದೆಯಂತೆ. ಪ್ರಿಯಾಮಣಿ ಅಪ್ಪ-ಅಮ್ಮ ಬೆಂಗಳೂರಿನಲ್ಲಿಯೇ ಇದ್ದಾರೆ.

  ಪ್ರಿಯಾಮಣಿ ಇರುವ ಏರಿಯಾ ಸೀಲ್‌ಡೌನ್

  ಪ್ರಿಯಾಮಣಿ ಇರುವ ಏರಿಯಾ ಸೀಲ್‌ಡೌನ್

  ಪ್ರಸ್ತುತ ಮುಂಬೈನಲ್ಲಿ ಪ್ರಿಯಾಮಣಿ ಇರುವ ಏರಿಯಾ ಪೂರ್ಣ ಸೀಲ್‌ಡೌನ್ ಆಗಿದೆಯಂತೆ. ದಿನಸಿಗಾಗಿ ಮಾತ್ರವೇ ಹೊರಗೆ ಹೋಗುತ್ತಿದ್ದೇವೆ. ಮನೆಯಲ್ಲಿ ಅತ್ತೆ ಅಡುಗೆ ಮಾಡುತ್ತಾರೆ, ಉಳಿದ ನಾವೆಲ್ಲರೂ ಮನೆಗೆಲಸವನ್ನು ಹಂಚಿಕೊಂಡು ಮಾಡುತ್ತೇವೆ. ಮನೆ ಬಿಟ್ಟರೆ ಎಲ್ಲೂ ಹೊರಗೆ ಹೋಗುತ್ತಿಲ್ಲ ಎಂದಿದ್ದಾರೆ ಪ್ರಿಯಾಮಣಿ.

  ಅಸುರನ್ ಸಿನಿಮಾದ ರೀಮೇಕ್‌ನಲ್ಲಿ ನಟಿಸುತ್ತಿದ್ದಾರೆ

  ಅಸುರನ್ ಸಿನಿಮಾದ ರೀಮೇಕ್‌ನಲ್ಲಿ ನಟಿಸುತ್ತಿದ್ದಾರೆ

  ಪ್ರಿಯಾಮಣಿ ಕೈಯಲ್ಲಿ ಎರಡು ತೆಲುಗು ಸಿನಿಮಾಗಳಿವೆ. ಅಸುರಸ್ ಸಿನಿಮಾದ ತೆಲುಗು ರೀಮೇಕ್‌ನಲ್ಲಿ ಪ್ರಿಯಾಮಣಿ ನಟಿಸುತ್ತಿದ್ದಾರೆ. ರಾಣಾದಗ್ಗುಬಾಟಿ ನಟನೆಯ ಸಿನಿಮಾದಲ್ಲೂ ಪಾತ್ರ ನಿರ್ವಹಿಸುತ್ತಿದ್ದಾರೆ. ಕನ್ನಡದಲ್ಲಿ ಪ್ರಿಯಾಮಣಿ ಅಭಿನಯದ ಡಾಕ್ಟರ್ 56 ಸಿನಿಮಾ ಬಿಡುಗಡೆ ಆಗಬೇಕಿದೆ. ಇದರ ಜೊತೆಗೆ ಹಲವು ರಿಯಾಲಿಟಿ ಶೋಗಳ ಜಡ್ಜ್ ಸಹ ಆಗಿದ್ದಾರೆ.

  English summary
  Actress Priyamani is eager to come to her home town Bengaluru. She said i will visit Bengaluru first after the lock down is over.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X