For Quick Alerts
  ALLOW NOTIFICATIONS  
  For Daily Alerts

  ಪ್ರೀತಿ ಮಾಡಿ ಮೋಸ ಮಾಡಿದ್ರಂತೆ ಆ ನಟಿ !

  By Pavithra
  |
  ಪ್ರೀತಿ ಹೆಸರಲ್ಲಿ ಧೋಕಾ ಕೊಟ್ಟ ಫೇಮಸ್ ನಟಿ ಯಾರು ಗೊತ್ತಾ ?? | FIlmibeat Kannada

  ನಟಿ ಪ್ರಿಯಾಂಕ ಚಿಂಚೊಳ್ಳಿ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. 'ಹರ ಹರ ಮಹಾದೇವಾ' ಧಾರಾವಾಹಿಯಲ್ಲಿ ತಮ್ಮ ಅಭಿನಯದ ಮೂಲಕವೇ ಸಾವಿರಾರು ಅಭಿಮಾನಿಗಳನ್ನ ಪಡೆದುಕೊಂಡ ಕಲಾವಿದೆ ಈಕೆ.

  ಇಷ್ಟು ದಿನ ಉತ್ತಮ ನಟಿ ಎಂದು ಎಲ್ಲರಿಂದಲೂ ಮೆಚ್ಚುಗೆಯನ್ನು ಪಡೆದುಕೊಂಡ ಪ್ರಿಯಾಂಕ ಚಿಂಚೊಳ್ಳಿ ಸದ್ಯ ಪ್ರೀತಿ ಮಾಡಿ ಮೋಸ ಮಾಡಿದ್ದಾರೆ ಎನ್ನುವ ಆರೋಪವನ್ನು ಎದುರಿಸುತ್ತಿದ್ದಾರೆ.

  'ರಾಧಾ ರಮಣ' ಧಾರಾವಾಹಿಯ ನಟನಿಗೆ ಕೂಡಿ ಬಂತು ಕಂಕಣಭಾಗ್ಯ'ರಾಧಾ ರಮಣ' ಧಾರಾವಾಹಿಯ ನಟನಿಗೆ ಕೂಡಿ ಬಂತು ಕಂಕಣಭಾಗ್ಯ

  ಸಾಕಷ್ಟು ದಿನಗಳಿಂದ ಪ್ರಿಯಾಂಕ ಜೊತೆಯಲ್ಲಿಯೇ ಇದ್ದ ಸ್ನೇಹಿತನೇ ಈ ಆರೋಪ ಮಾಡುತ್ತಿರುವುದು ಅನೇಕರಿಗೆ ಆಶ್ಚರ್ಯ ತರಿಸಿದೆ. ಹಾಗಾದ್ರೆ ಏನಿದು ಆರೋಪ? ಈ ವಿಚಾರಕ್ಕೆ ಪ್ರಿಯಾಂಕ ಹೇಳುವ ಉತ್ತರವೇನು? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

  ನಟಿ ಪ್ರಿಯಾಂಕ ಚಿಂಚೊಳ್ಳಿ

  ನಟಿ ಪ್ರಿಯಾಂಕ ಚಿಂಚೊಳ್ಳಿ

  ನಟಿ ಪ್ರಿಯಾಂಕ ಚಿಂಚೊಳ್ಳಿ ಕಿರುತೆರೆ ಹಾಗೂ ಬೆಳ್ಳಿ ತೆರೆಯ ನಾಯಕ ನಟಿ. ಹರಹರ ಮಹಾದೇವಾ ಧಾರಾವಾಹಿ ಸೇರಿದಂತೆ ಬಿಲ್ ಗೇಟ್ಸ್ ಸಿನಿಮಾದಲ್ಲಿಯೂ ನಾಯಕಿಯಾಗಿ ಅಭಿನಯ ಮಾಡಿದ್ದಾರೆ.

  ಏನಿದು ವಿವಾದ ?

  ಏನಿದು ವಿವಾದ ?

  ನಟಿ ಪ್ರಿಯಾಂಕ ಚಿಂಚೊಳ್ಳಿ ಅವರ ಸ್ನೇಹಿತನಾಗಿರುವ ಸಾಯಿ ರಾಮ್ ಎನ್ನುವವರನ್ನು ಪ್ರೀತಿ ಮಾಡಿ ಮದುವೆ ಆಗುವ ಭರವಸೆ ಕೊಟ್ಟಿದ್ದರಂತೆ. ಅದರ ಜೊತೆಗೆ ಸಾಯಿ ರಾಮ್ ಜೊತೆಯಲ್ಲಿ ಸಾಕಷ್ಟು ಕಡೆ ಪ್ರವಾಸವನ್ನು ಮಾಡಿದ್ದಾರಂತೆ. ಪ್ರಿಯಾಂಕ ಅವರ ತಾಯಿ ಕೂಡ ತಮ್ಮ ಮಗಳನ್ನು ನಿನಗೆ ಮದುವೆ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದ್ದರು ಎಂದು ಸಾಯಿ ರಾಮ್ ಆರೋಪ ಮಾಡಿದ್ದಾರೆ.

  ಹೊಸ ಪ್ರೀತಿಯಲ್ಲಿ ಪ್ರಿಯಾಂಕ

  ಹೊಸ ಪ್ರೀತಿಯಲ್ಲಿ ಪ್ರಿಯಾಂಕ

  ನಟಿ ಪ್ರಿಯಾಂಕ ಚಿಂಚೊಳ್ಳಿ ನನಗೆ ಗೊತ್ತಿಲ್ಲದ ರೀತಿಯಲ್ಲಿ ಕಿರುತೆರೆಯ ನಟ ಶಿಶೀರ್ ಶಾಸ್ತ್ರಿ ಜೊತೆಯಲ್ಲಿಯೂ ಪ್ರೀತಿಯಲ್ಲಿದ್ದಾರೆ. ನನಗೆ ಮೋಸ ಮಾಡಿದ್ದಾರೆ ಎಂದೂ ಸಾಯಿ ರಾಮ್ ಆರೋಪಿಸಿದ್ದಾರೆ.

  ಆರೋಪವನ್ನು ಸುಳ್ಳು ಎಂದ ನಟಿ

  ಆರೋಪವನ್ನು ಸುಳ್ಳು ಎಂದ ನಟಿ

  ನಟಿ ಪ್ರಿಯಾಂಕ ಸಾಯಿ ರಾಮ್ ನನ್ನ ಸ್ನೇಹಿತ ಆದರೆ ಅವರು ಮಾಡುತ್ತಿರುವ ಆರೋಪ ಸುಳ್ಳು ಎಂದಿದ್ದಾರೆ. ದುರುದ್ದೇಶದಿಂದ ಈ ರೀತಿ ಮಾಡುತ್ತಿದ್ದಾರೆ ನನ್ನನ್ನು ಪ್ರೀತಿ ಮಾಡುವವರಿಗೆ ನಾನು ಏನು ಎನ್ನುವುದು ಗೊತ್ತಿದೆ ಎಂದಿದ್ದಾರೆ.

  English summary
  Kannada actress Priyanka has been accused of cheating. Priyanka Chincholi Hara Hara Mahadeva serial actress

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X