»   » ಉಪ್ಪಿಗೆ ಸವಾಲೆಸೆಯಲು ಸಜ್ಜಾದ ಮುದ್ದು ಮಡದಿ ಪ್ರಿಯಾಂಕ

ಉಪ್ಪಿಗೆ ಸವಾಲೆಸೆಯಲು ಸಜ್ಜಾದ ಮುದ್ದು ಮಡದಿ ಪ್ರಿಯಾಂಕ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರು ಒಬ್ಬ ವಿಭಿನ್ನ ನಟ ಕಮ್ ನಿರ್ದೇಶಕ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಈ ಅದ್ಭುತ ನಿರ್ದೇಶಕನಿಗೆ ಒಂದು ಸಿನಿಮಾ ಮಾಡಲು ನಟಿ ಕಮ್ ನಿರ್ಮಾಪಕಿ ಪ್ರಿಯಾಂಕ ಉಪೇಂದ್ರ ಎಲ್ಲಾ ತಯಾರಿ ನಡೆಸುತ್ತಿದ್ದಾರೆ.

ಇದೀಗ ಉಪ್ಪಿ ಅವರಿಗೆ ಆಕ್ಷನ್-ಕಟ್ ಹೇಳುವ ಮೂಲಕ ಪತ್ನಿ ಪ್ರಿಯಾಂಕ ಉಪೇಂದ್ರ ಅವರು ಉಪ್ಪಿ ಅವರಿಗೆ ಸವಾಲು ಒಡ್ಡಲು ಸಜ್ಜಾಗಿ ನಿಂತಿದ್ದಾರೆ. ಸದ್ಯಕ್ಕೆ ಸ್ಕ್ರಿಪ್ಟ್ ಕೂಡ ರೆಡಿ ಮಾಡಿದ್ದಾರಂತೆ.[ತಮ್ಮ ಮನದನ್ನೆ 'ಪ್ರಿಯಾಂಕ' ಬಗ್ಗೆ ರಿಯಲ್ ಉಪ್ಪಿ ಏನಂದ್ರು?]

Actress Priyanka Upendra will be direct a movie for Upendra

ಹೌದು ರಿಯಲ್ ಸ್ಟಾರ್ ಉಪ್ಪಿ ಅವರ ಚಿತ್ರಕ್ಕೆ ನಿರ್ದೇಶನ ಮಾಡೋದು ನಟಿ ಕಮ್ ನಿರ್ಮಾಪಕಿ ಪ್ರಿಯಾಂಕ ಉಪೇಂದ್ರ ಅವರ ಕನಸಂತೆ. ಅದಕ್ಕಾಗಿ ಈಗಾಗಲೇ ಎಲ್ಲಾ ತಯಾರಿ ನಡೆಸಿದ್ದು, ತಮ್ಮ ಕನಸನ್ನು ನನಸಾಗಿಸಲು ರೆಡಿಯಾಗಿದ್ದಾರೆ.['ಕೆಂಗುಲಾಬಿ' 'ಪ್ರಿಯಾಂಕ' ವಿಮರ್ಶಕರಿಗೆ ಇಷ್ಟ ಆದ್ಲಾ?]

ಈಗಾಗಲೇ ರೆಡಿ ಮಾಡಿರುವ ಕಥೆ ರಿಯಲ್ ಉಪ್ಪಿ ಅವರಿಗೆ ಹೇಳಿ ಮಾಡಿಸಿದಂತಿದೆ. ಚಿತ್ರದ ನಿರ್ಮಾಣ ನಮ್ಮದೇ ಹೋಮ್ ಬ್ಯಾನರ್ ಅಡಿಯಲ್ಲಿ ಮೂಡಿಬರಲಿದೆ. ಆದಷ್ಟು ಬೇಗನೇ ಸಿನಿಮಾ ಮಾಡುವ ಪ್ಲ್ಯಾನ್ ಮಾಡಿದ್ದೇವೆ ಎಂದು ನಟಿ ಪ್ರಿಯಾಂಕ ನುಡಿದಿದ್ದಾರೆ.

ಉಪೇಂದ್ರ ಅವರ 'ಉಪ್ಪಿ 2' ಚಿತ್ರಕ್ಕೆ ಬಂಡವಾಳ ಹೂಡಿದ್ದ ನಟಿ ಕಮ್ ನಿರ್ಮಾಪಕಿ ಪ್ರಿಯಾಂಕ ಉಪೇಂದ್ರ ಅವರು ಇದೀಗ ಹೊಸದಾಗಿ ತಮ್ಮ ಮುದ್ದಿನ ಪತಿಗೆ ಆಕ್ಷನ್-ಕಟ್ ಹೇಳಲು ತಯಾರಿ ನಡೆಸಿದ್ದಾರೆ.[ಪತ್ನಿಯ ಹುಟ್ಟುಹಬ್ಬಕ್ಕೆ ಬಿಗ್ ಸರ್ ಪ್ರೈಸ್ ನೀಡಿದ ಉಪ್ಪಿ!]

'H2O' ಸಿನಿಮಾದಲ್ಲಿ ಒಂದಾಗಿದ್ದ ಈ ಸುಂದರ ಜೋಡಿಯನ್ನು ತೆರೆ ಮೇಲೆ ಅಭಿಮಾನಿಗಳು ಇಷ್ಟಪಟ್ಟಿದ್ದರು. ಇದೀಗ ಮತ್ತೆ ದಂಪತಿಗಳಿಬ್ಬರು ಹೊಸ ಸಾಹಸಕ್ಕೆ ಕೈ ಹಾಕಿರುವುದರಿಂದ ಹೊಸ ಪ್ರಯತ್ನ ಹೇಗಿರಬಹುದು ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಸ್ವಲ್ಪ ಜಾಸ್ತಿ ಇದೆ.

English summary
Kannada Actress-Producer Priyanka Upendra will be direct a movie for her husbend Real Star Upendra.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X