For Quick Alerts
  ALLOW NOTIFICATIONS  
  For Daily Alerts

  ಡ್ರಗ್ಸ್ ಬಗ್ಗೆ ಕೇಳುತ್ತಿದ್ದಂತೆ ಉರಿದುಬಿದ್ದ ನಟಿ ರಚಿತಾ ರಾಮ್

  By ಫಿಲ್ಮ್ ಡೆಸ್ಕ್
  |

  ಸ್ಯಾಂಡಲ್ ವುಡ್ ನಟ-ನಟಿಯರು ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿದ್ದಾರೆ ಎನ್ನುವ ವಿಚಾರ ಜೋರಾಗಿ ಚರ್ಚೆಯಾಗುತ್ತಿದೆ. ಚಂದನವನಕ್ಕೂ ನಶೆಯ ನಂಟಿದೆಯಾ? ಎಂದು ಕೇಳಿದ್ದಕ್ಕೆ ನಟಿ ರಚಿತಾ ರಾಮ್ ಫುಲ್ ಗರಂ ಆಗಿದ್ದಾರೆ. ನನಗೆ ಗೊತ್ತಿದ್ದರೂ, ನೋಡಿದ್ದರೂ ಅದು ನನಗೆ ಬೇಡವಾದ ವಿಷಯ ಎಂದು ಸಿಟ್ಟಾಗಿದ್ದಾರೆ.

  ಡ್ರಗ್ಸ್ ಬಗ್ಗೆ ಕೇಳಿದ್ದಕ್ಕೆ ರಚಿತಾ ರಾಮ್ ಫುಲ್ ಗರಂ | Filmibeat Kannada

  ಇತ್ತೀಚಿಗೆ ಸಿನಿಮಾ ಪ್ರೆಸ್ ಮೀಟ್ ನಲ್ಲಿ ಭಾಗಿಯಾಗಿದ್ದ ರಚಿತಾಗೆ, ಮಾಧ್ಯಮದವರು ಡ್ರಗ್ ಮಾಫಿಯಾದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದರಿಂದ ಕೆರಳಿದ ರಚಿತಾ, 'ನಾನು ಟಿವಿ ನೋಡುವುದಿಲ್ಲ, ನನ್ನ ತಲೆಯಲ್ಲಿ ಕೋವಿಡ್, ಲಾಕ್ ಡೌನ್, ಈಗ ಸಿನಿಮಾಗಳು ಬಿಟ್ಟರೆ ಬೇರೇನೂ ಇಲ್ಲ' ಎಂದಿದ್ದಾರೆ. ಮುಂದೆ ಓದಿ...

  ವಾಮ ಮಾರ್ಗದಲ್ಲಿ ಗೆದ್ದವರೇ ನಶೆಯ ದಾಸರಾಗಿದ್ದಾರೆ, ಅವರನ್ನು ಬೆತ್ತಲೆ ಮಾಡಿ: ನಟ ಜಗ್ಗೇಶ್ವಾಮ ಮಾರ್ಗದಲ್ಲಿ ಗೆದ್ದವರೇ ನಶೆಯ ದಾಸರಾಗಿದ್ದಾರೆ, ಅವರನ್ನು ಬೆತ್ತಲೆ ಮಾಡಿ: ನಟ ಜಗ್ಗೇಶ್

  ರಚಿತಾ ರಾಮ್ ಪ್ರತಿಕ್ರಿಯೆ

  ರಚಿತಾ ರಾಮ್ ಪ್ರತಿಕ್ರಿಯೆ

  ಸ್ಯಾಂಡಲ್ ವುಡ್ ಡ್ರಗ್ ನಂಟಿನ ಬಗ್ಗೆ ರಚಿತಾ, "ಯಾರೋ ಮಾಡ್ತಾರೆ ಅಂತ ನಾನು ಯಾಕೆ ಆ ಬಗ್ಗೆ ಕಾಮೆಂಟ್ ಮಾಡಬೇಕು, ನನಗೆ ಅದು ಗೊತ್ತಿಲ್ಲದೆ ಇರುವ ವಿಷಯ, ನನಗೆ ಅದು ಬೇಡದೇ ಇರುವ ವಿಷಯ, ಬೇಡದೆ ಇರುವ ವಿಷಯದ ಬಗ್ಗೆ ನಾನು ಮಾತನಾಡುವುದಿಲ್ಲ" ಎಂದಿದ್ದಾರೆ.

  'ನಾನು ಭಾಗಿಯಾಗಿದ್ದರೆ ಮಾತನಾಡುತ್ತಿದ್ದೆ...'

  'ನಾನು ಭಾಗಿಯಾಗಿದ್ದರೆ ಮಾತನಾಡುತ್ತಿದ್ದೆ...'

  ಹಾಗಾದರೆ ಸ್ಯಾಂಡಲ್ ವುಡ್ ನಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಮಾಹಿತಿ ಇಲ್ಲವಾ? ಎಂದು ಪತ್ರಕರ್ತರು ಕೇಳಿದ್ದಕ್ಕೆ, "ನಾನು ಇದರಲ್ಲಿ ಭಾಗಿಯಾಗಿದ್ದರೆ ಮಾತನಾಡುತ್ತಿದ್ದೆ, ನನಗೆ ಬೇಡದೆ ಇರುವ ವಿಷಯದ ಬಗ್ಗೆ ನಾನು ಮಾತನಾಡಲ್ಲ, ಬೇಡದೆ ಇರುವ ಪ್ರಶ್ನೆ ಕೇಳಿದರೆ ಯಾರು ಕೂಡ ಉತ್ತರಿಸಲ್ಲ" ಎಂದು ಮಾಧ್ಯಮದವರ ಮೇಲೆ ಸಿಟ್ಟಾಗಿದ್ದಾರೆ.

  ಡ್ರಗ್ಸ್ ಪ್ರಕರಣ: ಮಾಧ್ಯಮಗಳ ಮೇಲೆ ರಾಗಿಣಿ ಮುನಿಸುಡ್ರಗ್ಸ್ ಪ್ರಕರಣ: ಮಾಧ್ಯಮಗಳ ಮೇಲೆ ರಾಗಿಣಿ ಮುನಿಸು

  ನನಗೆ ಗೊತ್ತಿದ್ದರೂ ಅದು ನನಗೆ ಬೇಡವಾದ ವಿಷಯ

  ನನಗೆ ಗೊತ್ತಿದ್ದರೂ ಅದು ನನಗೆ ಬೇಡವಾದ ವಿಷಯ

  "ನನ್ನ ಸಂಬಂಧವಾಗಿ ಏನಾದರೂ ಇದ್ದರೆ ಮಾತ್ರ ನಾನು ಮಾತನಾಡುತ್ತೇನೆ. ಬೇಡದೆ ಇರುವ ವಿಚಾರ ಏನೇ ಇದ್ದರು ನಾನು ಕಾಮೆಂಟ್ ಮಾಡಲ್ಲ. ನನಗೆ ಗೊತ್ತಿದ್ದರೂ, ನೋಡಿದ್ದರೂ ಅದು ನನಗೆ ಬೇಡವಾದ ವಿಷಯ. ನೆಗೆಟಿವ್ ಸುದ್ದಿಗಳ ಬಗ್ಗೆ ತಲೆ ಕೂಡ ಹಾಕಲ್ಲ, ಅದು ನನಗೆ ಸಂಬಂಧಿಸಿದ ಸುದ್ದಿ ಆದರೂ ನಾನು ನೋಡಲ್ಲ. ನನಗೆ ತುಂಬಾ ಕೆಲಸವಿದೆ. ಬೇರೆಯವರು ಯಾರೋ ಏನೋ ಮಾಡ್ತಿದ್ದಾರೆ ಅಂದರೆ ನಾನು ಯಾಕೆ ಭಾಗಿಯಾಗಬೇಕು. ಅವರ ಹಣೆಬರಹ ಅವರು ನೋಡಿಕೊಳ್ಳುತ್ತಾರೆ." ಎಂದಿದ್ದಾರೆ.

  ಸ್ಯಾಂಡಲ್ ವುಡ್ ಗೆ ಡ್ರಗ್ ನಂಟು: ಯುವ ನಟನ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್ಸ್ಯಾಂಡಲ್ ವುಡ್ ಗೆ ಡ್ರಗ್ ನಂಟು: ಯುವ ನಟನ ಸಾವಿನ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಇಂದ್ರಜಿತ್ ಲಂಕೇಶ್

  'ಕಸ್ತೂರಿ ನಿವಾಸ' ಸಿನಿಮಾದಲ್ಲಿ ರಚಿತಾ

  'ಕಸ್ತೂರಿ ನಿವಾಸ' ಸಿನಿಮಾದಲ್ಲಿ ರಚಿತಾ

  ರಚಿತಾ ರಾಮ್ ಅಭಿನಯದ ಹೊಸ ಸಿನಿಮಾಗೆ ಕಸ್ತೂರಿ ನಿವಾಸ ಎಂದು ಟೈಟಲ್ ಇಡಲಾಗಿದೆ. ಈ ಸಿನಿಮಾದ ಟೈಟಲ್ ಲಾಂಚ್ ಕಾರ್ಯಕ್ರಮದಲ್ಲಿ ರಚಿತಾ ಭಾಗಿಯಾಗಿದ್ದರು. ಅಣ್ಣಾವ್ರ ಸಿನಿಮಾ ಹೆಸರನ್ನೇ ರಚಿತಾ ರಾಮ್ ಸಿನಿಮಾಗೂ ಇಟ್ಟಿರುವುದು ಅಚ್ಚರಿ ಮೂಡಿಸಿತ್ತು. ಆದರೆ ಅಣ್ಣಾವ್ರ ಅಭಿಮಾನಿಗಳ ಮನವಿಯ ಮೇರೆಗೆ 'ಕಸ್ತೂರಿ ನಿವಾಸ' ಹೆಸರನ್ನು ಬದಲಾಯಿಸಲಾಗಿದೆಯಂತೆ. ಚಿತ್ರಕ್ಕೆ ಸದ್ಯ 'ಕಸ್ತೂರಿ' ಎಂದು ಟೈಟಲ್ ಇಡಲಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ.

  English summary
  Actress Rachita Ram reaction about Drug Mafia in Sandalwood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X