For Quick Alerts
  ALLOW NOTIFICATIONS  
  For Daily Alerts

  ಹೊಸ ಫೋಟೋ ಹಂಚಿಕೊಂಡ ರಚಿತಾ ರಾಮ್: ಬ್ರೇಕ್ ಯಾಕೆಂದು ಪ್ರಶ್ನೆ!

  |

  ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್, ನಟಿ ರಚಿತಾ ರಾಮ್‌ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಮೂಲಕ ತಮ್ಮ ಆಭಿಮಾನಿಗಳಿಗೆ ಹತ್ತಿವಾಗಿರುತ್ತಾರೆ. ರಚಿತಾ ಇನ್‌ಸ್ಟಾಗ್ರಾಂನಲ್ಲಿ 2 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದಾರೆ.

  ಆದರೆ, ಇತ್ತೀಚೆಗೆ ರಚ್ಚುಳನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ರಚಿತಾ ರಾಮ್ ಸಿನಿಮಾಗಳು ರಿಲೀಸ್ ಆಗ್ತಿಲ್ಲ. ಇನ್ನೂ ಸೋಶಿಯಲ್ ಮೀಡಿಯಾದಲ್ಲೂ ಕೂಡ ರಚಿತಾ ರಾಮ್‌ ಅಷ್ಟಾಗಿ ಆ್ಯಕ್ಟಿವ್ ಆಗಿಲ್ಲ.‌ ಹಾಗಾಗಿ ಅಭಿಮಾನಿಗಳು 'ರಚಿತಾ ಎಲ್ಲಿ ಹೋದಿರಿ?' ಎಂದು ಪ್ರಶ್ನೆ ಮಾಡುತ್ತಿದ್ದಾರೆ.

  'ಕ್ರಾಂತಿ'ಗಾಗಿ ಪೋಲ್ಯಾಂಡ್‌ಗೆ ಹಾರಿದ ದರ್ಶನ್, ರಚಿತಾ ರಾಮ್'ಕ್ರಾಂತಿ'ಗಾಗಿ ಪೋಲ್ಯಾಂಡ್‌ಗೆ ಹಾರಿದ ದರ್ಶನ್, ರಚಿತಾ ರಾಮ್

  ಈಗ ರಚಿತಾ ರಾಮ್ ಹೊಸ ಫೋಟೊ ಹಂಚಿಕೊಂಡಿದ್ದಾರೆ. ಹಲವು ದಿನಗಳ ಬಳಿಕ ರಚಿತಾ ರಾಮ್ ಸೋಶಿಯಲ್‌ ಮೀಡಿಯಾದಲ್ಲಿ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಕಪ್ಪು ಬಣ್ಣದ ಡ್ರೆಸ್ ತೊಟ್ಡು ಮಿಂಚಿದ್ದಾರೆ. ಈ ಫೋಟೊಗೆ ಕಮೆಂಟ್ ಮಾಡಿರುವ‌ ಜನ ಯಾಕೆ ಸೋಶಿಯಲ್ ಮೀಡಿಯಾದಿಂದ ಬ್ರೇಕ್ ತೆಗೆದುಕೊಂಡಿರಿ? ಎಂದು ಕೇಳುತ್ತಿದ್ದಾರೆ.

  'ಮಾನ್ಸೂನ್ ರಾಗ', 'ವೀರಂ', 'ಮಾರ್ಟಿನ್', 'ಬ್ಯಾಡ್ ಮ್ಯಾನರ್ಸ್‌', 'ಶಬರಿ ಸರ್ಚಿಂಗ್ ಫಾರ್ ರಾವಣ್ಣ', 'ಲವ್ ಮಿ ಆರ್‌ ಹೇಟ್‌ ಮಿ', 'ರವಿ ಬೊಪ್ಪಣ್ಣ' ಮತ್ತು 'ಕ್ರಾಂತಿ' ಸಿನಿಮಾದ ಚಿತ್ರೀಕರಣದಲ್ಲಿ ರಚ್ಚು ಬ್ಯುಸಿಯಾಗಿದ್ದಾರೆ

  'ಕ್ರಾಂತಿ' ಸಿನಿಮಾ ಚಿತ್ರೀಕರಣಕ್ಕೆಂದು ಕೆಲವು ದಿನಗಳ ಕಾಲ ರಚಿತಾ ರಾಮ್ ವಿದೇಶಕ್ಕೆ ಪ್ರಯಾಣ ಮಾಡಿದ್ದರು. ಅಲ್ಲಿಂದ ಹೊರಡುತ್ತಿರುವ ಮಾಹಿತಿ ಹೊರತು ಪಡಿಸಿ ಏನೂ ಹಂಚಿಕೊಂಡಿಲ್ಲ.

  2021ರಲ್ಲಿ '100' ಮತ್ತು 'ಲವ್‌ ಯು ರಚ್ಚು' ಸಿನಿಮಾ ಬಿಡುಗಡೆ ಆದ ನಂತರ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ರಾಮಾ ಜ್ಯೂನಿಯರ್ಸ್‌ನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  2022ರಲ್ಲಿ ತೆಲುಗು ಸಿನಿಮಾ 'ಸೂಪರ್ ಮಚ್ಚಿ' ಮತ್ತು ಪ್ರೇಮ್ ನಿರ್ದೇಶನ 'ಏಕ್ ಲವ್ ಯಾ' ಸಿನಿಮಾ ರಿಲೀಸ್ ಆಯ್ತು. ಇದಾದ ಮೇಲೆ ಬ್ಯಾಕ್ ಟು ಬ್ಯಾಕ್ ಬಿಗ್ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡಿದ್ದಾರೆ.

  Recommended Video

  ಕ್ರಾಂತಿ ಪ್ರಮೋಷನ್ ಅಭಿಮಾನಿಗಳು ಹೇಗೆ ಮಾಡ್ತಿದ್ದಾರೆ ನೋಡಿ | #challengingstardarshan | Filmibeat Kannada

  English summary
  Actress Rachita Ram Shared New Photo, Fans Upset With Her Break From Social Media, know more,
  Monday, July 18, 2022, 8:14
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X