»   » ದರ್ಶನ್-ಸುದೀಪ್ ಬಗ್ಗೆ ಮನ ಬಿಚ್ಚಿ ಮಾತನಾಡಿದ ರಚಿತಾ ರಾಮ್

ದರ್ಶನ್-ಸುದೀಪ್ ಬಗ್ಗೆ ಮನ ಬಿಚ್ಚಿ ಮಾತನಾಡಿದ ರಚಿತಾ ರಾಮ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್, ಬುಲ್ ಬುಲ್ ಬೆಡಗಿ ರಚಿತಾ ರಾಮ್, ಕನ್ನಡದ ಟಾಪ್ ಮೋಸ್ಟ್ ನಟರ ಬಗ್ಗೆ ಮಾತನಾಡಿದ್ದಾರೆ. ದರ್ಶನ್, ಸುದೀಪ್, ಪುನೀತ್ ರಾಜ್ ಕುಮಾರ್ ಸಿನಿಮಾಗಳಲ್ಲಿ ಅಭಿನಯಿಸಿರುವ ರಚಿತಾ ಈಗ ಅವರ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ಬುಲ್ ಬುಲ್' ಚಿತ್ರದ ಮೂಲಕ ಎಂಟ್ರಿ ಕೊಟ್ಟ ರಚಿತಾ ರಾಮ್, ಸುದೀಪ್ ಅಭಿನಯದ 'ರನ್ನ', ಪುನೀತ್ ಅಭಿನಯದ 'ಚಕ್ರವ್ಯೂಹ', ಶ್ರೀಮುರಳಿಯ 'ರಥಾವರ' ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.[ಸ್ನೇಹದ ಕಡಲಲ್ಲಿ ತೇಲುತ್ತಿದ್ದ ಕುಚ್ಚಿಕ್ಕೂ ಗೆಳೆಯರ 'ಕಿಚ್ಚಿ'ನ ಕಹಾನಿ]

ತಮ್ಮ 3 ವರ್ಷಗಳ ಯಶಸ್ವಿ ಜರ್ನಿಯಲ್ಲಿ ಕನ್ನಡದ ದೊಡ್ಡ ನಟರ ಲಕ್ಕಿ ನಾಯಕಿ ಎನಿಸಿಕೊಂಡಿರುವ ರಚಿತಾ ರಾಮ್ ಬಿಗ್ ಸ್ಟಾರ್ ಗಳ ಬಗ್ಗೆ ಏನ್ ಹೇಳಿದ್ರು ಅಂತ ಮುಂದೆ ಓದಿ....

ದರ್ಶನ್ ನನಗೆ 'ಗಾಡ್ ಫಾದರ್'!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ರಚಿತಾ ರಾಮ್ ಅವರಿಗೆ 'ಗಾಡ್ ಫಾದರ್' ಅಂತೆ. ಇದನ್ನ ಸ್ವತಃ ರಚಿತಾ ಅವರೇ ಹೇಳಿಕೊಂಡಿದ್ದಾರೆ.[ಕಿಚ್ಚ ಸುದೀಪ್ ಹೇಳಿದ್ದೊಂದು, ಆಗಿದ್ದು ಇನ್ನೊಂದು, ಈಗ ನಡೀತಾಯಿರೋದು ಮತ್ತೊಂದು.! ]

ದರ್ಶನ್ ಅವರ ಬಗ್ಗೆ ರಚಿತಾ ಹೇಳಿದ್ದೇನು?

''ಬಿಂದ್ಯಾ ಆಗಿದ್ದ ನನ್ನ ರಚಿತಾ ರಾಮ್ ಗೆ ತಂದಿದ್ದೇ ಅವರು. ಅವರ ಬಗ್ಗೆ ಏನೇ ಮಾತನಾಡಿದ್ರು ಕಡಿಮೆನೇ. ದರ್ಶನ್ ಅವರು ನನಗೆ ಒಂಥರಾ 'ಗಾಡ್ ಫಾದರ್'. ಇಂಡಸ್ಟ್ರಿಯಲ್ಲಿ ಇರುವವರೆಗೂ ನಾನು ಆ ಮಾತು ಹೇಳಲ್ಲ. ಸಾಯೋವರೆಗೂ ನಾನು ಆ ಮಾತು ಹೇಳ್ತಿನಿ. ಅವರ ಬಗ್ಗೆ ಅವರ ಫ್ಯಾಮಿಲಿ ಬಗ್ಗೆ ನನಗೆ ದೊಡ್ಡ ಗೌರವವಿದೆ''-ರಚಿತಾ ರಾಮ್

ಸುದೀಪ್ ಅವರು 'ನನಗೆ ಸ್ಪೂರ್ತಿ'!

ಕಿಚ್ಚ ಸುದೀಪ್ ಅವರ 'ನನಗೆ ಸ್ಪೂರ್ತಿ' ಎಂದು ರನ್ನನ ರಾಣಿ ರಚಿತಾ ರಾಮ್ ಹೇಳಿಕೊಂಡಿದ್ದಾರೆ.[ದರ್ಶನ್ ವಿಚಾರದಲ್ಲಿ 'ಡೆಡ್ಲಿ ಆದಿತ್ಯ' ಟಾಂಗ್ ಕೊಟ್ಟಿದ್ದು ಯಾರಿಗೆ?]

ರನ್ನನ ಬಗ್ಗೆ ರಚಿತಾ ಹೇಳಿದ್ದೇನು?

''ಸುದೀಪ್ ಅವರ ಫರ್ಫಾಮೆನ್ಸ್, ಅವರ ನಡವಳಿಕೆ ಎಲ್ಲವೂ ನನಗೆ ಇಷ್ಟ. ಅವರು ಪಾತ್ರದೊಳಗೆ ಆವರಿಸಿಕೊಳ್ಳುವ ರೀತಿ ನಮಗೆ ಸ್ಪೂರ್ತಿ. ನನ್ನ ಶೂಟಿಂಗ್ ಮುಗಿದರು ಅವರ ಫರ್ಫಾಮೆನ್ಸ್ ನೋಡ್ತಿನಿ, ನಿಜವಾಗಲೂ ನನಗೆ ಅವರು ಸ್ಪೂರ್ತಿ''-ರಚಿತಾ ರಾಮ್[ಕಿಚ್ಚ-ದಚ್ಚು ಬಿರುಕಿನ ರಹಸ್ಯ ಸ್ಫೋಟಿಸಿದ ಸುದೀಪ್ ಸಾಂಸ್ಕೃತಿಕ ಪರಿಷತ್ತು: ಇದು ನಿಜವೇ.?]

ಯಶ್ ಬಗ್ಗೆ ಡಿಂಪಲ್ ಕ್ವೀನ್ ಅಭಿಪ್ರಾಯ!

''ಯಶ್, ಜೊತೆ ಇನ್ನು ಯಾವುದೇ ಸಿನಿಮಾ ಮಾಡಿಲ್ಲ. ಆದ್ರೆ, ಒಬ್ಬ ಆಡಿಯೆನ್ ಆಗಿ ನೋಡಿದ್ರೆ, ಅವರು ಸಿನಿಮಾಗಾಗಿ ತುಂಬಾ ಡೆಡಿಕೇಟೀವ್ . ಸಿನಿಮಾನ ತುಂಬಾ ಪ್ರೀತಿಸ್ತಾರೆ''-ರಚಿತಾ ರಾಮ್[ದರ್ಶನ್ ಒಡಲೊಳಗಿಂದ ದಿಢೀರ್ ಅಂತ ಸಿಡಿದ ಐದು ಸಿಡಿಗುಂಡುಗಳಿವು.!]

ಪುನೀತ್ ಬಗ್ಗೆ ಬುಲ್ ಬುಲ್ ಹೇಳಿದ್ದು?

''ಅದ್ಭುತವಾದ ಮನಸ್ಸುಳ್ಳ ವ್ಯಕ್ತಿ, ತುಂಬಾ ಸರಳ ವ್ಯಕ್ತಿತ್ವ. ಡಾ.ರಾಜ್ ಕುಮಾರ್ ಅಂತಹ ದೊಡ್ಡ ನಟರ ಮಗ ಎಂಬ ದೊಡ್ಡಸ್ಥಿಕೆ ಅವರ ಬಳಿಯಿಲ್ಲ. ದೂರದಿಂದ ನೋಡಿದಾಗ ಹಾಗೆ ಅನಿಸಿದ್ರೂ, ಅವರನ್ನ ಹತ್ತಿರದಿಂದ ನೋಡಿದಾಗಲೆ ಗೊತ್ತಾಗುವುದು ಅವರು ಎಷ್ಟು ಸರಳ ವ್ಯಕ್ತಿತ್ವ''-ರಚಿತಾ ರಾಮ್[ದರ್ಶನ್-ಸುದೀಪ್ ಸ್ನೇಹ ಸಮರದ ಮಧ್ಯೆ ಶ್ರೀಮುರಳಿ 'ಉಗ್ರ'ಪ್ರತಾಪ!]

ಉಪೇಂದ್ರ ಅವರ ಬಗ್ಗೆ!

''ತುಂಬಾ ಸರಳ, ಸಜ್ಜನ ವ್ಯಕ್ತಿ ಉಪೇಂದ್ರ ಅವರು'' ಎಂದು ಚಂದನವನದ ಚೆಲುವೆ ರಿಯಲ್ ಸ್ಟಾರ್ ಬಗ್ಗೆ ಒಂದೇ ವಾಕ್ಯದಲ್ಲಿ ಹೇಳಿದ್ದಾರೆ. ಸದ್ಯ, ಉಪ್ಪಿ ಜೊತೆ ರಚಿತಾ ರಾಮ್ ಎರಡು ಹೊಸ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ'.(ರಚಿತಾ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ)

English summary
Kannada Actress Rachith Ram Talk About Kannada Stars Like Darshan, Sudeep, Yash, Upendra. here is the details.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada