»   » ವೆರೈಟಿ ಅವತಾರಗಳಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ

ವೆರೈಟಿ ಅವತಾರಗಳಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ

By: ಜೀವನರಸಿಕ
Subscribe to Filmibeat Kannada

ರಾಧಿಕಾ ಕುಮಾರಸ್ವಾಮಿ ಅನ್ನೋ ಹೆಸರು ಕನ್ನಡ ಚಿತ್ರರಂಗದಿಂದ ಮರೆತೇ ಹೋಗಿ ನಾಲ್ಕಾರು ವರ್ಷಗಳಾಗಿತ್ತು. ಸಿನಿಮಾದಿಂದ ದೂರವಾಗಿ ಸಂಸಾರ ಮಗು ಅಂತ ಕಾಲ ಕಳೆದ ರಾಧಿಕ ಅದ್ಭುತವಾಗಿ ಕಂಬ್ಯಾಕ್ ಮಾಡೋ ಪ್ರಯತ್ನ ಮಾಡಿದ್ರು. ರಾಧಿಕಾ ಸಿನಿಮಾ ಗೆಲ್ಲಲಿಲ್ಲ, ಆದರೆ ಮತ್ತೆ ಚಿತ್ರರಂಗದ ಗಮನಸೆಳೆದರು.

ಮದುವೆಯಾದ್ರು ಬಿಡಿ ಇನ್ನೇನಿದ್ರೂ ಅಕ್ಕ ಅಮ್ಮನ ಪಾತ್ರಗಳೇ. ಮಕ್ಕಳನ್ನ ಸಾಕ್ತಾ ದೇಹತೂಕ ಜಾಸ್ತಿ ಮಾಡ್ಕೊಂಡು ಉಳ್ಕೋತಾರೆ ಅಂದ್ರೆ ರಾಧಿಕಾ ಕುಮಾರಸ್ವಾಮಿ ನಾಲ್ಕು ವರ್ಷಗಳ ಹಿಂದೆ ಹೇಗಿದ್ರೋ ಈಗಲೇ ಹಾಗೆ ಇದ್ದಾರೆ. ರಾಧಿಕಾ ಒಂದು ಮಗುವಿನ ತಾಯಿ ಅಂತ ಯಾರು ನಂಬೋಕಾಗಲ್ಲ.

ತಮ್ಮ ಸೌಂದರ್ಯವನ್ನ ಕಾಪಾಡಿಕೊಳ್ಳೋದ್ರಲ್ಲಿ ರಾಧಿಕಾ ಹೆಚ್ಚು ಕಾಳಜಿ ವಹಿಸಿದ್ದಾರೆ. ಪರಭಾಷಾ ಹುಡುಗಿಯರೇ ಚಂದ, ಬಾಂಬೆ ಬೆಡಗಿಯರು ಸೂಪರ್, ಡೆಲ್ಲಿ ಬ್ಯೂಟಿಗಳು ಸಖತ್ ಕಲರ್ ಅಂತಿದ್ದವರಿಗೆ ಶಾಕ್ ಕೊಡುವಂತಹಾ ಅಭಿನಯ ನೀಡಿದ ಚೆಲುವೆ ಈ ಕರಾವಳಿಯ ಬ್ಯೂಟಿ. [ನಟಿ ರಾಧಿಕಾ ಕುಮಾರಸ್ವಾಮಿ ಹೊಸ ಅವತಾರ]

ಅಣ್ಣ ತಂಗಿಯಂತಹಾ ಸೆಂಟಿಮೆಂಟ್ ಪಾತ್ರಗಳಿಂದ ಗ್ಲಾಮರಸ್ ರೋಲ್ ವರೆಗೂ ಅದ್ಭುತ ಅಭಿನಯ ನೀಡಿದ ರಾಧಿಕಾ ನಾವು ಯಾರಿಗೂ ಕಮ್ಮಿಯಿಲ್ಲ ಅಂತ ಕನ್ನಡದ ಟಾಪ್ ಹೀರೋಯಿನ್ ಗಳ ಲಿಸ್ಟ್ ನಲ್ಲಿದ್ರು. ಈಗ ಈ ದುಂಡುಮುಖದ ಚೆಲುವೆ ಭರ್ಜರಿ ಕಂಬ್ಯಾಕ್ ಮಾಡ್ತಿದ್ದಾರೆ. ರಾಧಿಕಾ ರಂಗು ಈಗ ಪರಭಾಷೆಗಳಿಗೂ ವ್ಯಾಪಿಸ್ತಿದೆ. ಈ ರಂಗೀನ್ ರಾಣಿಯ ಸಿನಿಲುಕ್ ಝಲಕ್ ಇಲ್ಲಿದೆ.

ರಾಧಿಕಾ ತೆಲುಗು ಅವತಾರಂ

ಕನ್ನಡ ಸಿನಿಮಾ ಮಾತ್ರವಲ್ದೇ ರಾಧಿಕಾ ಕುಮಾರಸ್ವಾಮಿ ಈಗ ತೆಲುಗಲ್ಲೂ ಬಿಜಿ. ರಾಧಿಕಾ ಅವ್ರ ತೆಲುಗು ಸಿನಿಮಾ ಅವತಾರಂ ಇದೇ 18ಕ್ಕೆ ರಿಲೀಸ್ ಆಗ್ತಿದೆ. ಈ ಮೂಲಕ ಕಂಬ್ಯಾಕ್ನಲ್ಲೇ ಟಾಲಿವುಡ್ನಲ್ಲೂ ರಾಧಿಕಾ ಮೋಡಿ ನಡೆಯಲಿದೆ

ಕನ್ನಡದಲ್ಲಿ ರುದ್ರತಾಂಡವ

ಚಿರಂಜೀವಿ ಸರ್ಜಾಗೆ ರಾಧಿಕಾ ಜೋಡಿಯಾಗ್ತಿರೋ ರಾಜಾಹುಲಿ ನಿರ್ದೇಶಕ ಗುರುದೇಶಪಾಂಡೆಯವ್ರ ನಿರ್ದೇಶನದ ರುದ್ರತಾಂಡವ ಮುಹೂರ್ತ ನಡೆದಿದೆ. ಚಿತ್ರದ ಶೂಟಿಂಗ್ ಶುರುವಾಗ್ತಿದೆ, ಇಲ್ಲಿ ರಾಧಿಕಾ ಹೀರೋಯಿನ್ ಆಗಿ ಚಿರುಗೆ ಸಮನಾದ ಪಾತ್ರಲ್ಲಿ ಮಿಂಚಲಿದ್ದಾರಂತೆ.

ಅಣ್ಣ ತಂಗಿ ಸೆಂಟಿಮೆಂಟ್ ಬಂಗಾರದ ವಂಶ

ಚುನಾವಣೆ ಅನ್ನೋ ಕಾರಣದಿಂದ ಮೂರು ತಿಂಗಳು ಮುಂದೂಡಿದ್ದ ಶಿವಣ್ಣ-ರಾಧಿಕಾ ಅಭಿನಯದ ಅಣ್ಣ ತಂಗಿ ಸೆಂಟಿಮೆಂಟ್ ಸಿನಿಮಾ 'ಬಂಗಾರದ ವಂಶ' ಸದ್ಯದಲ್ಲೇ ಶುರುವಾಗಲಿದೆ.

ಪರಭಾಷೆಯಲ್ಲೂ ರಾಧಿಕಾಗೆ ಡಿಮಾಂಡ್

'ಅವತಾರಂ' ಝಲಕ್ ನೋಡಿದ ರಾಧಿರಕಾರಿಗೆ ತಮಿಳು ತೆಲುಗಲ್ಲೂ ಭರ್ಜರಿ ಆಫರ್ ಗಳಿದ್ಯಂತೆ. ಆದರೆ ಸದ್ಯ ತುಂಬಾನೇ ಚೂಸಿಯಾಗಿರೋ ರಾಧಿಕಾ ಎಲ್ಲ ಪಾತ್ರಗಳನ್ನೂ ಒಪ್ಪಿಕೊಳ್ತಿಲ್ಲ.

ಗ್ಲಾಮರಸ್ ಪಾತ್ರಗಳಿಗೂ ಆಫರ್

ಸ್ವೀಟಿ ಸಿನಿಮಾದಲ್ಲಿ ಗ್ಲಾಮರಸ್ಸಾಗಿ ಮಿಂಚಿದ್ದ ರಾಧಿಕಾರಿಗೆ ಈಗ ಗ್ಲಾಮರಸ್ ಪಾತ್ರಗಳ ಆಫರ್ ಕೂಡ ಬರ್ತಿದೆಯಂತೆ. ರಾಧಿಕಾ ಫಿಟ್ ಅಂಡ್ ಫೈನ್ ಆಗಿರೋದು ಕೂಡ ಇದಕ್ಕೆ ಕಾರಣ.

ರಾಧಿಕಾ ಫುಲ್ ಬಿಜಿ

ಮದುವೆಯಾಯ್ತು ಮಗೂನೂ ಆಯ್ತು. ಇನ್ನೇನಿದ್ರೂ ಅಕ್ಕ ಅಮ್ಮನ ಪಾತ್ರ ಫಿಕ್ಸ್ ಅಂದುಕೊಂಡಿದ್ದವರಿಗೆ ರಾಧಿಕಾ ಹೀರೋಯಿನ್ ಆಗಿ ಯಂಗ್ ಹೀರೋಗಳಿಗೆ ಜೋಡಿಯಾಗಿ ಶಾಕ್ ಕೊಡ್ತಿದ್ದಾರೆ. ಸದ್ಯ ರಾಧಿಕಾ ಇನ್ನೆರೆಡು ವರ್ಷ ಫುಲ್ ಬಿಜಿ.

English summary
Actress Radhika Kumaraswamy all set to play a variety roles in coming days. The actress comeback with variety roles. Radhika playing a teacher role in Kannada 'Rudratandava'. While her Avataram ready for release.
Please Wait while comments are loading...