»   » ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳಿಗೆ ಈ ವರ್ಷದಲ್ಲೊಂದು ಸಿಹಿ ಸುದ್ದಿ

ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳಿಗೆ ಈ ವರ್ಷದಲ್ಲೊಂದು ಸಿಹಿ ಸುದ್ದಿ

Posted By:
Subscribe to Filmibeat Kannada

ನಟಿ ರಾಧಿಕಾ ಕುಮಾರಸ್ವಾಮಿ ಒಂದು ಸಣ್ಣ ಗ್ಯಾಪ್ ನ ನಂತರ ಮತ್ತೆ ಬೆಳ್ಳಿತೆರೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ಅರ್ಜುನ್ ಸರ್ಜಾ, ಜೆಡಿ ಚಕ್ರವರ್ತಿ ಅಭಿನಯದ 'ಕಾಂಟ್ರ್ಯಾಕ್ಟ್' ಚಿತ್ರದ ಮೂಲಕ ಮತ್ತೆ ನಾಯಕಿ ಆಗಿ ಮಿಂಚುತ್ತಿದ್ದಾರೆ.

ಇದರ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿ, ನಿರ್ದೇಶನ ಮಾಡುತ್ತಿರುವ 'ರಾಜೇಂದ್ರ ಪೊನ್ನಪ್ಪ' ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ನಾಯಕಿ ಆಗಿದ್ದಾರೆ. ಹೀಗಿರುವಾಗ, ಇದೇ ವರ್ಷದಲ್ಲಿ ತಮ್ಮ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ನೀಡಲಿದ್ದೇನೆ ಎಂದು ರಾಧಿಕಾ ಹೇಳಿಕೊಂಡಿದ್ದಾರೆ.

ರಾಜಕೀಯಕ್ಕೆ ಗ್ರೀನ್ ಸಿಗ್ನಲ್ ಕೊಟ್ರಾ ರಾಧಿಕಾ ಕುಮಾರಸ್ವಾಮಿ!

Actress Radhika Kumaraswamy Producing her 3rd Movie

ಹೌದು, ಕನ್ನಡದಲ್ಲಿ ಎರಡು ಚಿತ್ರಗಳನ್ನ ನಿರ್ಮಾಣ ಮಾಡಿರುವ ರಾಧಿಕಾ ಕುಮಾರಸ್ವಾಮಿ ಈಗ ಮೂರನೇ ಚಿತ್ರದ ನಿರ್ಮಾಣಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಾರಂತೆ. ಎಲ್ಲ ಅಂದುಕೊಂಡಂತೆ ಆದರೇ, ಇದೇ ವರ್ಷ ಈ ಚಿತ್ರವನ್ನ ಶುರು ಮಾಡಲಿದ್ದಾರಂತೆ.

2012ರಲ್ಲಿ ರಾಕಿಂಗ್ ಸ್ಟಾರ್ ಯಶ್ ಮತ್ತು ರಮ್ಯಾ ಅಭಿನಯದ 'ಲಕ್ಕಿ' ಹಾಗೂ 2013 ರಲ್ಲಿ ಆದಿತ್ಯ ಹಾಗೂ ರಾಧಿಕಾ ಕುಮಾರಸ್ವಾಮಿ ಅಭಿನಯದ 'ಸ್ವೀಟಿ ನನ್ನ ಜೋಡಿ' ಚಿತ್ರವನ್ನ ನಿರ್ಮಾಣ ಮಾಡಿದ್ದರು. ಮೂರು ವರ್ಷಗಳ ನಂತರ ಈಗ ಮೂರನೇ ಚಿತ್ರಕ್ಕೆ ಅಣಿಯಾಗುತ್ತಿರುವುದು ನಿಜಕ್ಕೂ ಅವರ ಅಭಿಮಾನಿಗಳಿಗೆ ಸಿಹಿ ಸುದ್ದಿಯಾಗಿದೆ.

ಕುಮಾರಸ್ವಾಮಿ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ರಾಧಿಕಾ ಖಡಕ್ ಉತ್ತರ

English summary
Kannada Actress Radhika Kumaraswamy Getting Ready for her 3rd Movie of her own Banner.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada