For Quick Alerts
  ALLOW NOTIFICATIONS  
  For Daily Alerts

  ಅಮ್ಮ ಆಗ್ತಿದ್ದಾರೆ ಯಶ್ ಮಡದಿ ರಾಧಿಕಾ ಪಂಡಿತ್

  By Pavithra
  |
  ಅಮ್ಮ ಆಗ್ತಿದ್ದಾರೆ ಯಶ್ ಮಡದಿ ರಾಧಿಕಾ ಪಂಡಿತ್ | Filmibeat Kannada

  ಕನ್ನಡ ಸಿನಿಮಾರಂಗದ ರಾಕಿಂಗ್ ಜೋಡಿ ಯಶ್ ಮತ್ತು ರಾಧಿಕಾ ಪಂಡಿತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದುವರೆ ವರ್ಷ ಕಳೆದಿದೆ. ಮದುವೆ ಆಗಿ ಕೆಲವೇ ದಿನಗಳಲ್ಲಿ ಮಗು ಯಾವಾಗ ಅನ್ನುವ ಪ್ರಶ್ನೆ ಎಲ್ಲರ ಬಾಯಲ್ಲಿ ಕೇಳಿ ಬರುತ್ತಿತ್ತು.

  ಯಶ್ ಮತ್ತು ರಾಧಿಕಾ ಪಂಡಿತ್ ಭಾಗಿ ಆಗುತ್ತಿದ್ದ ಕಾರ್ಯಕ್ರಮದಲ್ಲಿ ಈ ಪ್ರಶ್ನೆ ಇದ್ದೇ ಇರುತ್ತಿತ್ತು. ಆದರೆ ಈಗ ರಾಕಿಂಗ್ ಜೋಡಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಹೌದು ರಾಧಿಕಾ ಪಂಡಿತ್ ಮಡಿಲಲ್ಲಿ ಇನ್ನು ಕೆಲವೇ ತಿಂಗಳಲ್ಲಿ ಮಗುವಿನ ನಗು ಕೇಳಿ ಬರಲಿದೆ.

  'ಮರಿ ರಾಕಿಂಗ್ ಸ್ಟಾರ್' ಯಾವಾಗ ಎಂದು ಕೇಳಿದ್ದ ಅಮ್ಮನಿಗೆ ಯಶ್ ಸಿಹಿ ಸುದ್ದಿ'ಮರಿ ರಾಕಿಂಗ್ ಸ್ಟಾರ್' ಯಾವಾಗ ಎಂದು ಕೇಳಿದ್ದ ಅಮ್ಮನಿಗೆ ಯಶ್ ಸಿಹಿ ಸುದ್ದಿ

  ರಾಧಿಕಾ ತಾಯಿ ಆಗುತ್ತಿರುವ ವಿಚಾರವನ್ನು ಖಾತರಿ ಪಡಿಸಿದ್ದು ಈ ಸುದ್ದಿ ಅಭಿಮಾನಿಗಳಿಗೆ ಸಂತಸ ತಂದಿದೆ. ಸಾಕಷ್ಟು ತಿಂಗಳುಗಳಿಂದ ಪ್ರತಿಯೊಬ್ಬರು ಕೇಳುತ್ತಿದ್ದ ಪ್ರಶ್ನೆಗೆ ಉತ್ತರ ಇಂದು ಸಿಕ್ಕಿದೆ. ಈ ಬಗ್ಗೆ ತಾಯಿ ಆಗುತ್ತಿರುವ ರಾಧಿಕಾ ಪಂಡಿತ್ ಹಾಕಿರುವ ಪೋಸ್ಟ್ ಏನಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

  ಸ್ಟೇಟಸ್ ಹಾಕಿದ ರಾಧಿಕಾ

  ಸ್ಟೇಟಸ್ ಹಾಕಿದ ರಾಧಿಕಾ

  "ನಾವೀಗ ಮೂವರು" ಎನ್ನುವ ವಿಚಾರವನ್ನು ರಾಧಿಕಾ ಪಂಡಿತ್ ತಮ್ಮ ಫೇಸ್ ಬುಕ್ ಮೂಲಕ ತಿಳಿಸಿದ್ದಾರೆ. ರಾಧಿಕಾ ಮತ್ತು ಯಶ್ ಇರುವ ಫೋಟೋ ಜೊತೆಯಲ್ಲಿ ಈ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ.

  ಅಭಿಮಾನಿಗಳಿಗೆ ಸಂಭ್ರಮ

  ಅಭಿಮಾನಿಗಳಿಗೆ ಸಂಭ್ರಮ

  ರಾಧಿಕಾ ತಾಯಿ ಆಗುತ್ತಿರುವ ವಿಚಾರ ಹೇಳುತ್ತಿದ್ದ ಹಾಗೇ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ. ಲೈಕ್ ಮತ್ತು ಕಮೆಂಟ್ ಮಾಡುವ ಮೂಲಕ ಜ್ಯೂನಿಯರ್ ರಾಕಿಂಗ್ ಸ್ಟಾರ್ ಅಥವಾ ಜ್ಯೂನಿಯರ್ ರಾಧಿಕಾ ಪಂಡಿತ್ ಆಗಮನಕ್ಕಾಗಿ ಕಾದಿದ್ದಾರೆ.

  ಡಿಸೆಂಬರ್ ನಲ್ಲಿ ಮಗುವಿನ ಆಗಮನ

  ಡಿಸೆಂಬರ್ ನಲ್ಲಿ ಮಗುವಿನ ಆಗಮನ

  ಯಶ್ ವೃತ್ತಿ ಜೀವನದಲ್ಲಾಗಲಿ ವಯಕ್ತಿಕ ಜೀವನದಲ್ಲಿ ಆಗಲಿ ಡಿಸೆಂಬರ್ ಲಕ್ಕಿ ತಿಂಗಳು. ಸದ್ಯ ರಾಧಿಕಾ ಐದು ತಿಂಗಳ ಗರ್ಭಿಣಿ ಆಗಿದ್ದು ಡಿಸೆಂಬರ್ ನಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಮಿಸ್ಟರ್ ಅಂಡ್ ಮಿಸ್ಸೆಸ್ ರಾಮಚಾರಿ.

  ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಯಶ್ ಮಾತು

  ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಯಶ್ ಮಾತು

  ರಾಕಿಂಗ್ ಸ್ಟಾರ್ ಯಶ್ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಭಾಗಿ ಆದ ಸಂದರ್ಭದಲ್ಲಿ ಯಶ್ ತಾಯಿ ಮಗು ಯಾವಾಗ ಆಗುತ್ತೆ ಎಂದು ಪ್ರಶ್ನೆ ಕೇಳಿದ್ದರು. ಎರಡು ವರ್ಷ ಆರಾಮಾಗಿದ್ದು ನಂತರ ಈ ಪ್ಲಾನ್ ಎಂದಿದ್ದರು. ಎರಡು ವರ್ಷ ತುಂಬುವಷ್ಟರಲ್ಲಿ ಯಶ್ ಮನೆಯಲ್ಲಿ ಮಗುವಿನ ನಗು ಕೇಳಿ ಬರಲಿದೆ.

  English summary
  Kannada actress Radhika Pandit is becoming the mother, Radhika Pandit told this news to fans through the social networking site

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X