For Quick Alerts
  ALLOW NOTIFICATIONS  
  For Daily Alerts

  ರಾಧಿಕಾ ಪಂಡಿತ್, ಯಶ್ ಮದುವೆಯಾದ ಕಾರಣ ಬಹಿರಂಗ

  |

  ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್. ಸ್ನೇಹಿತರು ಅಂದ್ರೆ ಹೀಗಿರಬೇಕಪ್ಪ, ತೆರೆ ಮೇಲೆ ಹೀರೋ-ಹೀರೋಯಿನ್ ಕೆಮಿಸ್ಟ್ರಿ ಇದ್ರೆ ಹೀಗಿರಬೇಕು, ಗಂಡ-ಹೆಂಡತಿ ಅಂದ್ರೆ ಯಶ್-ರಾಧಿಕಾ ಥರ ಇಬೇಕು ಅನ್ನುವವರೆ ಹೆಚ್ಚು. ಈ ಜೋಡಿ ಅಷ್ಟರ ಮಟ್ಟಿಗೆ ಎಲ್ಲರಿಗೂ ಮಾದರಿಯಾಗಿದೆ.

  ಒಂದೇ ಧಾರಾವಾಹಿಯಲ್ಲಿ ಅಭಿನಯಿಸಿ, ನಂತರ ಒಂದೇ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟು ಸ್ಯಾಡಂಲ್ ವುಡ್ ನ ಟಾಪ್ ನಟ-ನಟಿಯರಾಗಿ ಬೆಳೆದವರು ಯಶ್-ರಾಧಿಕಾ. ಸ್ನೇಹಿತರಾಗಿದ್ದವರು ನಂತರ ಪ್ರೀತಿಯಲ್ಲಿ ಬಿದ್ದು ಪ್ರೀತಿಯನ್ನು ಜೋಪಾನವಾಗಿ ಕಾಪಾಡಿಕೊಂಡು ಹಸೆಮಣೆ ಏರಿ ಪತಿ-ಪತ್ನಿಯಾರಾಗಿದ್ದಾರೆ.

  ಯಶ್ ಮೊಬೈಲ್ ನಂಬರ್ ಅನ್ನು ರಾಧಿಕಾ ಈ ಹೆಸರಲ್ಲಿ ಸೇವ್ ಮಾಡಿದ್ದಾರಂತೆ ಯಶ್ ಮೊಬೈಲ್ ನಂಬರ್ ಅನ್ನು ರಾಧಿಕಾ ಈ ಹೆಸರಲ್ಲಿ ಸೇವ್ ಮಾಡಿದ್ದಾರಂತೆ

  ಇಬ್ಬರ ನಡುವೆ ಅಗಾದವಾದ ಸ್ನೇಹ-ಪ್ರೀತಿ ಇದೆ. ಇಬ್ಬರ ಪ್ರೀತಿಯ ಬಗ್ಗೆ ಎಲ್ಲರಿಗೂ ಗೊತ್ತಿರುವುದೆ. ಅಲ್ಲದೆ ಎಷ್ಟೋ ಬಾರಿ ಹೇಳಿಕೊಂಡಿದ್ದಾರೆ. ಆದ್ರೆ ಈಗ್ಯಾಕೆ ಈ ಮಾತು ಅಂತೀರಾ. ಇತ್ತೀಚಿಗೆ ರಾಧಿಕಾ, ಯಶ್ ಅವರನ್ನೇ ಯಾಕೆ ಮದುವೆಯಾದರು ಎನ್ನುವ ಸತ್ಯವನ್ನು ತಡವಾಗಿ ರಿವೀಲ್ ಮಾಡಿದ್ದಾರೆ.

  ಯಶ್ ಬೆಸ್ಟ್ ಫ್ರೆಂಡ್

  ಯಶ್ ಬೆಸ್ಟ್ ಫ್ರೆಂಡ್

  ಇತ್ತೀಚಿಗಷ್ಟೆ ಸ್ನೇಹಿತರ ದಿನಾಚರಣೆ ಅಂಗವಾಗಿ ರಾಧಿಕಾ ಒಂದು ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಸ್ಟ್ ಮಾಡಿದ್ದರು. ರಾಧಿಕಾ ಯಾಕೆ ಯಶ್ ಅವರನ್ನೆ ಮದುವೆ ಆಗಿದ್ದಾರೆ ಎನ್ನುವ ಸತ್ಯವನ್ನು ಬಿಚ್ಚಿಟ್ಟಿದ್ದಾರೆ. "ಅವರು ಹೇಳಿದರು. ಜೀವನವು ನಿನ್ನ ಬೆಸ್ಟ್ ಫ್ರೆಂಡ್ ಜೊತೆಗಿದ್ದರೆ ಚೆನ್ನಾಗಿರುತ್ತದೆ ಎಂದು, ಅದಕ್ಕೆ ನಾನು ನನ್ನ ಬೆಸ್ಟ್ ಫ್ರೆಂಡ್ ಅನ್ನೇ ಮದುವೆ ಮಾಡಿಕೊಂಡೆ" ಎಂದು ಹೇಳಿದ್ದಾರೆ.

  ಯಶ್-ರಾಧಿಕಾ ಪಂಡಿತ್ ಮಗಳ ಹೆಸರಿನ ನಿಜವಾದ ಅರ್ಥ.! ಯಶ್-ರಾಧಿಕಾ ಪಂಡಿತ್ ಮಗಳ ಹೆಸರಿನ ನಿಜವಾದ ಅರ್ಥ.!

  ಫ್ಲಾಶ್ ಬ್ಯಾಕ್ ಫೋಟೋ ಶೇರ್

  ಫ್ಲಾಶ್ ಬ್ಯಾಕ್ ಫೋಟೋ ಶೇರ್

  ರಾಧಿಕಾ ಮತ್ತು ಯಶ್ ಇಬ್ಬರು ಕುಳಿತಿರುವ ಹಳೆಯ ಫೋಟೋವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಮೆಂಟ್ಸ್ ಹರಿದು ಬರುತ್ತಿವೆ. ಇಬ್ಬರ ಸ್ನೇಹ ಸಂಬಂಧದ ಬಗ್ಗೆ ಇಡೀ ಸ್ಯಾಂಡಲ್ ವುಡ್ ಗೆ ಗೊತ್ತು. ಆದ್ರೆ ರಾಧಿಕಾ ಯ್ ಬಾಯಲ್ಲೆ ಕೇಳಿದ್ರೆ ಅದೂ ಮತ್ತಷ್ಟು ಮಜವಾಗಿರುತ್ತೆ ಎನ್ನುವುದು ಅಭಿಮಾನಿಗಳ ಆಸೆ.

  ಡಿಸೆಂಬರ್ 9 ಕ್ಕೆ ಮದುವೆ

  ಡಿಸೆಂಬರ್ 9 ಕ್ಕೆ ಮದುವೆ

  ಡಿಸೆಂಬರ್ 9 ರಂದು ಯಶ್-ರಾಧಿಕಾ ಹಸೆಮೆಣೆ ಏರಿದ್ದರು. ಇಬ್ಬರ ಮದುವೆಗೆ ಕುಟುಂಬದವರು, ಆಪ್ತರು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಸಾಕ್ಷಿಯಾಗಿದ್ದರು. ಡಿಸೆಂಬರ್ 10 ರಂದು ಅರಮನೆ ಮೈದಾನದಲ್ಲಿ ಅದ್ದೂರಿ ಆರತಕ್ಷತೆ ಮಾಡಿಕೊಂಡಿದ್ದರು. ಇನ್ನೂ 11 ರಂದು ಅಭಿಮಾನಿಗಳಿಗಾಗಿಯೆ ಮಾತ್ರ ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

  ರಾಧಿಕಾ ಪಂಡಿತ್ ಮತ್ತೆ ಗರ್ಭಿಣಿ : 2ನೇ ಮಗುವಿಗೆ ಅಪ್ಪ ಆಗುತ್ತಿರುವ ಯಶ್ ರಾಧಿಕಾ ಪಂಡಿತ್ ಮತ್ತೆ ಗರ್ಭಿಣಿ : 2ನೇ ಮಗುವಿಗೆ ಅಪ್ಪ ಆಗುತ್ತಿರುವ ಯಶ್

  ಆಯಿರಾಗೆ ಜನ್ಮ ನೀಡಿರುವ ರಾಧಿಕಾ

  ಆಯಿರಾಗೆ ಜನ್ಮ ನೀಡಿರುವ ರಾಧಿಕಾ

  ರಾಧಿಕಾ ಪಂಡಿತ್ ಇತ್ತೀಚಿಗಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮುದ್ದಾದ ಮಗಳಿಗೆ ಅಯಿರಾ ಎಂದು ನಾಮಕರಣ ಮಾಡಿದ್ದಾರೆ. ಅಯಿರಾ ಈಗ 8 ತಿಂಗಳ ಮಗು. ಈಗ ರಾಧಿಕಾ ಮತ್ತೆ ಎರಡನೆ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಯಶ್ ಸದ್ಯ 'ಕೆಜಿಎಫ್-2' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  English summary
  Kannada actress Radhika Pandit reveals why she got married with Yash.
  Wednesday, August 7, 2019, 11:11
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X