For Quick Alerts
  ALLOW NOTIFICATIONS  
  For Daily Alerts

  ನಟಿ ರಾಧಿಕಾ ಪಂಡಿತ್ ಸಕ್ಸಸ್ ಗುಟ್ಟೇನು ಗೊತ್ತಾ?

  By ಜೀವನರಸಿಕ
  |

  ರಾಧಿಕಾ ಪಂಡಿತ್ ಸ್ಯಾಂಡಲ್ ವುಡ್ ನ ಭರವಸೆಯ ಹುಡುಗಿ. ಹೊಸಬರಿಗಿಂತ ಲಕ್ಕಿ ಹಿರೋಯಿನ್ ಅಂತಾನೇ ಕರೆಸಿಕೊಳ್ಳೋ ಈ ಸುಂದರಿ ಸೋಲಿಗಿಂತ ಗೆದ್ದಿದ್ದೇ ಹೆಚ್ಚು. ರಾಧಿಕಾ ಕೆರಿಯರ್ ಗ್ರಾಫ್ ನೋಡಿದ್ರೇ ಗೊತ್ತಾಗುತ್ತೆ. ರಾಧಿಕಾ ನಟಿಸಿದ ಸಿನಿಮಾಗಳು ನೆಲಕಚ್ಚಿದ್ದು ತೀರಾ ಕಡಿಮೆ.

  ಯಶಸ್ವಿ, ಇಲ್ಲದಿದ್ರೆ ಮಿನಿಮಮ್ ಗ್ಯಾರಂಟಿ ಸಿನಿಮಾಗಳೇ ರಾಧಿಕಾ ಕೆರಿಯರ್ ಗ್ರಾಫ್ ನಲ್ಲಿ ಕಾಣಿಸೋದು. ಅಷ್ಟರಮಟ್ಟಿಗೆ ರಾಧಿಕಾ ಉಳಿದ ನಟಿಯರಿಗಿಂತ ಭಿನ್ನ. ವಾರಕ್ಕೆ ಒಂದು ಕಥೆ ಕೇಳೋ ರಾಧಿಕಾ ಪಂಡಿತ್ ಒಪ್ಪಿಕೊಳ್ಳೋದು ಮಾತ್ರ ಆರು ತಿಂಗಳಿಗೆ ಒಂದು ಸಿನಿಮಾವನ್ನ. ['ಮಳೆ'ಯಲ್ಲಿ ಪ್ರೇಮ್ ಕೊಡೆ ಹಿಡಿಯೋದು ಯಾರಿಗೆ?]

  ಇನ್ನೂ ಪಕ್ಕಾ ಆಗಿ ಹೇಳ್ಬೇಕು ಅಂದ್ರೆ ಒಂದು ಸಿನಿಮಾ ಮುಗಿದ ನಂತರ ಮತ್ತೊಂದು ಸಿನಿಮಾವನ್ನ ಒಪ್ಪಿಕೊಳ್ತಾರೆ. ಇವತ್ತಿಗೂ ಅಷ್ಟೇ ರಾಧಿಕಾ ಒಪ್ಪಿಕೊಂಡಿರೋದು 'ಬಹದ್ದೂರ್' ಚಿತ್ರವನ್ನ ಬಿಟ್ರೆ ಯಶ್ ಅಭಿನಯದ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ'ಯನ್ನು ಮಾತ್ರ.

  ಇದೇ ರಾಧಿಕಾ ಸಕ್ಸಸ್ ಸೀಕ್ರೇಟ್. ಒಂದು ಸಿನಿಮಾ ಮುಗಿದ ನಂತರ ಮತ್ತೊಂದು ಸಿನಿಮಾವನ್ನ ಒಪ್ಪಿಕೊಂಡ್ರೆ ಒಂದೇ ಪಾತ್ರದ ಕಡೆ ಕಾಂಸಂಟ್ರೆಟ್ ಮಾಡ್ಬಹುದು ಅನ್ನೋದು ರಾಧಿಕಾ ಪಂಡಿತ್ ರ ಪಂಡಿತ ಲೆಕ್ಕಾಚಾರ.

  ಇನ್ನು ತಮ್ಮ ಸಿನಿಮಾಗಳಲ್ಲಿ ರಾಧಿಕಾ ತಾನು ನಟಿಸಿದ ಪಾತ್ರಗಳ ಮೂಲಕ ಗೆದ್ದಿದ್ದಾರೆ. ಸಿನಿಮಾಗಳು ಸೋತ್ರೂ ಕೂಡ ರಾಧಿಕಾ ಅಭಿನಯ ಮೆಚ್ಚುಗೆ ಗಳಿಸುತ್ತೆ. ಅದಕ್ಕೆ ಕಾರಣಾನೇ ರಾಧಿಕಾರ ಈ ಸ್ಟ್ರಾಟಜಿ.

  ರಾಧಿಕಾ ಈ ಯೋಚನೆಯನ್ನ ಕನ್ನಡದ ಉಳಿದ ಹೀರೋ-ಹೀರೋಯಿನ್ ಗಳು ಫಾಲೋ ಮಾಡಿದ್ರೆ ಅವ್ರ ಕೆರಿಯರ್ ಗ್ರಾಫ್ ನಲ್ಲೂ ಕೂಡ ಯಶಸ್ವೀ ಸಿನಿಮಾಗಳ ಸಾಲು ಸಾಲು ಕಾಣೋದ್ರಲ್ಲಿ ಅನುಮಾನವೇ ಇಲ್ಲ.

  ಯಾಕಂದ್ರೆ ರಾಧಿಕಾ ಸಕ್ಸಸ್ ಬಗ್ಗೆ ರಾಧಿಕಾ ಒಂದು ಮತು ಹೇಳ್ತಾರೆ. ನೂರಾರು ಸಿನಿಮಾ ಮಾಡಿ ಒಂದೂ ನೆನಪಲ್ಲಿ ಉಳಿಯದೇ ಹೋಗೋದಕ್ಕಿಂತ ಹತ್ತು ಸಿನಿಮಾ ಮಾಡಿ ಐದರಲ್ಲಾದ್ರೂ ನೆನಪಲ್ಲಿ ಉಳಿಯೋ ಪಾತ್ರ ಮಾಡ್ಬೇಕು.

  English summary
  Do you know Kannada actress Radhika Pandit's success secret? The actress accepts only one film at a time and concentrate only on her role in that movie. She becomes role model in Sandalwood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X