»   » ಕೊಪ್ಪಳದಲ್ಲಿ ರಾಕಿಂಗ್ ಸ್ಟಾರ್ ಪತ್ನಿ ರಾಧಿಕಾ ಪಂಡಿತ್ ಹೇಳಿದ್ದೇನು?

ಕೊಪ್ಪಳದಲ್ಲಿ ರಾಕಿಂಗ್ ಸ್ಟಾರ್ ಪತ್ನಿ ರಾಧಿಕಾ ಪಂಡಿತ್ ಹೇಳಿದ್ದೇನು?

Posted By:
Subscribe to Filmibeat Kannada

ರಾಕಿಂಗ್ ಸ್ಟಾರ್ ಯಶ್, ತಮ್ಮ 'ಯಶೋಮಾರ್ಗ'ದ ನೇತೃತ್ವದಲ್ಲಿ ಹಲವು ಮಹತ್ವದ ಕಾರ್ಯಗಳನ್ನ ಹಮ್ಮಿಕೊಂಡಿದ್ದು, ಈಗಾಗಲೇ ಆ ಕೆಲಸಗಳಿಗೆ ಚಾಲನೆ ಕೊಟ್ಟಿದ್ದಾರೆ. ಅಂದ್ಹಾಗೆ, 'ಯಶೋಮಾರ್ಗ'ದಲ್ಲಿ ಕೇವಲ ಯಶ್ ಮಾತ್ರ ತೊಡಗಿಸಿಕೊಂಡಿಲ್ಲ. ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಅವರು ಕೂಡ ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದಾರೆ.[ಕೊಪ್ಪಳದಲ್ಲಿ ಮಹತ್ವದ ಕೆಲಸಕ್ಕೆ ಚಾಲನೆ ಕೊಟ್ಟ ಯಶ್-ರಾಧಿಕಾ ದಂಪತಿ]

ಇತ್ತೀಚೆಗಷ್ಟೇ 'ಯಶೋಮಾರ್ಗ' ಕಚೇರಿ ಉದ್ಘಾಟಿಸಿದ್ದ ರಾಕಿಂಗ್ ಸ್ಟಾರ್ ದಂಪತಿ, ಈಗ ಕೊಪ್ಪಳದಲ್ಲಿ ಕೆರೆ ಅಭಿವೃದ್ದಿ ಯೋಜನೆಗೆ ಒಟ್ಟಿಗೆ ಚಾಲನೆ ಕೊಟ್ಟಿದ್ದಾರೆ. ಈ ವೇಳೆ ರಾಧಿಕಾ ಪಂಡಿತ್, ಕೊಪ್ಪಳದ ಅಭಿಮಾನಿಗಳ ಎದುರು ತಮ್ಮ ಅಭಿಮಾನದ ಮಾತುಗಳನ್ನ ಹಂಚಿಕೊಂಡರು. ಹಾಗಾದ್ರೆ, ಮಿಸಸ್ ರಾಮಾಚಾರಿ ಏನ್ ಹೇಳಿದ್ರು.....? ಮುಂದೆ ಓದಿ....

ನಿಮ್ಮ ಬೆಂಬಲ, ಪ್ರೀತಿ, ಪ್ರೋತ್ಸಾಹ ಬೇಕು!

''ನಿಜವಾಗಲೂ ತುಂಬಾ ಖುಷಿ ಆಗ್ತಿದೆ. ಒಂದು ಒಳ್ಳೆ ಕೆಲಸ ಯಶಸ್ವಿಯಾಗುವುದಕ್ಕೆ ಬೇಕಾಗಿರುವುದು ಬೆಂಬಲ, ಪ್ರೀತಿ, ಪ್ರೋತ್ಸಾಹ, ಆರ್ಶೀವಾದ. ಅದನ್ನೇಲ್ಲ ನೀವು ಕೊಡ್ತೀರಾ ಎನ್ನುವ ನಂಬಿಕೆ. 'ಯಶೋಮಾರ್ಗ' ಟೀಮ್ ಮಾಡುವುದಕ್ಕೆ ಹೊರಟಿರುವ ಈ ಕಾರ್ಯಕ್ಕೆ ನಿಮ್ಮ ಸಹಕಾರವಿರಲಿ''.

ಒಳ್ಳೆ ಕೆಲಸಕ್ಕೆ ಅಡ್ಡಿ ಬರುತ್ತೆ!

''ಒಳ್ಳೆ ಕಾರ್ಯ ಅಂದ್ರೆ, ಅದಕ್ಕೆ ಅಡ್ಡಿಗಳು, ಆಡಚಣೆಗಳು ಬಂದೇ ಬರುತ್ತೆ. ಅದಕ್ಕೆ ನಾವು ಕಿವಿ ಕೊಡದೆ, ಒಳ್ಳೆ ಕೆಲಸ ನಡೆದುಕೊಂಡು ಹೋಗಲಿ ಎಂದು ಕೆಲಸ ಮಾಡೋಣ'' ಎಂದು ಕೇಳಿಕೊಂಡರು.

ಭೂಮಿ ಪೂಜೆ ನೆರೆವೇರಿಸಿದ ಯಶ್-ರಾಧಿಕಾ

ಕೊಪ್ಪಳದ ತಲ್ಲೂರು ಕೆರೆಯ ಅಭಿವೃದ್ದಿ ಕೆಲಸಕ್ಕೆ ಯಶ್ ಮತ್ತು ಪತ್ನಿ ರಾಧಿಕಾ ಪಂಡಿತ್ ಚಾಲನೆ ಕೊಟ್ಟಿದ್ದು, ಭೂಮಿ ಪೂಜೆ ನೆರೆವೇರಿಸಿದರು.

'ಯಶೋಮಾರ್ಗ'ದ ಜೊತೆ ರಾಧಿಕಾ ಹೆಜ್ಜೆ!

'ಯಶೋಮಾರ್ಗ ಫೌಂಡೇಶನ್' ನಟ ಯಶ್ ಅವರ ಸಾರಥ್ಯದಲ್ಲಿ ಹುಟ್ಟಿಕೊಂಡಿರುವ ಸಂಸ್ಥೆ. ಈ ಸಂಸ್ಥೆಯ ಪ್ರತಿಯೊಂದು ಕೆಲಸದಲ್ಲಿ ಯಶ್ ಅವರ ಪತ್ನಿ ರಾಧಿಕಾ ಪಂಡಿತ್ ಕೂಡ ಜೊತೆಯಾಗಿದ್ದಾರೆ. ''ಯಶೋಮಾರ್ಗದಿಂದ ಆಗುವ ಒಳ್ಳೆ ಕೆಲಸಗಳಲ್ಲಿ ನಾನು ಬಾಗಿಯಾಗಲಿದ್ದೇನೆ'' ಎಂದು ರಾಧಿಕಾ ಅವರು ಹೇಳಿದಾಗೆ, ಪತಿಯ ಆಶಯಕ್ಕೆ ಪತ್ನಿಯೂ ಬೆಂಬಲವಾಗಿ ನಿಂತಿದ್ದಾರೆ.['ಯಶೋಮಾರ್ಗ'ಕ್ಕಾಗಿ ಹೊಸ ಕಚೇರಿ ಸ್ಥಾಪಿಸಿದ ಯಶ್ ದಂಪತಿ]

English summary
Kannada Actress and Actor Yash Wife's Radhika Pandith talk About YashoMarga Work at Koppala. Radhika Pandit Was Participants in Bhoomi Pooja Ceremony Koppal district in Karnataka.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada