»   » 'ಧೂದ್ ಸಾಗರ್'ನಲ್ಲಿ ನಟಿ ರಮ್ಯಾ ಐಟಂ ಸಾಂಗ್

'ಧೂದ್ ಸಾಗರ್'ನಲ್ಲಿ ನಟಿ ರಮ್ಯಾ ಐಟಂ ಸಾಂಗ್

Posted By:
Subscribe to Filmibeat Kannada

ಈಗಾಗಲೆ ಸ್ಯಾಂಡಲ್ ವುಡ್ ನ ಹಲವಾರು ತಾರೆಗಳು ಐಟಂ ಡಾನ್ಸ್ ನಲ್ಲಿ ಸೊಂಟ ಬಳುಕಿಸಿದ್ದಾರೆ. ಈಗ ಈ ಪಟ್ಟಿಗೆ ಹೊಸದಾಗಿ ಮತ್ತೊಬ್ಬ ಬೆಡಗಿ ರಮ್ಯಾ ಬಾರ್ನಾ ಎಂಟ್ರಿ ಕೊಟ್ಟಿದ್ದಾರೆ. 'ಧೂದ್ ಸಾಗರ್' ಚಿತ್ರದಲ್ಲಿ ರಮ್ಯಾ ತಮ್ಮ ಸೊಂಟ ಬಳುಕಿಸುತ್ತಿದ್ದಾರೆ.

ಈ ಬಗ್ಗೆ ರಮ್ಯಾ ಬಾರ್ನಾ ಮಾತನಾಡುತ್ತಾ, ಐಟಂ ಡಾನ್ಸ್ ನಲ್ಲಿ ತಾವು ಹೆಜ್ಜೆ ಹಾಕುತ್ತಿರುವುದಕ್ಕೆ ಯಾವುದೇ ಮುಜುಗರವಿಲ್ಲ. ಹಾಗೆಯೇ ಇದನ್ನು ಐಟಂ ನಂಬರ್ ಅಂದ್ರೂ ಪರ್ವಾಗಿಲ್ಲ, ಐಟಂ ಡಾನ್ಸ್ ಅಂದ್ರೂ ಅಷ್ಟೇ ಎಂದಿದ್ದಾರೆ.


ಇದನ್ನು ವಿಶೇಷ ಗೀತೆ, ಸ್ಪೆಷಲ್ ಸಾಂಗ್ ಎಂಬುದರಲ್ಲಿ ಅರ್ಥವಿಲ್ಲ. ಜನರೇ ಇದನ್ನು ಐಟಂ ನಂಬರ್ ಎನ್ನಬೇಕಾದರೆ ತಮ್ಮದೇನು ಅಭ್ಯಂತರವಿಲ್ಲ ಎಂದಿದ್ದಾರೆ. ಗೌತಮ್ ಶ್ರೀವಾತ್ಸವ ಸಂಗೀತ ನಿರ್ದೇಶನದ ಈ ಹಾಡಿಗೆ ಕಲೈ ನೃತ್ಯ ನಿರ್ದೇಶನ ಮಾಡಿದ್ದಾರೆ.

ಬೆಂಗಳೂರಿನ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಹಾಡನ್ನು ಚಿತ್ರೀಕರಿಸಲಾಗುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಬುಲ್ ಬುಲ್' ಚಿತ್ರದಲ್ಲಿ ರಮ್ಯಾ ಬಾರ್ನಾ ಅಭಿನಯಿಸಿದ್ದರು. ನಟೋರಿಯಸ್, ಅನಾರ್ಕಲಿ ಹಾಗೂ ಒಂದು ರೂಪಾಯಲ್ಲಿ ಎರಡು ಪ್ರೀತಿ ಎಂಬ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. (ಏಜೆನ್ಸೀಸ್)

English summary
Kannada actress Ramya Barna enters item number. The actress has danced to the tunes of an item for the film 'Doodh Sagar' recently.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada