»   » ಸ್ಯಾಂಡಲ್ ವುಡ್ ನಲ್ಲಿ 12 ವರ್ಷ ಪೂರೈಸಿದ ರಮ್ಯಾ

ಸ್ಯಾಂಡಲ್ ವುಡ್ ನಲ್ಲಿ 12 ವರ್ಷ ಪೂರೈಸಿದ ರಮ್ಯಾ

Posted By: ಉದಯರವಿ
Subscribe to Filmibeat Kannada

ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ಕ್ವೀನ್ ಎನ್ನಿಸಿಕೊಂಡವರು ನಟಿ ರಮ್ಯಾ. ಈಗಲೂ ಅವರು ಕ್ವೀನ್ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಬಣ್ಣದ ಜಗತ್ತಿನಿಂದ ಸ್ವಲ್ಪ ದೂರ ಸರಿದ ಮೇಲೆ ಆ ಪಟ್ಟಕ್ಕಾಗಿ ಹಲವಾರು ತಾರಾಮಣಿಗಳ ನಡುವೆ ಸ್ಪರ್ಧೆ ನಡೆಯುತ್ತಲೇ ಇದೇ. ಆದರೆ ಇನ್ನೂ ಯಾರೂ ಆ ಪಟ್ಟ ಅಲಂಕರಿಸಲು ಸಾಧ್ಯವಾಗಿಲ್ಲ.

ವಿದೇಶಕ್ಕೆ ಹಾರಿದ್ದ ರಮ್ಯಾ ಇದೀಗ ಮತ್ತೆ ತಾಯ್ನಾಡಿಗೆ ಮರಳಿದ್ದಾರೆ. ಇನ್ನೂ ಅವರು ಚಿತ್ರರಂಗದ ಬಗ್ಗೆ, ಬಣ್ಣದ ಪ್ರಪಂಚದ ಬಗ್ಗೆ ಏನೂ ಟ್ವೀಟಿಸಿಲ್ಲ. ಅವರ ಮನಸ್ಸೆಲ್ಲಾ ಇನ್ನು ರಾಜಕೀಯದ ಕಡೆಗೇ ಇದೆ. ಮತ್ತೆ ಬಣ್ಣ ಹಚ್ಚುತ್ತಾರೆಯೇ ಇಲ್ಲವೇ ಎಂಬುದು ಗೊತ್ತಿಲ್ಲ. [ಬ್ರೇಕಿಂಗ್ ನ್ಯೂಸ್ ; ತಾಯ್ನಾಡಿಗೆ ಮರಳಿದ ರಮ್ಯಾ]


Ramya

ಆದರೆ ಅಭಿಮಾನಿಗಳು ಮಾತ್ರ ಜಾತಕಪಕ್ಷಿಯಂತೆ ನಿರೀಕ್ಷಿಸುತ್ತಿದ್ದಾರೆ. ಟ್ವಿಟ್ಟರ್ ನಲ್ಲಿ ರಮ್ಯಾ ಆಕ್ಟೀವ್ ಆಗಿ ಇರಲಿ ಬಿಡಲಿ ಅಭಿಮಾನಿಗಳು ಮಾತ್ರ ಸದಾ ಚಟುವಟಿಕೆಯಿಂದ ಇರುತ್ತಾರೆ. ಅವರ ಬಗ್ಗೆ ಸದಾ ಒಂದಿಲ್ಲೊಂದು ಟ್ವೀಟ್ ಮಾಡುತ್ತಾ ಗಮನಸೆಳೆಯುತ್ತಿರುತ್ತಾರೆ.

ರಮ್ಯಾ ಚಿತ್ರರಂಗಕ್ಕೆ ಅಡಿಯಿಟ್ಟು ಇಂದಿಗೆ 12 ವರ್ಷಗಳಾಗುತ್ತಿದೆ. ಈ 12 ವರ್ಷಗಳಲ್ಲಿ ಅವರು 30 ಚಿತ್ರಗಳಲ್ಲಿ ಅಭಿನಯಿಸಿದ್ದಕ್ಕೆ ಅಭಿನಂದನೆಗಳು ಎಂದು ಟ್ವೀಟ್ ರೂಪದಲ್ಲಿ ತಿಳಿಸಿದ್ದಾರೆ 'ದಿವ್ಯಸ್ಪಂದನ ಫ್ಯಾನ್ಸ್'. ಏನೇ ಆಗಲಿ ಅಭಿಮಾನಿಗಳೆಂದರೆ ಹೀಗಿರಬೇಕಲ್ಲವೇ.2003ರಲ್ಲಿ 'ಅಭಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಅಡಿಯಿಟ್ಟ ರಮ್ಯಾ ಬಳಿಕ ಹಿಂತಿರುಗಿ ನೋಡಲೇ ಇಲ್ಲ. ಪುನೀತ್ ರಾಜ್ ಕುಮಾರ್, ಉಪೇಂದ್ರ, ಶಿವರಾಜ್ ಕುಮಾರ್, ಸುದೀಪ್, ಶ್ರೀನಗರ ಕಿಟ್ಟಿ, ಚಿರಂಜೀವಿ ಸರ್ಜಾ ಸೇರಿದಂತೆ ಕನ್ನಡದ ಬಹುತೇಕ ಹೀರೋಗಳಿಗೆ ನಾಯಕಿಯಾಗಿ ಮಿಂಚಿದರು.

ರಮ್ಯಾ ಅವರ ವೃತ್ತಿಬದುಕಿನಲ್ಲಿ ಒಮ್ಮೆ ಹಿಂತಿರುಗಿ ನೋಡಿದಾಗ ಇಷ್ಟು ಬೇಗ 12 ವರ್ಷಗಳು ಉರುಳಿ ಹೋದವೆ ಅನ್ನಿಸುತ್ತದೆ. ಇದಿಷ್ಟು ವರ್ಷಗಳಲ್ಲಿ 30 ಸಿನಿಮಾಗಳಲ್ಲಿ ಭಿನ್ನ ರೀತಿಯ ಪಾತ್ರಗಳನ್ನು ಪೋಷಿಸಿ ಅಭಿಮಾನಿಗಳಿಗೆ ಮನಸ್ಸಿನಲ್ಲಿ ಚಿರಮುದ್ರೆಯನ್ನುತ್ತಿದ್ದ ಬೆಡಗಿಯನ್ನು ನೆನೆಯಲು ಇದಕ್ಕೆ ಕಾರಣ ಬೇಕೆ.


English summary
Kannada actress Ramya completes 12 golden years in Sandalwood with memorable 30 moives. The actress fans remembering on Twitter and congratulate the queen of Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada