For Quick Alerts
  ALLOW NOTIFICATIONS  
  For Daily Alerts

  ಫೋಟೊ ತೆಗೆಸಿಕೊಳ್ಳಲು ಇಷ್ಟೆಲ್ಲ ಕಷ್ಟಪಟ್ಟರಂತೆ ಮೋಹಕತಾರೆ ರಮ್ಯಾ

  |

  ಸುದೀರ್ಘ ಕಾಲದಿಂದ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗದೆ ಉಳಿದಿದ್ದ ಮೋಹಕತಾರೆ ರಮ್ಯಾ, ಇತ್ತೀಚೆಗೆ ತಮ್ಮ ದರ್ಶನ ನೀಡತೊಡಗಿದ್ದಾರೆ. ಇನ್‌ಸ್ಟಾಗ್ರಾಂನ ಸ್ಟೋರೀಸ್‌ನಲ್ಲಿ ತಮ್ಮ ವಿಭಿನ್ನ ಪೋಸ್‌ಗಳ ಪ್ರಯತ್ನದ ಫೋಟೊಗಳನ್ನು ಹಂಚಿಕೊಂಡಿದ್ದ ಅವರು, ಪೋಸ್ಟ್‌ನಲ್ಲಿಯೂ ಅವುಗಳನ್ನು ಈಗ ಶೇರ್ ಮಾಡಿದ್ದಾರೆ.

  KGF ಎಡಿಟರ್ ನಮ್ಮ ಸಿನಿಮಾ ಎಡಿಟ್ ಮಾಡಿದ್ರು | Raghu Samarth | Filmibeat Kannada

  ಈ ಪೋಸ್ಟ್‌ಗಳು ರಮ್ಯಾ ಸಾರ್ವಜನಿಕ ಜೀವನಕ್ಕೆ ಮರಳುತ್ತಿರುವ ಸೂಚನೆ ನೀಡಿದೆ. ರಮ್ಯಾ ಸಿನಿ ಜೀವನಕ್ಕೆ ಮತ್ತು ರಾಜಕೀಯ ವೃತ್ತಿಗೆ ವಾಪಸಾಗಲಿದ್ದಾರೆ ಎಂಬ ಮಾತುಗಳು ಹಲವು ಸಮಯದಿಂದ ಕೇಳಿಬರುತ್ತಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗುವ ಮೂಲಕ ರಮ್ಯಾ ಆ ಸುಳಿವನ್ನು ನೀಡಿದ್ದಾರೆ ಎನ್ನಲಾಗಿದೆ. ರಮ್ಯಾ ತೆಗೆದುಕೊಂಡಿರುವ ಚಿತ್ರ ವಿಚಿತ್ರ ಸೆಲ್ಫಿಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ರಮ್ಯಾ ಇನ್‌ಸ್ಟಾಗ್ರಾಂನಲ್ಲಿ ಕೊನೆಯ ಪೋಸ್ಟ್‌ ಹಾಕಿದ್ದು 2019ರ ಮೇ ತಿಂಗಳಲ್ಲಿ. ಅಂದರೆ ಒಂದು ವರ್ಷ ಕಳೆದ ಬಳಿಕ ಮತ್ತೆ ಪೋಸ್ಟ್ ಹಾಕಿದ್ದಾರೆ.

  ಸೆಲ್ಫಿ ಶೇರ್ ಮಾಡಿ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿಸಿದ ರಮ್ಯಾ: ಹೇಗಿದ್ದಾರೆ ಮೋಹಕ ತಾರೆ ನೋಡಿ

  ಆದರೆ ಈ ಫೋಟೊಗಳನ್ನು ಕ್ಲಿಕ್ಕಿಸಲು ರಮ್ಯಾ ಬಹಳ ಕಷ್ಟಪಟ್ಟಿದ್ದಾರಂತೆ. ಅದು ಏಕೆಂದು ಅವರೇ ಹೇಳಿಕೊಂಡಿದ್ದಾರೆ. ಮುಂದೆ ಓದಿ...

  ಒಂದು ವರ್ಷದ ಹಿಂದೆ ಪೋಸ್ಟ್

  ಒಂದು ವರ್ಷದ ಹಿಂದೆ ಪೋಸ್ಟ್

  'ನನ್ನ ಕಳೆದ ಪೋಸ್ಟ್ ಹಾಕಿದ್ದ ನಂತರ ಒಂದು ವರ್ಷಕ್ಕೂ ಸ್ವಲ್ಪ ಹೆಚ್ಚು ಸಮಯ ಕಳೆದಿದೆ. ಮರಗಳು, ಹಕ್ಕಿಗಳು, ಪುಸ್ತಕಗಳು ಮತ್ತು ನನ್ನ ನಾಯಿಗಳ ಫೋಟೊಗಳ ಮೂಲಕ ನಿಧಾನವಾಗಿ ಸಾಮಾಜಿಕ ಜಾಲತಾಣದಲ್ಲಿ ತೊಡಗಿಕೊಳ್ಳಲು ಶುರುಮಾಡಿದ್ದೆ' ಎಂದು ರಮ್ಯಾ ಹೇಳಿದ್ದಾರೆ.

  ಏಲಿಯನ್ ರೀತಿ ಅನಿಸಿತು

  ಏಲಿಯನ್ ರೀತಿ ಅನಿಸಿತು

  'ತುಂಬಾ ಸಮಯದಿಂದ ನಿಮ್ಮನ್ನು ನೋಡಿಲ್ಲ. ಒಂದು ಸೆಲ್ಫಿ ಪೋಸ್ಟ್ ಮಾಡಿ ಎಂದು ಮನವಿಗಳ ಪ್ರವಾಹವೇ ಬಂದಿತ್ತು. ಯಾಕಾಗಬಾರದು ಎಂದು ಯೋಚಿಸಿದೆ. ಆದರೆ ತೀರಾ ಹೀನಾಯವಾಗಿ ವಿಫಲಳಾದೆ. ಕ್ಯಾಮೆರಾ ಮುಂದೆ ನಿಂತು ಪೋಸ್‌ ಕೊಡುವುದು ನನಗೆ ಏಲಿಯನ್ ರೀತಿ ಅನಿಸಿತು.

  ಚಿರಂಜೀವಿ ಸರ್ಜಾ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ರಮ್ಯಾ

  ಒಬ್ಬಳಿಗೇ ಸಾಧ್ಯವಾಗಲಿಲ್ಲ

  ಒಬ್ಬಳಿಗೇ ಸಾಧ್ಯವಾಗಲಿಲ್ಲ

  ಕೆಲವು ಪ್ರಯತ್ನಗಳ ನಂತರ ಬಿಟ್ಟುಬಿಟ್ಟೆ. ಸೆಲ್ಫಿಯಲ್ಲಿ ನನ್ನ ನಾಯಿಗಳನ್ನೂ ಸೇರಿಸಿಕೊಳ್ಳಲು ಪ್ರಯತ್ನಿಸಿದೆ. ಏಕೆಂದರೆ ನಾನೊಬ್ಬಳೇ ಸೆಲ್ಫಿ ತೆಗೆದುಕೊಳ್ಳಲು ಕಷ್ಟ ಮತ್ತು ಕಿರಿಕಿರಿಯೆನಿಸಿತು. ಈ ಕಷ್ಟವನ್ನು ಅರಿತುಕೊಂಡು ಶಮನ ಮಾಡಲು ಪ್ರಯತ್ನಿಸುತ್ತಿದ್ದೇನೆ.

  ವರ್ಷದ ಬಳಿಕ ಫೇಸ್ ಬುಕ್ ನಲ್ಲಿ ರಮ್ಯಾ ಪ್ರತ್ಯಕ್ಷ: ಏನಂತ ಪೋಸ್ಟ್ ಮಾಡಿದ್ದಾರೆ ನೋಡಿ

  ಇನ್ನೂ ಚೆನ್ನಾಗಿದ್ದೇನೆ...

  ಇನ್ನೂ ಚೆನ್ನಾಗಿದ್ದೇನೆ...

  ಹೀಗಾಗಿ ನನ್ನ ಹಿಂದಿನ ಕೆಲವು ಸೆಲ್ಫಿಗಳನ್ನು ಪೋಸ್ಟ್ ಮಾಡಲು ನಿರ್ಧರಿಸಿದೆ. ನನ್ನ ಫೋನ್‌ನಲ್ಲಿರುವ ಸೆಲ್ಫಿಗಳು ಹೀಗೆ ಕಾಣಿಸುತ್ತಿವೆ. ಇದು ವಿಶ್ರಾಂತಿಯಲ್ಲಿರುವ ನನ್ನ ಮುಖ ಎಂದು ನಾನು ಖಚಿತಪಡಿಸಬಲ್ಲೆ. ಗಮನಿಸಿ, ಈ ಚಿತ್ರಗಳು ಫೋಟೊಶಾಪ್ ಮಾಡಿರುವುದಲ್ಲ. ಕೆಲವನ್ನು ಕ್ರಾಪ್ ಮಾಡಿರಬಹುದು. ಹಾಗೆಯೇ ದಯವಿಟ್ಟು ಗಮನಿಸಿ, ಈ ಫೋಟೊಗಳಿಗಿಂತಲೂ ನಾನು ಚೆನ್ನಾಗಿದ್ದೇನೆ ಎಂದು ರಮ್ಯಾ ಹೇಳಿದ್ದಾರೆ.

  English summary
  Actress Ramya Divya Spandana said the pictures she has posted on Instagram are not photoshopped.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X