For Quick Alerts
  ALLOW NOTIFICATIONS  
  For Daily Alerts

  ನಟಿ ರಮ್ಯ ಕಮ್‌ಬ್ಯಾಕ್‌ ಕನಸು ನನಸಾಗಲೇ ಇಲ್ಲ!

  |

  ನಟಿ ರಮ್ಯ ಇಂದು ಪುನೀತ್‌ರಾಜ್‌ಕುಮಾರ್‌ ಅವರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ. ಅಪ್ಪು ಇಲ್ಲದೆ ಇರುವುದನ್ನು ನೆನಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ರಮ್ಯ ದುಃಖ ವ್ಯಕ್ತ ಪಡಿಸಿದರು. ಸ್ಯಾಂಡಲ್‌ವುಡ್‌ನಲ್ಲಿ ರಮ್ಯ ಮತ್ತು ಅಪ್ಪು ಅವರದ್ದು ಸೂಪರ್‌ ಹಿಟ್‌ ಜೋಡಿ. ಇವರ ಕಾಂಬಿನೇಷನ್‌ನಲ್ಲಿ ಸಿನಿಮಾ ಬರುತ್ತೆ ಅಂದರೆ ಅದು ಹಿಟ್‌ ಲಿಸ್ಟ್‌ ಸೇರಿ ಬಿಡುತ್ತಿತ್ತು.

  ಅಪ್ಪುಗಾಗಿ ಪುಟಗಟ್ಟಲೆ ಭಾವನಾತ್ಮಕ ಸಂದೇಶ ಬರೆದ ರಮ್ಯಾ

  ಅಷ್ಟಕ್ಕೂ ರಮ್ಯ ಪುನೀತ್‌ ರಾಜ್‌ಕುಮಾರ್‌ ಅವರ ಜೊತೆಗೇನೆ ತಮ್ಮ ಸಿನಿಮಾ ಜರ್ನಿಯನ್ನು ಆರಂಭಿಸಬೇಕಿತ್ತು. ಆದ್ರೆ ಕಾರಣಾಂತರಗಳಿಂದ ಅಪ್ಪು ಸಿನಿಮಾವನ್ನು ರಮ್ಯ ಮಾಡಲಿಲ್ಲ. ಅಪ್ಪು ಎರಡನೇ ಸಿನಿಮಾ ಅಭಿ ಚಿತ್ರದ ಮೂಲಕ ರಮ್ಯ ಲಾಂಚ್‌ ಆದರು. ಅಭಿ, ಆಕಾಶ್, ಅರಸು ಸಿನಿಮಾಗಳನ್ನು ರಮ್ಯ ಮತ್ತು ಅಪ್ಪು ಜೊತೆಯಾಗಿ ಮಾಡಿದ್ದಾರೆ.

  ಇನ್ನೂ ಇತ್ತೀಚೆಗೆ ರಮ್ ಸಿನಿಮಾ ರಂಗದಿಂದ ದೂರಾಗಿದ್ರು. ಸಿನಿಮಾಗಳನ್ನು ಮಾಡುವುದಿಲ್ಲ ಅನ್ನುವ ನಿರ್ಧಾರ ತೆಗೆದುಕೊಂಡಿದ್ದರು. ರಾಜಕೀಯದಲ್ಲಿ ತೊಡಗಿಸಿಕೊಂಡ ಬಳಿಕ ಸಿನಿಮಾ ಬಿಟ್ಟಿದ್ದಾರೆ. ಆದ್ರೆ ರಮ್ಯಾಗೆ ಸಾಮಾಜಿಕ ಜಾಲಾಣದಲ್ಲಿ ಎದುರಾಗುತ್ತಿದ್ದ ಒಂದೇ ಪ್ರಶ್ನೆ ಅಂದ್ರೆ, ಅದು ನೀವು ಸಿನಿಮಾ ಮತ್ತೆ ಯಾವಾಗ ಮಾಡುತ್ತೀರ ಎನ್ನುವುದು.

  ಈ ಪ್ರಶ್ನೆಗೆ ರಮ್ಯ ಸದ್ಯದಲ್ಲೇ ಉತ್ತರಿಸ ಬೇಕು ಎಂದು ಕೊಂಡಿದ್ದರು. ಪುನೀತ್‌ ರಾಜ್‌ಕುಮಾರ್‌ ಅವರ ಜೊತೆಗೆ ಮತ್ತೇ ಸಿನಿಮಾ ಮಾಡುತ್ತಿದ್ದೇನೆ. ಈ ಮೂಲಕ ಮತ್ತೇ ಕಮ್ ಬ್ಯಾಕ್‌ ಮಾಡುತ್ತಿದ್ದೇನೆ ಎಂದು ಸಾರಿ ಸಾರಿ ಹೇಳಬೇಕು ಎಂದು ರಮ್ಯ ಬಣ್ಣದ ಕನಸು ಕಟ್ಟಿದ್ದರು. ಈ ಬಗ್ಗೆ ರಮ್ಯ ಪುನೀತ್‌ ರಾಜ್‌ಕುಮಾರ್‌ ಜೊತೆಗೂ ಮಾತನಾಡಿದ್ದರು.

  ಇಂದು ಅಂತಿಮ ದರ್ಶನದ ನಂತರ ಮಾತನಾಡಿದ ರಮ್ಯ ಈ ವಿಚಾರವನ್ನ ಮತ್ತೇ ಪ್ರಸ್ತಾಪಿಸಿದರು. "ಅಭಿ ಸಿನಿಮಾದ ಮೂಲಕ ನಾನು ಪ್ರವೇಶ ಮಾಡಿದೆ. ಅಪ್ಪು ಜೊತೆ ಮತ್ತೊಮ್ಮೆ ಕಮ್‌ ಬ್ಯಾಕ್ ಮಾಡುವ ಕನಸಿತ್ತು. ಮತ್ತೆ ಸಿನಿಮಾ ಮಾಡಿದರೆ ಅಪ್ಪು ಜೊತೆ ಎಂದುಕೊಂಡಿದ್ದೆ. ಅಪ್ಪು ಕೂಡ ನನಗೆ ಸಾಕಷ್ಟು ಬಾರಿ‌ ಹೇಳಿದ್ದರು. ಆದರೆ ಈಗ ಜೊತೆಗೆ ಮತ್ತೊಂದು ಸಿನಿಮಾ ಮಾಡುವ ಕನಸು ಕನಸಾಗಿ ಉಳಿಯಿತು'. ಎಂದು ರಮ್ಯ ಮಾತನಾಡಿದ್ದಾರೆ.

  ಇನ್ನೂ ನಿನ್ನೆಯೂ ಅಪ್ಪು ಅಗಲಿಕೆ ಬಗ್ಗೆ ರಮ್ಯ ನೋವನ್ನ ಹೊರ ಹಾಕಿದ್ದರು. "ಅಪ್ಪು ಅಗಲಿಕೆ ನಂಬೋಕೆ ಆಗೊಲ್ಲ.. ದ್ವಿತ್ವ ಸಿನಿಮಾ ಲಾಂಚ್‌ ಸಮಯದಲ್ಲಿ ಮಾತಾಡಿದ್ದಿವಿ ಅದೆ ಕೊನೆ. ನಾನು ಕಮ್‌ ಬ್ಯಾಕ್‌ ಮಾಡಿದ್ರೆ ನಿಮ್ಮ ಜೊತೆಗೆನೆ ಅಂತ ಹೇಳಿದ್ದೆ. ಅವರು ಕೂಡ ಒಂದೊಳ್ಳೆ ಸಿನಿಮಾ ಮಾಡೋಣ ಅಂತ ಹೇಳಿದ್ದರು. ಅದೆ ಕೊನೆದಾಗಿ ಅಪ್ಪು ಜೊತೆಗೆ ಮಾತಾಡಿದ್ದು ರಮ್ಯ ಭಾವುಕರಾಗಿದ್ದಾರೆ. ಪ್ರತಿ ಚಿತ್ರದಲ್ಲಿ ಅಭಿನಯಿಸಿದಾಗ ತುಂಬಾ ನಗಿಸುವರು, ಡಲ್‌ನಲ್ಲಿ ನಾನು ಅವ್ರನ್ನ ನೋಡೆ ಇಲ್ಲ. ಸದಾ ಕಾಲೆಳೆದು ನಗಿಸುತ್ತ ಇದ್ದರು. ನಾನು ಟೆನ್ಷನ್‌ನಲ್ಲಿ ಇದ್ದರೆ ಯಾಕೆ ಅಂತ ಕೇಳುತ್ತಿದ್ರು, ಖುಷಿಯಾಗಿ ಇರಿ ಎಂದು ಸದಾ ಹೇಳುತ್ತಿದ್ದರು.

  Actress Ramya Dream Will Never Become True

  ನಾನು ರಾಜಕೀಯಕ್ಕೆ ಹೋದಾಗಲು ಉತ್ತಮ ಸಪೋರ್ಟ್ ಮಾಡಿದ್ದರು. ಅಭಿಮಾನಿಗಳನ್ನು ತುಂಬಾ ಗೌರವದಿಂದ ನೋಡಿಕೊಳ್ಳುತ್ತಾ ಇದ್ದರು. ಅವರ ಜೊತೆಗೆ ಸಿನಿಮಾ ಮಾಡಿ ನಾನು ತುಂಬಾ ಒಳ್ಳೆ ಗುಣಗಳನ್ನು ಕಲಿತಿದ್ದೇನೆ. ಅವರು ಪ್ರತಿಯೊಬ್ಬರನ್ನು ಸಪೋರ್ಟ್ ಮಾಡುತ್ತಾ ಇದ್ದರು. ಯಾವುದಕ್ಕೂ ಇಲ್ಲ ಅಂತ ಇರಲಿಲ್ಲ. ಚಿತ್ರರಂಗದಲ್ಲಿ ಎಲ್ಲರೂ ಬದಲಾಗುತ್ತಾರೆ. ಆದರೆ ಅಪ್ಪು ಬದಲಾಗಲಿಲ್ಲ' ಎಂದು ರಮ್ಯ ನಿನ್ನೆ ಭಾವುಕರಾಗಿದ್ದರು.

  ಪುನೀತ್‌ ರಾಜ್‌ಕುಮಾರ್‌ ನಿಧನಕ್ಕೆ ಹಲವಾರು ಬಾಲಿವುಡ್ ತಾರೆಯರು ಕೂಡ ಸಂತಾಪ ಸೂಚಿಸಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ದುಃಖವನ್ನು ಹೊರಹಾಕಿದ್ದಾರೆ. ಪುನೀತ್ ರಾಜಕುಮಾರ್ ಅವರ ಹಠಾತ್ ನಿಧನದಿಂದ ದೇಶಾದ್ಯಂತ ಕಂಬನಿ ಮಿಡಿಯುವಂತೆ ಮಾಡಿದೆ. ಅಪ್ಪು ಅಂತಿಮ ದರ್ಶನ ಪಡೆಯಲು ಹೊರ ರಾಜ್ಯದ ಸ್ಟಾರ್‌ ನಟರು ಆಮಿಸುತ್ತಿದ್ದಾರೆ.

  English summary
  Actress Ramya's dream to Come back to KFI With Puneeth Rajkumar Will Now Not Possible.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X