For Quick Alerts
  ALLOW NOTIFICATIONS  
  For Daily Alerts

  ನಟಿ ರಮ್ಯಾ ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್?

  |

  ಸ್ಯಾಂಡಲ್ ವುಡ್ ನ ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಫೇಸ್ ಬುಕ್ ಖಾತೆಯನ್ನು ವಿದೇಶಿ ಕಿಡಿಗೇಡಿಗಳು ಹ್ಯಾಕ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಈಗ ಸ್ಯಾಂಡಲ್ ವುಡ್ ನ ಮತ್ತೋರ್ವ ನಟಿಯ ಅಕೌಂಟ್ ಹ್ಯಾಕ್ ಆಗಿದೆ. ನಟಿ ಮತ್ತು ರಾಜಕಾರಣಿ ರಮ್ಯಾ ಅವರ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದೆ ಎನ್ನಲಾಗುತ್ತಿದೆ.

  Ayogya ಸಿನಿಮಾದ ಕ್ಲೈಮ್ಯಾಕ್ಸ್ ಸನ್ನಿವೇಶದ ತೆರೆ ಹಿಂದಿನ ದೃಶ್ಯ | Ayogya Climax Making | Filmibeat Kannada

  ಸೆಲೆಬ್ರಿಟಿಗಳಿಗೆ ಸಾಮಾಜಿಕ ಜಾಲತಾಣ ತಮ್ಮ ಪ್ರಚಾರಕ್ಕೆ ಸಿಗುವ ದೊಡ್ಡ ವೇದಿಕೆ. ಫೇಸ್‌ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂಗಳಲ್ಲಿ ಸದಾ ಬ್ಯುಸಿಯಾಗಿರುತ್ತಾರೆ. ಆದರೆ ಅವರ ಸಾಮಾಜಿಕ ಜಾಲತಾಣ ಖಾತೆಗಳ ಮೇಲೆ ಆಗಾಗ್ಗೆ ಕಿಡಿಗೇಡಿಗಳ ಕಣ್ಣು ಬೀಳುತ್ತೆ. ಖಾತೆಗಳನ್ನು ಹ್ಯಾಕ್ ಮಾಡಿ ಅಲ್ಲಿ ಅಸಭ್ಯ, ಚಿತ್ರ ವಿಚಿತ್ರ ಪೋಸ್ಟ್‌ಗಳನ್ನು ಹಾಕುತ್ತಾರೆ. ಇದೀಗ ರಮ್ಯಾ ಸಾಮಾಜಿಕ ಜಾಲತಾಣ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.

  BREAKING: ಚಂದನ್ ಶೆಟ್ಟಿ ಫೇಸ್‌ಬುಕ್ ಖಾತೆ ಹ್ಯಾಕ್‌

  ಇತ್ತೀಚಿಗೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ವೀವ್ ಆಗಿದ್ದಾರೆ. ಸದಾ ಪೋಸ್ಟ್ ಗಳನ್ನು ಹಾಕುತ್ತಿದ್ದ ರಮ್ಯಾ ಅಕೌಂಟ್ ಮೇಲೆ ಹ್ಯಾಕರ್ಸ್ ಗಳ ಕಣ್ಣುಬಿದ್ದಿದೆ. ಇನ್ಸ್ಟಾಗ್ರಾಂನಲ್ಲಿ ದೋಷ ಕಾಣಿಸಿಕೊಂಡಿದೆ. ಕೆಲವು ಪೋಸ್ಟ್ ಗಳನ್ನು ಮಾಡಲು ಪ್ರಯತ್ನ ಪಡುತ್ತಿದ್ದೀನಿ. ಆದರೆ ಅಪ್ ಲೋಡ್ ಆಗುತ್ತಿಲ್ಲ. ಎಂದು ರಮ್ಯಾ ಹೇಳಿದ್ದಾರೆ.

  ಸ್ಕ್ರೀನ್ ಶಾಟ್ ತೆಗೆದು ಶೇರ್ ಮಾಡಿರುವ ರಮ್ಯಾ, "ಇನ್ಸ್ಟಾಗ್ರಾಂನಲ್ಲಿ ನಾನು ಅಪ್ ಲೋಡ್ ಮಾಡಿರುವ ಫೋಟೋಗಳು ನಿಮಗೆ ನೋಡಲು ಸಾಧ್ಯವಾಗುತ್ತಿದೆಯಾ?" ಎಂದು ಕೇಳಿದ್ದಾರೆ. ರಮ್ಯಾ ಶೇರ್ ಮಾಡಿರುವ ಯಾವುದೇ ಪೋಸ್ಟ್ ಗಳು ಕಾಣುತ್ತಿಲ್ಲ.

  ಇತ್ತೀಚಿಗೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪೋಸ್ಟ್ ಗಳನ್ನು ಹಂಚಿಕೊಂಡಿದ್ದರು. ಅಲ್ಲದೆ ಸ್ಯಾಂಡಲ್ ವುಡ್ ನಟಿಯರ ಜೊತೆ ಆಗಾಗ ಚಾಟ್ ಮಾಡುತ್ತಿರುತ್ತಾರೆ. ಮೊನ್ನೆ ಮೊನ್ನೆಯಷ್ಟೆ ರಮ್ಯಾ ನಟಿ ರಾಧಿಕಾ ಪಂಡಿತ್ ಮತ್ತು ರಶ್ಮಿಕಾ ಮಂದಣ್ಣ ಪೋಸ್ಟ್ ಗಳಿಗೆ ಕಾಮೆಂಟ್ ಮಾಡಿ ಅಚ್ಚರಿ ಮೂಡಿಸಿದ್ದರು.

  English summary
  Actress and Politician Ramya Instagram Account hacked. Ramya Shared how she could not see any of the posts on her page.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X