»   » 'ಕಿರಿಕ್' ಹುಡುಗಿ ಸಾನ್ವಿಯ ಫ್ಯಾಷನ್ ಲೋಕದ ಅದ್ಭುತ ಕ್ಷಣಗಳಿವು

'ಕಿರಿಕ್' ಹುಡುಗಿ ಸಾನ್ವಿಯ ಫ್ಯಾಷನ್ ಲೋಕದ ಅದ್ಭುತ ಕ್ಷಣಗಳಿವು

Posted By:
Subscribe to Filmibeat Kannada

'ಕಿರಿಕ್ ಪಾರ್ಟಿ' ನಾಯಕಿ ರಶ್ಮಿಕಾ ಮಂದಣ್ಣ ಈಗ ಸಾನ್ವಿ ಅಂತಾನೆ ಫೇಮಸ್. ಚೊಚ್ಚಲ ಚಿತ್ರದಲ್ಲೇ ಈ ಬೆಡಗಿ ಸೃಷ್ಟಿ ಮಾಡಿದ ಕ್ರೇಜ್ ಅಷ್ಟಿಷ್ಟಲ್ಲ. ಎಲ್ಲರಿಗೂ ಗೊತ್ತಿರುವಾಗೆ, ರಶ್ಮಿಕಾ ನಾಯಕಿ ಆಗುವ ಮೊದಲು ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದರು. ಬೆಳ್ಳಿತೆರೆಯಲ್ಲಿ ನೋಡಿ ಖುಷಿ ಪಟ್ಟಿದ್ದ ಅಭಿಮಾನಿಗಳಿಗೆ ಫ್ಯಾಷನ್ ಲೋಕದಲ್ಲಿ ರಶ್ಮಿಕಾ ಹೇಗಿದ್ದರು ಎಂಬ ಕುತೂಹಲ ಕಾಡಿರಬಹುದು.

ಈ ಮಾಡೆಲಿಂಗ್ ದಿನಗಳಲ್ಲಿ ರಶ್ಮಿಕಾ ಅವರು ಹೇಗಿದ್ದರು ಎಂಬುದಕ್ಕೆ ಕೆಲವೊಂದು ಫೋಟೋಗಳು ಸಿಕ್ಕಿವೆ. ಈ ಫೋಟೋಗಳಲ್ಲಿ ರಶ್ಮಿಕಾ ಸ್ಟೈಲ್, ಕಲರ್ ಫುಲ್ ಕಾಸ್ಟ್ಯೂಮ್ ನಲ್ಲಿ Ramp Walk ಮಾಡುತ್ತಿದ್ದರೇ ಅದನ್ನ ನೋಡಲು ಎರಡು ಕಣ್ಣು ಸಾಲದು ಎನ್ನಿಸುತ್ತೆ.

'ರಕ್ಷಿತ್-ರಶ್ಮಿಕಾ'ಗೆ ಬಹುದೊಡ್ಡ ಅಚ್ಚರಿ ನೀಡಿದ 'ಫಿಲ್ಮ್ ಫೇರ್' ಸಮಾರಂಭ.!

ಹಾಗಿದ್ರೆ, ಮಾಡೆಲಿಂಗ್ ಲೋಕದಲ್ಲಿ ರಶ್ಮಿಕಾ ಮಂದಣ್ಣ ಅವರ ಝಲಕ್ ಹೇಗಿತ್ತು ಎಂದು ಚಿತ್ರಗಳ ಸಮೇತ ನೋಡಿ.....ಮುಂದಿದೆ ಓದಿ..

ರಶ್ಮಿಕಾ ಮಾಡೆಲಿಂಗ್ ಮೋಡಿ

ಮೂಲತಃ ಕೊಡಗಿನ ಕುವರಿ ಆದ ರಶ್ಮಿಕಾ ಕಾಲೇಜು ಓದುವ ಸಲುವಾಗಿ ಬೆಂಗಳೂರಿಗೆ ಬಂದರು. ಓದುವುದಕ್ಕೆ ಬಂದ ಈ ಹುಡುಗಿ ಮಾಡೆಲಿಂಗ್ ಕ್ಷೇತ್ರವನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಕಾರಣ ಚಿತ್ರರಂಗಕ್ಕೆ ಬರಬೇಕು ಎನ್ನುವ ಆಸೆ.

ಫೋಟೋಗೆ ಫಿದಾ ಆಗಿದ್ದ 'ಕಿರಿಕ್ ಪಾರ್ಟಿ' ಟೀಮ್

ರಶ್ಮಿಕಾ ಮಂದಣ್ಣ ಅವರ ಮಾಡೆಲಿಂಗ್ ನ ಫೋಟೋ ನೋಡಿ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಫಿದಾ ಆಗಿದ್ದರು. ನಂತರ ಆಡಿಷನ್ ಗೆ ಆಹ್ವಾನ ನೀಡಿದ್ದರು.

'ರಶ್ಮಿಕಾ'ಗೆ ಅದೃಷ್ಟವೋ ಅದೃಷ್ಟ: ಈಕೆಗೆ 'ಅರ್ಜುನ್' ಕೂಡ ಬೌಲ್ಡ್.!

ಫರ್ಫೆಕ್ಟ್ ಮಾಡೆಲ್

ಮಾಡೆಲಿಂಗ್ ನಲ್ಲಿ ರಶ್ಮಿಕಾ ಯಾವುದೇ ಉಡುಗೆ ತೊಟ್ಟರು ಅದಕ್ಕೆ ಅಂದ-ಚೆಂದ ಹೆಚ್ಚಿಸುತ್ತಿದ್ದರು. ಅದಕ್ಕೆ ಅವರನ್ನು ಅನೇಕರು ಫರ್ಫೆಕ್ಟ್ ಮಾಡೆಲ್ ಅಂತ ಕರೆಯುತ್ತಿದ್ದರಂತೆ.

Ramp ಶೋ

ಬೆಂಗಳೂರಿನ ಅನೇಕ Ramp ಶೋ ಕಾರ್ಯಕ್ರಮದಲ್ಲಿ ರಶ್ಮಿಕಾ ಭಾಗವಹಿಸಿದ್ದರು, ಆ ಪೈಕಿ ಒಂದು ಕಾರ್ಯಕ್ರಮದ ಫೋಟೋ ಇದು.

ಮದುವೆ ಆಗ್ಬಿಟ್ರು ರಶ್ಮಿಕಾ ಮಂದಣ್ಣ.! ಬೇಕಾದ್ರೆ ನೀವೇ ಈ ಫೋಟೋ ನೋಡಿ.

ಅಕ್ಷಯ್ ಕುಮಾರ್ ಮೆಚ್ಚುಗೆ

ರಶ್ಮಿಕಾ ಮಂದಣ್ಣ ಭಾಗವಹಿಸಿದ್ದ Ramp ಶೋ ಗೆ ಒಮ್ಮೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ರಶ್ಮಿಕಾ ಪ್ರತಿಭೆ ನೋಡಿ ಅಕ್ಷಯ್ ಮೆಚ್ಚಿಕೊಂಡಿದ್ದರು.

ಸುದೀಪ್ ಜೊತೆ ಸಿನಿಮಾ ಮಾಡಿ ಅಂದ್ರೆ ರಶ್ಮಿಕಾ ಹೀಗೆ ಹೇಳಿದ್ರು!

ಫೋಟೋ ಶೂಟ್

ಮಾಡೆಲಿಂಗ್ ಸಮಯದಲ್ಲಿ ರಶ್ಮಿಕಾ ವಿವಿದ ಬಗೆಯ ಫೋಟೋ ಶೂಟ್ ಗಳನ್ನು ಮಾಡಿಸಿದ್ದರು. ಈ ಫೋಟೋಗಳನ್ನು ನೋಡಿದರೆ ಇದು ರಶ್ಮಿಕಾ ಅವರೇನಾ ಎಂಬ ಆಶ್ಚರ್ಯವಾಗುವುದಂತೂ ಖಂಡಿತಾ.

ಹಾಟ್ ಲುಕ್ ನಲ್ಲಿ

ಸಖತ್ ಸ್ಟೈಲ್ ಅಂಡ್ ಹಾಟ್ ಲುಕ್ ನಲ್ಲಿ ರಶ್ಮಿಕಾ ಮಂದಣ್ಣ ಬೈಕ್ ಜೊತೆ ನಿಂತು ಪೋಸ್ ಕೊಟ್ಟಿರುವ ಫೋಟೋ.

ದೇಸಿ ಲುಕ್

ಕೇವಲ ಮಾಡ್ರನ್ ಅಲ್ಲದೆ, ಸೀರೆ ತೊಟ್ಟು ದೇಸಿ ಹುಡುಗಿಯಾಗಿ ಕೂಡ ರಶ್ಮಿಕಾ ಮಿಂಚಿದ್ದರು. ಇನ್ನೂ 2014-15ರ ಸಾಕಷ್ಟು ದೊಡ್ಡ ಮಟ್ಟದ Ramp ಶೋ ಗಳಲ್ಲಿ ರಶ್ಮಿಕಾ ಭಾಗಿಯಾಗಿದ್ದರು.

English summary
Kannada Actress Rashmika Mandanna Modeling Days. Check out in pictures.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada