For Quick Alerts
  ALLOW NOTIFICATIONS  
  For Daily Alerts

  'KGF-2' ಚಿತ್ರೀಕರಣ ಮುಗಿಸಿದ ನಟಿ ರವೀನಾ: ಸಂತಸ ಹಂಚಿಕೊಂಡಿದ್ದು ಹೀಗೆ

  |

  ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಹುಟ್ಟುಹಾಕಿರುವ 'ಕೆಜಿಎಫ್-2' ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಸದ್ಯ ಹೈದರಾಬಾದ್ ನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಕೊನೆಯ ಹಂತದ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಸದ್ಯ ಚಿತ್ರದಿಂದ ಬಂದ ಹೊಸ ಸುದ್ದಿ ಅಂದರೆ ನಟಿ ರವೀನಾ ಟಂಡನ್ ಚಿತ್ರೀಕರಣ ಮುಗಿಸಿ ಮುಂಬೈಗೆ ವಾಪಾಸ್ ಆಗಿದ್ದಾರೆ.

  ಕೆಜಿಎಫ್ ಚಿತ್ರೀಕರಣ ಮುಗಿಸಿದ ರವೀನಾ ಏನ್ ಮಾಡುದ್ರು ಗೊತ್ತಾ! | Raveena Tandon | KGF2 | Yash | Prashanthneel

  ಹೌದು, ಮೊನ್ನೆಮೊನ್ನೆಯಷ್ಟೆ ಕೆಜಿಎಫ್-2 ತಂಡ ಸೇರಿಕೊಂಡಿದ್ದ ರವೀನಾ ಈಗಾಗಲೆ ಚಿತ್ರೀಕರಣ ಯಶಸ್ವಿಯಾಗಿ ಮುಗಿಸಿದ್ದಾರೆ. ಕೊನೆಯ ದಿನದ ಚಿತ್ರೀಕರಣದ ಫೋಟೋವನ್ನು ರವೀನಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಂಡದ ಜೊತೆ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ.

  'KGF-2': 'ರಮಿಕಾ ಸೇನ್' ಜೊತೆ ಮೊದಲ ಫೋಟೋ ಹಂಚಿಕೊಂಡ ರಾಕಿಭಾಯ್ ಹೇಳಿದ್ದೇನು?'KGF-2': 'ರಮಿಕಾ ಸೇನ್' ಜೊತೆ ಮೊದಲ ಫೋಟೋ ಹಂಚಿಕೊಂಡ ರಾಕಿಭಾಯ್ ಹೇಳಿದ್ದೇನು?

  ರವೀನಾ ಟಂಡನ್ ಅದ್ಧೂರಿಯಾಗಿ ಸ್ವಾಗತ ಮಾಡಿದ್ದ ಚಿತ್ರತಂಡ ಈಗ ಅದ್ಧೂರಿಯಾಗಿಯೆ ಬೀಳ್ಕೊಟ್ಟಿದ್ದಾರೆ. ಇಡೀ ಕೆಜಿಎಫ್-2 ತಂಡ ರವೀನಾ ಅವರ ಜೊತೆ ನಿಂತು ಫೋಟೋಗೆ ಪೋಸ್ ನೀಡಿ ಸಂತಸ ವ್ಯಕ್ತಪಡಿಸಿದ್ದಾರೆ.

  ಅಂದ್ಹಾಗೆ ರವೀನಾ ಟಂಡನ್ ಚಿತ್ರದಲ್ಲಿ ರಮಿಕಾ ಸೇನ್ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರಿ ನಿರೀಕ್ಷೆ ಮೂಡಿಸಿರುವ ಚಿತ್ರದಲ್ಲಿ ರವೀನಾ ಪಾತ್ರ ಕೂಡ ಅಷ್ಟೆ ಕುತೂಹಲ ಹುಟ್ಟುಹಾಕಿದೆ. ಮೊದಲ ಭಾಗಕ್ಕಿಂತ ಎರಡನೆ ಭಾಗ ಮತ್ತಷ್ಟು ರೋಚಕವಾಗಿರಲಿದೆಯಂತೆ.

  ಇನ್ನು ಯಶ್ ಮತ್ತು ಸಂಜಯ್ ದತ್ ನಡುವೆ ಭಯಾನಕ ಆಕ್ಷನ್ ದೃಶ್ಯಗಳು ಇರಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ದಿನದಿಂದ ದಿನಕ್ಕೆ ಅಭಿಮಾನಿಗಳಲ್ಲಿ ರೋಚಕತೆ ಹೆಚ್ಚಿಸುತ್ತಿರುವ ಕೆಜಿಎಫ್-2 ಯಾವಾಗ ತೆರೆಗೆ ಬರುತ್ತೆ ಎಂದು ಅಭಿಮಾನಿಗಳು ಉಸಿರುಬಿಡಿ ಹಿಡಿದು ಕಾಯುತ್ತಿದ್ದಾರೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಸಿನಿಮಾ ಅಕ್ಟೋಬರ್ ನಲ್ಲಿ ತೆರೆಗೆ ಬರಲಿದೆ ಎಂದು ಹೇಳಲಾಗುತ್ತಿದೆ.

  English summary
  Bollywood Actress Raveena Tandon wrap up KGF-2 shooting. She is sharing wrap up photo in social media.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X