For Quick Alerts
  ALLOW NOTIFICATIONS  
  For Daily Alerts

  ಡಾಲಿ ಧನಂಜಯ್ ಗೆ ಜೋಡಿಯಾದ 'ಬಿಗಿಲ್' ಸಿನಿಮಾದ ನಟಿ

  |

  ಡಾಲಿ ಖ್ಯಾತಿಯ ನಟ ಧನಂಜಯ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಸಹಿ ಮಾಡಿರುವ ಧನಂಜಯ್ ಇತ್ತೀಚಿಗೆ 'ರತ್ನನ್ ಪ್ರಪಂಚ'ಕ್ಕೆ ಕಾಲಿಟ್ಟಿದ್ದಾರೆ. 'ರತ್ನನ್ ಪ್ರಪಂಚ' ಡಾಲಿ ಅಭಿನಯದ ಹೊಸ ಸಿನಿಮಾ.

  Ayogya ಸಿನಿಮಾದ ಕ್ಲೈಮ್ಯಾಕ್ಸ್ ಸನ್ನಿವೇಶದ ತೆರೆ ಹಿಂದಿನ ದೃಶ್ಯ | Ayogya Climax Making | Filmibeat Kannada

  ಇತ್ತೀಚಿಗಷ್ಟೆ ಈ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಜನದಟ್ಟಣೆ ಇರುವ ರಸ್ತೆಯಲ್ಲಿ ಧನಂಜಯ್ ಒಂದು ಕೈಯಲ್ಲಿ ಮಲ್ಲಿಗೆ ಹೂ ಹಿಡಿದು ಮತ್ತೊಂದು ಕೈಯಲ್ಲಿ ಪೆಪ್ಪರಮೆಂಟು ತುಂಬಿದ ಬಾಟಲಿ ಹಿಡಿದು ಏನನ್ನೋ ನೆನಪಿಸಿಕೊಂಡು ನಗುತ್ತಾ ಬರುತ್ತಿದ್ದಾರೆ. ಈ ಪೋಸ್ಟರ್ ಸಿನಿಮಾದ ಮೇಲಿನ ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ಇದೀಗ ರತ್ನನ್ ಪ್ರಪಂಚ ಸಿನಿಮಾದಿಂದ ಮತ್ತೊಂದು ಸುದ್ದಿ ಹೊರ ಬಿದ್ದಿದೆ. ಈ ಸಿನಿಮಾದಲ್ಲಿ ನಟ ಧನಂಜಯ್ ಗೆ ನಾಯಕಿ ಸಿಕ್ಕಿದ್ದಾರೆ. ಮುಂದೆ ಓದಿ..

  ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಧನಂಜಯ್ ಗೆ ತಾರೆಯರ ಶುಭಾಶಯ: ಯಾರ್ಯಾರ ವಿಶ್ ಹೇಗಿದೆ?

   ಧನಂಜಯ್ ಗೆ ಜೋಡಿಯಾದ ರೆಬಾ

  ಧನಂಜಯ್ ಗೆ ಜೋಡಿಯಾದ ರೆಬಾ

  'ರತ್ನನ್ ಪ್ರಪಂಚ' ಸಿನಿಮಾದಲ್ಲಿ ನಟ ಧನಂಜಯ್ ಗೆ ಜೋಡಿಯಾಗಿ ರೆಬಾ ಮೋನಿಕಾ ಜಾನ್ ಕಾಣಿಸಿಕೊಳ್ಳುತ್ತಿದ್ದಾರೆ. ಮಲಯಾಳಂ ಮತ್ತು ತಮಿಳಿನಲ್ಲಿ ಅನೇಕ ಸಿನಿಮಾ ಮಾಡಿರುವ ರೆಬಾ ಮೋನಿಕಾ, ರತ್ನನ್ ಪ್ರಪಂಚಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅಂದ್ಹಾಗೆ, ರೆಬಾ ಮೂಲತಃ ಮಂಗಳೂರಿನವರು. ಮಲಯಾಳಂ ಸಿನಿಮಾರಂಗದ ಮೂಲಕ ಸಿನಿ ಜೀವನ ಪ್ರಾರಂಭಿಸಿರುವ ರೆಬಾ ತಮಿಳು ಚಿತ್ರರಂಗದಲ್ಲಿಯೂ ಖ್ಯಾತಿ ಗಳಿಸಿದ್ದಾರೆ.

   ಕನ್ನಡದಲ್ಲಿ 2ನೇ ಸಿನಿಮಾ ಮಾಡುತ್ತಿದ್ದಾರೆ ರೆಬಾ

  ಕನ್ನಡದಲ್ಲಿ 2ನೇ ಸಿನಿಮಾ ಮಾಡುತ್ತಿದ್ದಾರೆ ರೆಬಾ

  ದಳಪತಿ ವಿಜಯ್ ಅಭಿನಯದ ಸೂಪರ್ ಹಿಟ್ ಬಿಗಿಲ್ ಸಿನಿಮಾದಲ್ಲಿ ರೆಬಾ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ವಿಶೇಷ ಅಂದರೆ ರೆಬಾ ಈಗಾಗಲೇ ಒಂದು ಕನ್ನಡ ಸಿನಿಮಾಗೆ ಸಹಿ ಹಾಕಿದ್ದಾರೆ. ನಟ ರಿಷಿ ಅಭಿನಯದ 'ಸಕಲಕಲಾವಲ್ಲಭ' ಸಿನಿಮಾದಲ್ಲಿ ರೆಬಾ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ರತ್ನನ್ ಪ್ರಪಂಚ ಸಿನಿಮಾ ಮೂಲಕ ಕನ್ನಡದಲ್ಲಿ ಎರಡನೇ ಸಿನಿಮಾಗೆ ಸಹಿ ಹಾಕಿದ್ದಾರೆ.

  'ರತ್ನನ್ ಪ್ರಪಂಚ'ಕ್ಕೆ ಕಾಲಿಟ್ಟ ಡಾಲಿ ಧನಂಜಯ್

   'ರತ್ನನ್ ಪ್ರಪಂಚ'ದ ಬಗ್ಗೆ ರೆಬಾ ಹೇಳಿದ್ದೇನು?

  'ರತ್ನನ್ ಪ್ರಪಂಚ'ದ ಬಗ್ಗೆ ರೆಬಾ ಹೇಳಿದ್ದೇನು?

  'ರತ್ನನ್ ಪ್ರಪಂಚ' ನಿರ್ದೇಶಕ ರೋಹಿತ್ ಪದಕಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರಕ್ಕೆ ಯೋಗಿ ಜಿ ರಾಜ್ ಮತ್ತು ಕಾರ್ತಿಕ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ನಟಿ ರೆಬಾ ಎಂಟ್ರಿಯ ಬಗ್ಗೆ ನಿರ್ಮಾಪಕ ಕಾರ್ತಿಕ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ರೆಬಾ ಅವರನ್ನು ಸಿನಿಮಾಗೆ ಸ್ವಾಗತ ಮಾಡಿರುವ ತಂಡಕ್ಕೆ, ರೆಬಾ ಈ ಚಿತ್ರದಲ್ಲಿ ಅಭಿನಯಿಸಲು ತುಂಬಾ ಉತ್ಸುಕರಾಗಿರುವುದಾಗಿ ಹೇಳಿದ್ದಾರೆ.

  ಮತ್ತೊಮ್ಮೆ ಮೋಡಿ ಮಾಡಲು ಒಟ್ಟಿಗೆ ಬರುತ್ತಿದ್ದಾರೆ ಟಗರು ಶಿವ-ಡಾಲಿ

   ಧನಂಜಯ್ ಬಳಿ ಇರುವ ಸಿನಿಮಾಗಳು

  ಧನಂಜಯ್ ಬಳಿ ಇರುವ ಸಿನಿಮಾಗಳು

  ಧನಂಜಯ್ ಬಳಿ ಸಾಲು ಸಾಲು ಸಿನಿಮಾಗಳಿವೆ. ಕನ್ನಡ ಮಾತ್ರವಲ್ಲದೆ ತೆಲುಗು ಸಿನಿಮಾದಲ್ಲಿಯೂ ಅಭಿನಯಿಸುತ್ತಿದ್ದಾರೆ. ಕೊನೆಯದಾಗಿ ಪಾಪ್ ಕಾರ್ನ್ ಮಂಕಿ ಟೈಗರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಧನಂಜಯ್ ನಾಯಕ ಮತ್ತು ವಿಲನ್ ಪಾತ್ರ ಎರಡನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಸದ್ಯ ಧನಂಜಯ್ ಸಲಗ, ಪೊಗರು, ಯುವರತ್ನ, ಡಾಲಿ, ತೋತಾಪುರಿ, ಬಡವ ರಾಸ್ಕಲ್, ಹೆಡ್ ಬುಷ್ ಮತ್ತು ತೆಲುಗಿನ 'ಪುಷ್ಪ' ಸಿನಿಮಾದಲ್ಲಿ ಮಿಂಚುತ್ತಿದ್ದಾರೆ. ಅಲ್ಲದೆ ಇನ್ನೂ ಹೆಸರಿಡದ ಸಾಕಷ್ಟು ಸಿನಿಮಾಗಳು ಧನಂಜಯ್ ಬಳಿ ಇವೆ.

  English summary
  'Bigil' fame Actress Reba Monica John joins to dhananjay starrer Ratnan Prapancha movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X