»   » ಬಿಗ್ ಬಾಸ್ ಶೋಗೆ ಬೆಂಕಿ ಬಿರುಗಾಳಿ ರಿಷಿಕಾ ಸಿಂಗ್

ಬಿಗ್ ಬಾಸ್ ಶೋಗೆ ಬೆಂಕಿ ಬಿರುಗಾಳಿ ರಿಷಿಕಾ ಸಿಂಗ್

Posted By:
Subscribe to Filmibeat Kannada
ಹಲವಾರು ಕಾರಣಗಳಿಗಾಗಿ ಸಾಕಷ್ಟು ಸುದ್ದಿಯಲ್ಲಿರುವ ತಾರೆ ರಿಷಿಕಾ ಸಿಂಗ್. ಇತ್ತೀಚೆಗೆ 'ಬೆಂಕಿ ಬಿರುಗಾಳಿ' ಚಿತ್ರದ ಮೂಲಕ ಅವರು ಪ್ರೇಕ್ಷಕರ ಮುಂದೆ ಬಂದಿದ್ದರು. ಈಗ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ದಾರೆ ಎನ್ನುತ್ತವೆ ಮೂಲಗಳು.

ಕನ್ನಡ ಚಿತ್ರರಂಗದ ಇನ್ನೊಬ್ಬ ನಟಿ 'ಕೊಟ್ಲಲ್ಲಪ್ಪೋ ಕೈ' ಖ್ಯಾತಿಯ ನಯನಕೃಷ್ಣಾ ಅವರು 'ಬಿಗ್ ಬಾಸ್' ಮನೆಗೆ ಅಡಿಯಿಡುತ್ತಿದ್ದಾರೆ ಎಂಬ ಸುದ್ದಿಯಿತ್ತು. ಈಗ ರಿಷಿಕಾ ಸಿಂಗ್ ಅವರನ್ನು ಈಟಿವಿ ವಾಹಿನಿ ಆಯ್ಕೆ ಮಾಡಿದೆ ಎನ್ನಲಾಗಿದೆ.

ಬಿಗ್ ಬಾಸ್ ಮನೆಗೆ ಪ್ರವೇಶ ಪಡೆಯಲು ಇವರಿಬ್ಬರ ನಡುವೆ ತೀವ್ರ ಪೈಪೋಟಿ ಇತ್ತು ಎನ್ನಲಾಗಿದ್ದು, ಕಡೆಗೆ ರಿಷಿಕಾ ಸಿಂಗ್ ಅವರು ಮನೆಗೆ ಪ್ರವೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಪ್ರವೇಶದ ಎಪಿಸೋಡ್ ಶನಿವಾರ (ಮೇ.4) ಪ್ರಸಾರವಾಗುವ ಸಾಧ್ಯತೆಗಳಿವೆ.

ಶುಕ್ರವಾರ (ಮೇ.3) ಬಿಗ್ ಬಾಸ್ ಮನೆಯಿಂದ ಇಬ್ಬರು ಸದಸ್ಯರು ಹೊರಬಿದ್ದಿದ್ದಾರೆ. ನಟ ತಿಲಕ್ ಹಾಗೂ ನಿರೂಪಕಿ ಅಪರ್ಣಾ ಅವರು ಎಲಿಮಿನೇಟ್ ಆಗಿದ್ದು, ಈಗ ರಿಷಿಕಾ ಎಂಟ್ರಿ ಮೂಲಕ ಎಂಟು ಮಂದಿ ಉಳಿದಂತಾಗುತ್ತದೆ.

ನಟ, ನಿರ್ದೇಶಕ, ನಿರ್ಮಾಪಕ ಬಷೀದ್ ಅವರು ರಿಷಿಕಾ ಸಿಂಗ್ ಅವರ ಅಶ್ಲೀಲ ವಿಡಿಯೋವನ್ನು ಯೂಟ್ಯೂಬ್ ಗೆ ಹಾಕಿ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದರು. ಬಷೀದ್ ವಿರುದ್ಧ ರಿಷಿಕಾ ಅವರು ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಉಳಿದಂತೆ ರಿಷಿಕಾ ಸಿಂಗ್ ಅವರು ಕಳ್ಳ ಮಳ್ಳ ಸುಳ್ಳ, ಕಂಠೀರವ, ಬೆಂಕಿ ಬಿರುಗಾಳಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಅವರ ಮದುವೆ ಕ್ಯಾನ್ಸಲ್ ಆಗುವ ಮೂಲಕ ಒಂದಷ್ಟು ಮಾನಸಿಕವಾಗಿ ನೊಂದಿದ್ದರು. ಈಗ ಬಿಗ್ ಬಾಸ್ ಮನೆಗೆ ಅಡಿಯಿಡುತ್ತಿದ್ದಾರೆ. (ಏಜೆನ್ಸೀಸ್)

English summary
'Benki Birugali' fame Kannada actress Rishika Singh, is in news for various reasons, all set to enter Bigg Boss Kannada. A reality show where various celebrity contestants compete with each other to win the final cash prize by saving themselves from eliminations.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada