For Quick Alerts
  ALLOW NOTIFICATIONS  
  For Daily Alerts

  ಸಂಜನಾ ಬೆನ್ನಮೇಲೆ ಪ್ರೀತಿಯ ವ್ಯಕ್ತಿ ಹೆಸರು; ಟ್ಯಾಟೂ ಬಗ್ಗೆ ರಿವೀಲ್ ಮಾಡಿದ ನಟಿ

  |

  ಬಹುಭಾಷಾ ನಟಿ ಸಂಜನಾ ಗಲ್ರಾನಿ ಸಿನಿಮಾ ವಿಚಾರಕ್ಕಿಂತ ಹೆಚ್ಚಾಗಿ ಬೇರೆ ಬೇರೆ ವಿಚಾರಗಳಿಗೆ ಸುದ್ದಿಯಲ್ಲಿರುತ್ತಾರೆ. ಜೈಲಿನಿಂದ ಹೊರಬಂದ ಬಳಿಕ ಸಂಜನಾ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಕೊರೊನಾದಿಂದ ಸಂಕಷ್ಟದಲ್ಲಿರುವ ಸಿನಿಮಾ ಕಾರ್ಮಿಕರಿಗೆ ಸಂಜನಾ ತನ್ನ ಕೈಲಾದ ಸಹಾಯ ಮಾಡಿದ್ದಾರೆ.

  ಸಂಜನಾ ಇದೀಗ ಟ್ಯಾಟೂ ವಿಚಾರವಾಗಿ ಸದ್ದು ಮಾಡುತ್ತಿದ್ದಾರೆ. ಬೆನ್ನಮೇಲೆ ತನ್ನ ಪ್ರೀತಿಪಾತ್ರರ ಹೆಸರನ್ನು ಸಂಜನಾ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅಂದಹಾಗೆ ಸಂಜನಾ ಪ್ರೀತಿಯ ವ್ಯಕ್ತಿ ಮತ್ಯಾರು ಅಲ್ಲ ಪತಿ ಅಜೀಜ್ ಪಾಷ. ನಟಿ ಸಂಜನಾ ಕಳೆದ ವರ್ಷ ವೈದ್ಯ ಅಜೀಜ್ ಪಾಷ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟದ್ದರು.

  ಕಳೆದ ವರ್ಷ ಕೊರೊನಾ ಲಾಕ್ ಡೌನ್ ಸಮಯದಲ್ಲಿ ಇಬ್ಬರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಸಂಜನಾ ಮದುವೆ ವಿಚಾರ ಜೈಲು ಸೇರಿದ ಬಳಿಕ ವೈರಲ್ ಆಗಿತ್ತು. ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿರುವ ಅಜೀಜ್ ಜೊತೆ ಸಂಜನಾ ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದರು. 2020ರಲ್ಲಿ ಕೆಲವೇ ಕೆಲವು ಮಂದಿ ಸಮ್ಮುಖದಲ್ಲಿ ಸರಳವಾಗಿ ಮದುವೆಯಾಗಿದ್ದರು.

  ಎಲ್ಲರಿಗೂ ಬೀಗರ ಊಟ ಹಾಕಿಸುವ ಆಸೆ ಇತ್ತು; ಭಾವುಕರಾದ ನಟಿ ಸಂಜನಾಎಲ್ಲರಿಗೂ ಬೀಗರ ಊಟ ಹಾಕಿಸುವ ಆಸೆ ಇತ್ತು; ಭಾವುಕರಾದ ನಟಿ ಸಂಜನಾ

  ಅಜೀಜ್ ಪಾಷ ಅವರನ್ನು ಸಂಜನಾ ತುಂಬಾ ಪ್ರೀತಿಸುತ್ತಾರೆ. ತನ್ನ ಪ್ರೀತಿಯನ್ನು ಈಗ ಹಚ್ಚೆ ಮೂಲಕ ವ್ಯಕ್ತಪಡಿಸಿದ್ದಾರೆ. ಬೆನ್ನಮೇಲೆ ಅಜೀಜ್ ಎಂದು ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಇದೀಗ ಟ್ಯಾಟೂ ಫೋಟೋ ರಿವೀಲ್ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಶೇರ್ ಮಾಡಿ, ದೀರ್ಘವಾಗಿ ಬರೆದುಕೊಂಡಿದ್ದಾರೆ. ಮುಂದೆ ಓದಿ..

  ನನ್ನ ಹೃದಯಕ್ಕೆ ಹತ್ತಿರವಾದ ವ್ಯಕ್ತಿಯ ಹೆಸರು

  ನನ್ನ ಹೃದಯಕ್ಕೆ ಹತ್ತಿರವಾದ ವ್ಯಕ್ತಿಯ ಹೆಸರು

  "ನನ್ನ ಜೀವನದ ಪ್ರೀತಿಯ ಬಗ್ಗೆ ನಾನು ಬಹಿರಂಗಪಡಿಸುತ್ತಿರುವ ಟ್ಯಾಟು ಇಲ್ಲಿದೆ. ಇದು ನನ್ನ ಹೃದಯಕ್ಕೆ ತುಂಬಾ ಹತ್ತಿರವಾದ ವ್ಯಕ್ತಿಯ ಹೆಸರು. ನಾನು ಇದನ್ನು ಬಹಿರಂಗ ಪಡಿಸಿರಲಿಲ್ಲ ಯಾಕಂದ್ರೆ ನನ್ನ ಪ್ರೀತಿಯನ್ನು ವೈಯಕ್ತಿಕವಾಗಿರಿಸಲು ಮತ್ತು ಅನಾವಶ್ಯಕ ಗಾಸಿಪ್‌ಗಳಿಂದ ದೂರ ಇರಲು ಬಯಸುತ್ತೇನೆ" ಎಂದು ಸಂಜನಾ ಹೇಳಿದ್ದಾರೆ.

  ಸಹೋದರ ರಾಕಿ ಬ್ರದರ್‌ನನ್ನು ಶುಗರ್ ಡ್ಯಾಡಿ ಎಂದರು

  ಸಹೋದರ ರಾಕಿ ಬ್ರದರ್‌ನನ್ನು ಶುಗರ್ ಡ್ಯಾಡಿ ಎಂದರು

  "ಈಗ ನಾವು ಅಧಿಕತವಾಗಿ ವಿವಾಹವಾಗಿದ್ದೇವೆ. ನಾನು ಈಗ ಸ್ಟ್ರೆಂತ್ ಜೊತೆ ಬದುಕುತ್ತಿದ್ದೇನೆ. ನಟಿಯರು, ವೃತ್ತಿಜೀವನದಲ್ಲಿ ಎಲ್ಲಾ ಅನಾವಶ್ಯಕ ಆರೋಪಗಳು, ಲಿಂಕ್ ಅಪ್‌ಗಳನ್ನು ಎದುರಿಸಬೇಕು. ನನ್ನ ಕಿರಿಯ ರಾಕಿ ಬ್ರದರ್ ಅನ್ನು ಶುಗರ್ ಡ್ಯಾಡಿ, ಬಾಯ್ ಫ್ರೆಂಡ್ ಎಂದು ಕರೆಯಲಾಯಿತು. ನಟಿಯರೊಡನೆ ಸಾರ್ವಜನಿಕವಾಗಿ ಕಾಣುವ ವ್ಯಕ್ತಿ, ಸಹೋದರನೂ ಬಾಯ್ ಫ್ರೆಂಡ್ ಆಗುತ್ತಾನೆ? ಇದು ಮಾನಸಿಕವಾಗಿ ತೊಂದರೆ ಕೊಡುವುದು ಅಲ್ಲವೇ?" ಎಂದು ಸಂಜನಾ ಪ್ರಶ್ನೆ ಮಾಡಿದ್ದಾರೆ.

  ಸಂಕುಚಿತ ಸಮಾಜದಲ್ಲಿ ಬದುಕುತ್ತಿದ್ದೇವೆ

  ಸಂಕುಚಿತ ಸಮಾಜದಲ್ಲಿ ಬದುಕುತ್ತಿದ್ದೇವೆ

  "ಎದುರಾಳಿ ವ್ಯಕ್ತಿ ಸ್ನೇಹಿತ ಅಥಾವ ಹಿತೈಷಿ, ಒಬ್ಬ ಪ್ರಸಿದ್ಧ ನಟ, ರಾಜಕಾರಣಿ ಅಥಾವ ಕ್ರಿಕೆಟಿಗನಾಗಿರಬಹುದು, ಯಾವುದೇ ಆಧಾರವಿಲ್ಲದೆ ಸ್ನೇಹಕ್ಕಿಂತ ಮಿಗಿಲಾಗಿದ್ದು ಎಂದು ಘೋಷಿಸಿ ಬಿಡುತ್ತೀರಿ. ಇದು ವಿಭಿನ್ನ ಆವೃತ್ತಿಯ ಕಥೆಗಳು. ಎಂಥ ಸಂಕುಚಿತ ಮನೋಭಾವದ ಸಮಾಜದಲ್ಲಿದ್ದೇವೆ ಎಂದು ಅಸಹ್ಯವಾಗುತ್ತೆ. 2021ರಲ್ಲೂ ಅನೇಕರು ಸಂಬಂಧವನ್ನು ತುಂಬಾ ಚೀಪ್ ಆಗಿ ಜಡ್ಜ್ ಮಾಡುತ್ತಾರೆ" ಎಂದಿದ್ದಾರೆ.

  ಕೊನೆ ಕ್ಷಣದಲ್ಲಿ ಒಳಿತು ಮಾಡು ಮನುಷ್ಯ ಹಾಡು ಹಾಡಿದ ನವೀನ್ ಸಜ್ಜು | Filmibeat Kannada
  ಕಳೆದ 15 ವರ್ಷಗಳಿಂದ ಜೊತೆಗಿದ್ದೀರಿ

  ಕಳೆದ 15 ವರ್ಷಗಳಿಂದ ಜೊತೆಗಿದ್ದೀರಿ

  "ಇಲ್ಲಿ ನನ್ನ ದೇಹದ ಒಂದು ಭಾಗವಿದೆ. ಅಲ್ಲಿ ನಾನು ಪ್ರೀತಿಸುವ ವ್ಯಕ್ತಿಗೆ ಅರ್ಪಿಸುತ್ತೇನೆ. ಅವರ ಹೆಸರನ್ನು ಬರೆಸಿಕೊಳ್ಳುತ್ತೇನೆ. ಇದು ಎಂದೆಂದಿಗೂ. ಲವ್ ಯು ಅಜೀಜ್. ನನ್ನ ಜೀವನದ ಪ್ರತಿ ವರ್ಷವೂ ನಾನು ಧನ್ಯವಾದ ಹೇಳುತ್ತೇನೆ. ಕಳೆದ 15 ವರ್ಷಗಳಿಂದ ನೀವು ನನಗೆ ನಿಜವಾದ ಸ್ನೇಹಿತ, ಪ್ರೇಮಿ, ಗಂಡ ಮತ್ತು ತಂದೆಯಂತೆ ಮಾರ್ಗದರ್ಶಕರಾಗಿದ್ದೀರಿ." ಎಂದು ಸಂಜನಾ ದೀರ್ಘವಾಗಿ ಬರೆದುಕೊಂಡಿದ್ದಾರೆ.

  English summary
  Actress Sanjjana Galrani Tattooed her husband Azeez Name.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X