»   » ನಗ್ನ ವಿಡಿಯೋ ಬಗ್ಗೆ ಫೇಸ್ ಬುಕ್ ನಲ್ಲಿ ಮತ್ತೊಮ್ಮೆ ಕ್ಲಾರಿಟಿ ಕೊಟ್ಟ ಸಂಜನಾ

ನಗ್ನ ವಿಡಿಯೋ ಬಗ್ಗೆ ಫೇಸ್ ಬುಕ್ ನಲ್ಲಿ ಮತ್ತೊಮ್ಮೆ ಕ್ಲಾರಿಟಿ ಕೊಟ್ಟ ಸಂಜನಾ

Posted By:
Subscribe to Filmibeat Kannada

ಕಳೆದ ಎರಡು ದಿನಗಳಿಂದ ಸಂಜನಾ ಗಲ್ರಾನಿ ಅವರ 'ದಂಡುಪಾಳ್ಯ' ವಿವಾದ ದೊಡ್ಡ ಚರ್ಚೆಯಾಗುತ್ತಿದೆ. 'ದಂಡುಪಾಳ್ಯ' ಚಿತ್ರದಲ್ಲಿ ಸಂಜನಾ ಬೆತ್ತಲಾಗಿದ್ದರು ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಸ್ಪಷ್ಟನೆ ಕೊಟ್ಟ ನಟಿ ಸಂಜನಾ ಸಾಕ್ಷಿ ಸಮೇತ 'ತಾನು ಚಿತ್ರದಲ್ಲಿ ಬೆತ್ತಲಾಗಿಲ್ಲ' ಎಂದು ಮಾಧ್ಯಮಗಳ ಮುಂದೆ ಸಮರ್ಥಿಸಿಕೊಂಡಿದ್ದರು.

ಈಗ, ಮತ್ತೊಮ್ಮೆ ಫೇಸ್ ಬುಕ್ ನಲ್ಲಿ ಈ ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ಕೊಟ್ಟಿದ್ದಾರೆ. ಬರವಣಿಗೆಯ ಮೂಲಕ ನಡೆದಿದ್ದೇನು? ಈ ಘಟನೆ ಏನಾಯಿತು? ಇದಕ್ಕೆ ಹೊಣೆ ಯಾರು? ಎಂಬುದರ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಅಷ್ಟೇ ಅಲ್ಲದೇ, ನಮ್ಮ ನಡೆಯ ಬಗ್ಗೆಯೂ ಕೂಡ ನಟಿ ಸಂಜನಾ ಸಮರ್ಥಿಸಿಕೊಂಡಿದ್ದಾರೆ. ಹಾಗಿದ್ರೆ, ಸಂಜನಾ ಅವರು ಫೇಸ್ ಬುಕ್ ನಲ್ಲಿ ಏನೆಲ್ಲಾ ಬರೆದುಕೊಂಡಿದ್ದಾರೆ ಎಂಬುದನ್ನ ಮುಂದೆ ಓದಿ.....

ಜೇಮ್ಸ್ ಬಾಂಡ್ ಸಿನಿಮಾವಾದ್ರೂ ನಾನು ನಗ್ನವಾಗಲ್ಲ

''ಜೇಮ್ಸ್ ಬಾಂಡ್ ಚಿತ್ರವಾಗಿದ್ದರೂ ಕೂಡ ನಾನು ಯಾವುದೇ ಕಾರಣಕ್ಕೂ ನೂರಕ್ಕೆ ನೂರರಷ್ಟು ನಗ್ನವಾಗಿ ಅಭಿನಯಿಸುತ್ತಿರಲಿಲ್ಲ. ಅಂತಹ ದೃಶ್ಯದ ಚಿತ್ರೀಕರಣಕ್ಕೂ ನಾನು ಸಮ್ಮತಿಸುವುದಿಲ್ಲ. 'ದಂಡುಪಾಳ್ಯ' ಚಿತ್ರದ ದೃಶ್ಯ ನನ್ನ ಅರಿವಿಗೆ ಬಾರದೆ, ಕಂಪ್ಯೂಟರ್ ಗ್ರಾಫಿಕ್ಸ್ ಪರಿಣಾಮವಾಗಿದೆ ಆಗಿರುವುದು'' - ಸಂಜನಾ ಗಲ್ರಾನಿ, ನಟಿ

ಬೆತ್ತಲೆ ವಿಡಿಯೋ ವಿವಾದ ಹಿನ್ನೆಲೆ ಶ್ರೀನಿವಾಸ್ ರಾಜು ವಿರುದ್ಧ ಕ್ರಮ: ಕೆಎಫ್‌ಸಿಸಿ

ನಾನೊಬ್ಬ ವೃತ್ತಿನಿರತೆ ಕಲಾವಿದೆ

''ನನ್ನ ಪಾತ್ರಕ್ಕೆ ಸೂಕ್ತ ನ್ಯಾಯ ಒದಗಿಸಬೇಕು ಹಾಗೂ ಅದಕ್ಕೆ ನೈಜ ಕಳೆ ತುಂಬಬೇಕು ಎಂಬುದೇ ನನ್ನ ಧ್ಯೇಯ. ನಮ್ಮ ಗೌರವಾನ್ವಿತ ಸಂಸ್ಕೃತಿಗೆ ಮತ್ತು ನಂಬಿಕೆಗೆ ನಾನು ಧಕ್ಕೆ ತರುವುದಿಲ್ಲ. ಹೆಣ್ತನಕ್ಕೆ ಅಪಮಾನ ಮಾಡುವ ಹೀನ ಮನಸ್ಸು ಮಾಡುವುದಿಲ್ಲ'' - ಸಂಜನಾ ಗಲ್ರಾನಿ, ನಟಿ

'ಟಾಪ್ ಲೆಸ್' ವಿವಾದದಿಂದ ಕಣ್ಣೀರು ಹಾಕಿದ ಸಂಜನಾ ತಾಯಿ

ಇದೊಂದು ದಿಟ್ಟ ಪ್ರಯತ್ನ ಅಂದುಕೊಂಡಿದ್ದೆ

''ಈ ಪಾತ್ರವನ್ನ ನಿರ್ವಹಿಸುವಾಗ ಇದೊಂದು ದಿಟ್ಟ ಪ್ರಯತ್ನ ಅಂದುಕೊಂಡಿದ್ದೆ. ಇದರಿಂದ ಚಿತ್ರಕ್ಕೆ ಒಳ್ಳೆಯದಾಗುತ್ತೆ, ಇದು ನನ್ನ ಪಾತ್ರದ ನೈಜತೆಗೆ ಬೆಂಬಲವಾಗುವುದು ಎಂಬ ಪರಿಕಲ್ಪನೆ ನನ್ನಲ್ಲಿತ್ತು. ಬೇರೆ ಯಾವ ಆಮಿಷವೂ ನನಗೆ ಇರಲಿಲ್ಲ'' - ಸಂಜನಾ ಗಲ್ರಾನಿ, ನಟಿ

ದಂಡುಪಾಳ್ಯ ವಿವಾದದ ರಹಸ್ಯವನ್ನು 'ಬೆತ್ತಲು' ಮಾಡಿದ ಸಂಜನಾ

ನನ್ನ ಚಾರಿತ್ರ್ಯಕ್ಕೆ ಮಸಿ ಬಳಿಯುವ ಕೆಲಸ ಆಗಿದೆ

''ಆದ್ರೆ, ನನ್ನ ಪಾತ್ರದ ದೃಶ್ಯ ಬೇರೆಯದೇ ಛಾಯೆ ಪಡೆದಿದೆ. ಕಂಪ್ಯೂಟರ್ ಗ್ರೇಡಿಂಗ್ ನಂತರ ಹೀಗಾಗಿದೆ. ಇಡೀ ವಿಡಿಯೋವನ್ನ ಬದಲಾಯಿಸಿದೆ. ಇದೊಂದು ರೀತಿಯ ಕೈಚಳಕವೇ ಸರಿ. ನನ್ನ ಚಾರಿತ್ರ್ಯಕ್ಕೆ ಮಸಿ ಬಳಿಯುವ ಕೆಲಸ ಆಗಿದೆ. ಇದಕ್ಕೆ ನಾನು ತಂತ್ರಜ್ಞರನ್ನ ನಿಂದಿಸುವುದಿಲ್ಲ. ಬದಲಾಗಿ ಕಂಪ್ಯೂಟರ್ ಗ್ರೇಡಿಂಗ್ ಅಳವಡಿಸಿ ಅವಲೋಕಿಸಿ ಅಧ್ಯಯನ ಮಾಡಬೇಕಿತ್ತು'' - ಸಂಜನಾ ಗಲ್ರಾನಿ, ನಟಿ

ದಯವಿಟ್ಟು ವಿಡಿಯೋ ತೆಗೆದುಹಾಕಿ

''ಹೀಗಾಗಿ, ನಾನು ಕೇಳಿಕೊಳ್ಳುವುದೇನಂದರೆ ಸಾಮಾಜಿಕ ಜಾಲಜಾಣದಿಂದ ಈ ವಿಡಿಯೋವನ್ನ ತೆಗೆದು ಹಾಕಿ. ನಾನು ಸೆನ್ಸಾರ್ ಮಂಡಳಿಯ ತೀರ್ಮಾನವನ್ನ ಗೌರವಿಸುತ್ತೇನೆ. ಇದು ಅಸಲಿಯಲ್ಲ. ಯಾರೋ ದುರುದ್ದೇಶದಿಂದ ಈ ವಿಡಿಯೋ ಮಾಡಲಾಗಿದೆ. ಇದರಲ್ಲಿ ನನ್ನ ಪಾತ್ರ ಕೊಂಚವೂ ಇಲ್ಲ. ನನ್ನ ಕಲೆಗೆ ಮತ್ತು ನನ್ನ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಇಂತಹ ಕೆಲಸಕ್ಕೆ ಬೆಂಬಲಿಸಬಾರದು ಎಂದು ವಿನಂತಿಸಿಕೊಳ್ಳುತ್ತೇನೆ'' ಸಂಜನಾ ಗಲ್ರಾನಿ, ನಟಿ

'ದಂಡುಪಾಳ್ಯ-2' ಚಿತ್ರದಲ್ಲಿ ಸಂಜನಾ ಬೆತ್ತಲಾಗಿಲ್ಲ, ಸಾಕ್ಷಿ ಇಲ್ಲಿದೆ

English summary
Actress Sanjjana Galrani has Taken her Facebook Account to Clarify about 'Dandupalya 2' Controversy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada