»   » ಶಕೀಲಾ ಚಿತ್ರದಲ್ಲಿ ನಟ ಸಂತೋಷ್ ಗೆ ಮಸ್ತ್ ಚಾನ್ಸ್

ಶಕೀಲಾ ಚಿತ್ರದಲ್ಲಿ ನಟ ಸಂತೋಷ್ ಗೆ ಮಸ್ತ್ ಚಾನ್ಸ್

Posted By:
Subscribe to Filmibeat Kannada

'ಬಿಗ್ ಬಾಸ್ ಕನ್ನಡ 2' ಮನೆಯಿಂದ ಹೊರಬಿದ್ದ ಮೇಲೆ ನಟ ಸಂತೋಷ್ ಅವರಿಗೆ ಅದೃಷ್ಟ ಕೈಹಿಡಿದೆ. ಮನೆಯಲ್ಲಿ ಇದ್ದಷ್ಟು ದಿನವೂ ದೀಪಿಕಾ ಕಾಮಯ್ಯ ಹಿಂದೆಯೇ ಸುತ್ತುತ್ತಿದ್ದ ಸಂತೋಷ್ ರೊಮ್ಯಾಂಟಿಕ್ ಸ್ಟಾರ್ ಎನ್ನಿಸಿಕೊಂಡಿದ್ದರು.

ಇದೀಗ ಅವರು ಬಿಗ್ ಬಾಸ್ ಮನೆಯಲ್ಲಿ ಸ್ವಲ್ಪ ಸಮಯ ಇದ್ದ ಶಕೀಲಾ ಅವರ ಚಿತ್ರದಲ್ಲಿ ಭರ್ಜರಿ ಚಾನ್ಸ್ ಗಿಟ್ಟಿಸಿದ್ದಾರೆ. ಶಕೀಲಾ ಅವರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿ ಸಂತೋಷ ಅವರಿಗೆ ಚಾನ್ಸ್ ಕೊಟ್ಟಿದ್ದಾರೆ ಶಕೀಲಾ ಆಂಟಿ.

Actor Santhosh

ಬಿಗ್ ಬಾಸ್ ಗೆ ಬರುವುದಕ್ಕೂ ಮುನ್ನ ಸಂತೋಷ್ ತಮ್ಮ ಹೆಸರನ್ನು ಆರ್ಯವರ್ಧನ್ ಎಂದು ಬದಲಾಯಿಸಿಕೊಂಡಿದ್ದರು. ಆದರೆ ಮನೆಯಲ್ಲಿ ಅವರು ಸಂತೂ, ಸಂತೋಷ್ ಎಂದೇ ಜನಪ್ರಿಯರಾದರು. ಹಾಗಾಗಿ ತಮ್ಮ ಹೆಸರನ್ನು ಸಂತೋಷ್ ಆಗಿಯೇ ಉಳಿಸಿಕೊಳ್ಳುವುದಾಗಿ ಹೇಳಿದ್ದಾರೆ.

ಶಕೀಲಾ ಹಾಗೂ ಸಂತೋಷ್ ಇಬ್ಬರೂ ಬಿಗ್ ಬಾಸ್ ಮನೆಯಲ್ಲಿದ್ದಾಗ ಒಬ್ಬರನ್ನೊಬ್ಬರು ತುಂಬಾ ಹತ್ತಿರದಿಂದ ನೋಡಿಕೊಳ್ಳುವ ಅವಕಾಶ ಸಿಕ್ಕಿತು. ಆಗಲೇ ಶಕೀಲಾ ತಮ್ಮ ಚಿತ್ರದ ನಾಯಕ ಸಂತೋಷ್ ಎಂದುಕೊಂಡಿದ್ದರಂತೆ. ಸಂತೋಷ್ ಗೆ 'ಮಠ' ಗುರುಪ್ರಸಾದ್ ಅವರು ಚಾನ್ಸ್ ಕೊಡುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಅಂದಹಾಗೆ ಶಕೀಲಾ ಅವರು 'ಬಿ' ಗ್ರೇಡ್ ಚಿತ್ರಗಳಿಗೆ ಹೆಸರಾದವರು. ಬಳಿಕ ಅವರು ಪೋಷಕ ಪಾತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್ನು ಸಂತೋಷ್ ಅವರಿಗೆ ಯಾವ ರೀತಿಯ ಪಾತ್ರ ಕೊಡುತ್ತಾರೆ ಎಂಬುದು ಕಾದು ನೋಡಬೇಕು. (ಫಿಲ್ಮಿಬೀಟ್ ಕನ್ನಡ)

English summary
Talking to a leading daily, actor Santhosh said that he has already planned to work on two movie with the participant from the Bigg Boss Kannada 2. He will be seen in a Kannada movie to be directed by Guruprasad. He added that he will act in a Tamil movie to be directed by Shakeela.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada