Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವಾರಣಾಸಿಯಿಂದ ಬಂದು, ಕನ್ನಡ ಕಲಿತು, ಡಬ್ ಮಾಡಿದ ಶಾನ್ವಿ
Recommended Video
ವಾರಣಾಸಿಯಿಂದ ಕರ್ನಾಟಕಕ್ಕೆ ಬಂದ ನಟಿ, ಈಗ ಕನ್ನಡ ಕಲಿತಿದ್ದಾರೆ. ಎಲ್ಲರ ಜೊತೆಗೆ ಕನ್ನಡದಲ್ಲಿ ಮಾತನಾಡಿ, ತಮ್ಮ ಸಿನಿಮಾಗೆ ತಾವೇ ಡಬ್ ಮಾಡಿದ್ದಾರೆ. ಅವರೇ ಶಾನ್ವಿ ಶ್ರೀವಾತ್ಸವ.
'ಚಂದ್ರಲೇಖ' ಸಿನಿಮಾದಿಂದ ಶ್ವಾನ್ವಿ ಶ್ರೀವತ್ಸಾವ ಕನ್ನಡದಲ್ಲಿ ತಮ್ಮ ಕೆರಿಯರ್ ಶುರು ಮಾಡಿದರು. ಆಗ ಚಿತ್ರೀಕರಣದ ಸೆಟ್ ನಲ್ಲಿ ಅವರಿಗೆ ಕನ್ನಡ ಅರ್ಧ ಆಗುತ್ತಿರಲಿಲ್ಲ. ಆದರೆ, ಈಗ ಕನ್ನಡ ಕಲಿತು, ಕನ್ನಡ ಜನರ ಪ್ರೀತಿ ಪಾತ್ರವಾಗಿದ್ದಾರೆ. ಕನ್ನಡ ರಾಜ್ಯೋತ್ಸವದಂದು ಕನ್ನಡಿಗರಿಗೆ ಶಾನ್ವಿ ಪತ್ರ ಬರೆದಿದ್ದಾರೆ.
'ಶ್ರೀಮನ್ನಾರಾಯಣ'ನಿಗೆ
ಮಸಿ
ಬಳಿಯುವ
ಪ್ರಯತ್ನ:
ರಕ್ಷಿತ್
ಟಾರ್ಗೆಟ್
ಮಾಡಿದ
ಕಿಡಿಗೇಡಿಗಳು!
ಮೊದಲ ಮೊದಲು ಶಾನ್ವಿಗೆ ಭಾಷೆ ತಿಳಿಯದ ಕಾರಣಕ್ಕೆ ಶೂಟಿಂಗ್ ಸೆಟ್ ನಲ್ಲಿ ತುಂಬ ಭಯ ಆಗುತ್ತಿತ್ತಂತೆ. 'ಚಂದ್ರಲೇಖ' ಸಿನಿಮಾದಲ್ಲಿ ದೆವ್ವದ ಪಾತ್ರ ಮಾಡಿದ್ದು, ಮುಂದೆ ಅದೇ ರೀತಿಯ ಪಾತ್ರಗಳು ಹುಡುಕಿಕೊಂಡು ಬಂದವಂತೆ. ಆದರೆ, 'ಮಾಸ್ಟರ್ ಪೀಸ್' ಸಿನಿಮಾದ ನಂತರ ಶಾನ್ವಿ ಅದೃಷ್ಟ ಬದಲಾಯಿತು.
'ತಾರಕ್' ಸಿನಿಮಾದಲ್ಲಿ ದರ್ಶನ್ ಜೊತೆಗೆ ನಟಿಸುವ ಅವಕಾಶ ಪಡೆದರು. 'ಮಫ್ತಿ' ಹಾಗೂ 'ಸಾಹೇಬ' ಸಿನಿಮಾದಲ್ಲಿ ನಟಿಸಿದರು. ಗಣೇಶ್ ಜೊತೆಗೆ 'ಸುಂದರಾಂಗ ಜಾಣ' ಹಾಗೂ 'ಗೀತಾ'ಗೆ ನಾಯಕಿಯಾದರು. ಕನ್ನಡದ ನಟಿಯ ರೀತಿ ಪ್ರೇಕ್ಷಕರು ಅವರನ್ನು ಇಷ್ಟಪಟ್ಟರು.
'ಅವನೇ
ಶ್ರೀಮನ್ನಾರಾಯಣ'
ಚಿತ್ರದ
ಬಿಡುಗಡೆ
ದಿನಾಂಕ
ಘೋಷಿಸಿದ
ನಿರ್ಮಾಪಕ

ಇದೀಗ ಶಾನ್ವಿ 'ಅವನೇ ಶ್ರೀಮನ್ನಾರಾಯಣ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ 55 ದಿನಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, 15 ದಿನಗಳ ಕಾಲ ಡಬ್ಬಿಂಗ್ ಮಾಡಿದ್ದಾರೆ. ಈ ಬಾರಿ ಲಕ್ಷ್ಮಿ ಪಾತ್ರದಲ್ಲಿ ಜನರ ಮುಂದು ಬರುತ್ತಿದ್ದು, ಕನ್ನಡಿಗರ ಪ್ರೀತಿಯ ನಿರೀಕ್ಷೆಯಲ್ಲಿ ಇದ್ದಾರೆ.
ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಈ ರೀತಿ ಕನ್ನಡ ಜನರಿಗೆ ಶಾನ್ವಿ ಶ್ರೀವತ್ಸವ ತಿಳಿಸಿದ್ದಾರೆ.