For Quick Alerts
  ALLOW NOTIFICATIONS  
  For Daily Alerts

  ಲಾಕ್‌ಡೌನ್ ಉಲ್ಲಂಘಿಸಿ ಸ್ನೇಹಿತರ ಜತೆ ಜಾಲಿರೈಡ್: ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ

  |

  ಕನ್ನಡದ ನಟಿ ಶರ್ಮಿಳಾ ಮಾಂಡ್ರೆ ಅವರ ಕಾರು ಶನಿವಾರ ನಸುಕಿನಲ್ಲಿ ಅಪಘಾತಕ್ಕೀಡಾಗಿದೆ. ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ಶರ್ಮಿಳಾ ಮಾಂಡ್ರೆ ಜಾಲಿ ರೈಡ್‌ಗೆ ಹೋಗುತ್ತಿದ್ದರು ಎನ್ನಲಾಗಿದೆ.

  ಲಾಕ್‌ಡೌನ್ ಕಾರಣದಿಂದ ಅನೇಕ ಕಡೆ ವಾಹನ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ತೀರಾ ಅನಿವಾರ್ಯ ಪರಿಸ್ಥಿತಿಯಲ್ಲದೆ ವಾಹನಗಳನ್ನು ಹೊರಗೆ ತೆಗೆಯಬೇಡಿ ಎಂದು ಸೂಚಿಸಲಾಗಿದೆ. ತರಕಾರಿ, ದಿನಸಿಗಳನ್ನು ಖರೀದಿ ಮಾಡಲು ನಡೆದುಕೊಂಡೇ ಹೋಗುವಂತೆ ಹೇಳಲಾಗಿದೆ. ಆದರೂ ಜನರು ಕಾರಣಗಳಿಲ್ಲದೆಯೂ ವಾಹನಗಳಲ್ಲಿ ಓಡಾಡುತ್ತಿರುವುದು ಮುಂದುವರಿದಿದೆ. ನಟಿ ಶರ್ಮಿಳಾ ಮಾಂಡ್ರೆ ಇದೇ ರೀತಿ ಕಾನೂನು ಉಲ್ಲಂಘಿಸಿ ಜಾಲಿ ರೈಡ್ ಮಾಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ಮುಂದೆ ಓದಿ.

  ವಸಂತನಗರ ಫ್ಲೈ ಓವರ್

  ವಸಂತನಗರ ಫ್ಲೈ ಓವರ್

  ಲಾಕ್‌ಡೌನ್ ನಿಯಮ ಉಲ್ಲಂಘಿಸಿ ನಟಿ ಶರ್ಮಿಳಾ ಮಾಂಡ್ರೆ ಮತ್ತು ಅವರ ಸ್ನೇಹಿತರು ಶುಕ್ರವಾರ ತಡ ರಾತ್ರಿ ಜಾಲಿ ರೈಡ್ ಮಾಡಿದ್ದರು ಎನ್ನಲಾಗಿದೆ. ಜಾಗ್ವಾರ್ ಕಾರ್‌ನಲ್ಲಿ ವೇಗವಾಗಿ ತೆರಳುತ್ತಿದ್ದಾಗ ಬೆಂಗಳೂರಿನ ವಸಂತನಗರ ಫ್ಲೈಓವರ್‌ನ ಕೆಳಗಿನ ಪಿಲ್ಲರ್‌ಗೆ ಡಿಕ್ಕಿ ಹೊಡೆದಿದೆ.

  ಪಿಲ್ಲರ್‌ಗೆ ಕಾರು ಡಿಕ್ಕಿ

  ಪಿಲ್ಲರ್‌ಗೆ ಕಾರು ಡಿಕ್ಕಿ

  ನಸುಕಿನ ಮೂರು ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಸೀಟ್ ಬೆಲ್ಟ್ ಹಾಕದೆ ಇದ್ದಿದ್ದರಿಂದ ಕಾರ್‌ನ ಏರ್‌ಬ್ಯಾಗ್ ಓಪನ್ ಆಗಿರಲಿಲ್ಲ ಎನ್ನಲಾಗಿದೆ. ಲೋಕೇಶ್ ಎಂಬುವವರು ಕಾರ್ ಚಾಲನೆ ಮಾಡುತ್ತಿದ್ದರು. ಫ್ಲೈ ಓವರ್‌ನ ಕೆಳಭಾಗದ ಪಿಲ್ಲರ್‌ಗೆ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನ ಬಲಭಾಗ ತೀವ್ರ ಜಖಂ ಆಗಿದೆ.

  ಶರ್ಮಿಳಾ ಮುಖಕ್ಕೆ ಪೆಟ್ಟು

  ಶರ್ಮಿಳಾ ಮುಖಕ್ಕೆ ಪೆಟ್ಟು

  ಘಟನೆಯಲ್ಲಿ ಶರ್ಮಿಳಾ ಮಾಂಡ್ರೆ ಅವರ ಮುಖಕ್ಕೆ ಪೆಟ್ಟಾಗಿದೆ. ಗಾಜಿನ ಚೂರುಗಳು ಹೊಕ್ಕಿದ್ದರಿಂದ ಮೂಗು ಹಾಗೂ ಇತರೆ ಕಡೆ ಗಾಯಗಳಾಗಿವೆ. ಶರ್ಮಿಳಾ ಅವರ ಸ್ನೇಹಿತನ ಕೈಗೆ ಮತ್ತು ಬಲಗೈಗೆ ತುಂಬಾ ಪೆಟ್ಟಾಗಿದೆ ಎನ್ನಲಾಗಿದೆ.

  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

  ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ

  ಕಾರ್‌ನಲ್ಲಿ ನಾಲ್ಕು ಮಂದಿ ಇದ್ದರು ಎನ್ನಲಾಗಿದ್ದು, ಹಿಂದೆ ಕುಳಿತಿದ್ದ ಇಬ್ಬರಿಗೂ ಯಾವುದೇ ತೊಂದರೆಯಾಗಿಲ್ಲ. ಶರ್ಮಿಳಾ ಮತ್ತು ಲೋಕೇಶ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  ಸುಳ್ಳು ಹೇಳಿದರೇ ಶರ್ಮಿಳಾ?

  ಸುಳ್ಳು ಹೇಳಿದರೇ ಶರ್ಮಿಳಾ?

  ಅಪಘಾತ ಸಂಭವಿಸಿದ ಬಳಿಕ ಶರ್ಮಿಳಾ ಮತ್ತು ಅವರ ಸ್ನೇಹಿತರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅಪಘಾತದ ಬಳಿಕ ಅವರು ವಿಕ್ರಂ ಆಸ್ಪತ್ರೆಗೆ ತೆರಳಿದ್ದರು. ಬಳಿಕ ಫೋರ್ಟಿಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜೆಪಿ ನಗರದಲ್ಲಿ ಅಪಘಾತ ಸಂಭವಿಸಿತ್ತು ಎಂದು ಸುಳ್ಳು ಹೇಳಿದ್ದರು ಎಂದು ಹೇಳಲಾಗಿದೆ.

  ಭಾರಿ ಅನಾಹುತವಾಗುತ್ತಿತ್ತು

  ಭಾರಿ ಅನಾಹುತವಾಗುತ್ತಿತ್ತು

  ಆಸ್ಪತ್ರೆಯಿಂದ ಮೆಮೊ ಬಿಡುಗಡೆಯಾದ ಹಿನ್ನೆಲೆಯಲ್ಲಿ ಈ ಕಾರು ಶರ್ಮಿಳಾ ಮತ್ತು ಅವರ ಸ್ನೇಹಿತರಿಗೆ ಸೇರಿದ್ದು ಎಂಬುದು ಬಹಿರಂಗವಾಗಿದೆ. ಸುಮಾರು 90-100 ಕಿ.ಮೀ ವೇಗದಲ್ಲಿ ಕಾರು ಅಪ್ಪಳಿಸಿದೆ. ಆದರೆ ಪಿಲ್ಲರ್ ಗಟ್ಟಿಯಾಗಿದ್ದರಿಂದ ಪಿಲ್ಲರ್‌ಗೆ ಹೆಚ್ಚು ಹಾನಿಯಾಗಿಲ್ಲ. ಇಲ್ಲದಿದ್ದರೆ ಭಾರಿ ಅನಾಹುತವೇ ಸಂಭವಿಸುವ ಅಪಾಯವಿತ್ತು.

  ಡ್ರಿಂಕ್ ಆಂಡ್ ಡ್ರೈವ್?

  ಡ್ರಿಂಕ್ ಆಂಡ್ ಡ್ರೈವ್?

  ಜಾಲಿರೈಡ್ ಹೊರಟಿದ್ದವರು ಮದ್ಯ ಸೇವನೆಯನ್ನೂ ಮಾಡಿದ್ದರು ಎಂದು ಆರೋಪಿಸಲಾಗಿದೆ. ಆದರೆ ಈ ಕುರಿತು ಇನ್ನೂ ತನಿಖೆ ನಡೆಸಿ ವರದಿ ಪಡೆದುಕೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಪೊಲೀಸರು ಮಹಜರು ನಡೆಸಿದ್ದಾರೆ.

  English summary
  Acgtress Sharmiela Mandre's car got accident in Vasanth Nagar, Bangalore amid lockdown on Friday night.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X