For Quick Alerts
  ALLOW NOTIFICATIONS  
  For Daily Alerts

  ಅಪಘಾತಕ್ಕೀಡಾದ ಶರ್ಮಿಳಾ ಮಾಂಡ್ರೆ ಕಾರ್‌ನಲ್ಲಿ ಈ ಪಾಸ್ ಹೇಗೆ ಬಂತು?: ಹೆಚ್ಚಿದ ಅನುಮಾನ

  |

  ಲಾಕ್‌ಡೌನ್ ನಿಯಮಗಳನ್ನು ಮೀರಿ ನಟಿ ಶರ್ಮಿಳಾ ಮಾಂಡ್ರೆ ಸ್ನೇಹಿತರ ಜತೆಗೆ ಜಾಲಿ ರೈಡ್ ತೆರಳಿ ಕಾರು ಅಪಘಾತಕ್ಕೀಡಾಗಿದೆ. ಎಲ್ಲರೂ ಮನೆಯಲ್ಲಿ ಸುರಕ್ಷಿತರಾಗಿರಿ, ಹೊರಗೆ ಅನಗತ್ಯವಾಗಿ ಓಡಾಡಬೇಡಿ ಎಂಬ ಸರ್ಕಾರದ ಸೂಚನೆಗಳ ನಡುವೆಯೂ ಈ ಉಲ್ಲಂಘನೆ ನಡೆದಿರುವುದು ಚರ್ಚೆಗೆ ಒಳಗಾಗಿದೆ.

  ವಾಹನದಲ್ಲಿ ಅನಗತ್ಯವಾಗಿ ಓಡಾಡುತ್ತಿದ್ದವರ ಮೇಲೆ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದರು. ವಾಹನಗಳನ್ನು ಸೀಜ್ ಮಾಡಿದ್ದರು. ಆದರೆ ಸೆಲೆಬ್ರಿಟಿಗಳಿಗೆ ವಿಶೇಷ ಅವಕಾಶವಿದೆಯೇ ಎಂಬ ಪ್ರಶ್ನೆ ಎದುರಾಗಿದೆ. ಹಾಗೆಯೇ ಈ ಪ್ರಕರಣದ ಸುತ್ತಲೂ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಪಾಸ್ ಇಲ್ಲದ ಯಾವುದೇ ವಾಹನಗಳು ರಸ್ತೆಗೆ ಇಳಿಯಬಾರದು ಎಂದು ಬೆಂಗಳೂರು ಪೊಲೀಸ್ ಕಮಿಷನ್ ಭಾಸ್ಕರ್ ರಾವ್ ಹೇಳಿದ್ದಾರೆ. ಹೀಗಾಗಿ ಜನರು ವಾಹನಗಳನ್ನು ರಸ್ತೆಗಿಳಿಸಲು ಹೆದರುತ್ತಿದ್ದಾರೆ. ಈ ನಡುವೆ ಶರ್ಮಿಳಾ ಮಾಡಿಕೊಂಡಿರುವ ಯಡವಟ್ಟುಗಳು ಇನ್ನೂ ಹಲವು ಇದೆ ಎಂಬ ಶಂಕೆ ವ್ಯಕ್ತವಾಗಿದೆ. ಮುಂದೆ ಇದೆ.

  ಲಾಕ್‌ಡೌನ್ ಉಲ್ಲಂಘಿಸಿ ಸ್ನೇಹಿತರ ಜತೆ ಜಾಲಿರೈಡ್: ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತಲಾಕ್‌ಡೌನ್ ಉಲ್ಲಂಘಿಸಿ ಸ್ನೇಹಿತರ ಜತೆ ಜಾಲಿರೈಡ್: ನಟಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತ

  ಆನ್‌ಲೈನ್‌ನಲ್ಲಿ ಪಾಸ್

  ಆನ್‌ಲೈನ್‌ನಲ್ಲಿ ಪಾಸ್

  ಶರ್ಮಿಳಾ ಅವರು ಪ್ರಯಾಣಿಸುತ್ತಿದ್ದ ಕಾರ್‌ನಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ವಿತರಿಸಲಾಗುತ್ತಿರುವ ವಿಶೇಷ ಪಾಸ್ ದೊರೆತಿದೆ. ಅಗತ್ಯ ಸೇವೆಗಳ ಸೇವಾದಾರರಿಗೆ ಪೊಲೀಸರು ಪಾಸ್‌ಗಳನ್ನು ವಿತರಿಸುತ್ತಿದ್ದಾರೆ. ಆನ್‌ಲೈನ್ ಮೂಲಕವೂ ಇದನ್ನು ಪಡೆದುಕೊಳ್ಳಬಹುದಾಗಿದೆ.

  ಕಾರ್‌ನಲ್ಲಿ ಪಾಸ್

  ಕಾರ್‌ನಲ್ಲಿ ಪಾಸ್

  ಶರ್ಮಿಳಾ ಮಾಂಡ್ರೆ ಅವರಿದ್ದ ಐಷಾರಾಮಿ ಜಾಗ್ವಾರ್ ಕಾರ್‌ನ ಮುಂಬಾಗದ ಗ್ಲಾಸ್‌ಗೆ ಅಗತ್ಯ ಸೇವೆಯ ಪಾಸ್‌ ಅಂಟಿಸಲಾಗಿದೆ. ಅಂದರೆ ದಿನಸಿ, ತರಕಾರಿ ಪೂರೈಸುವವರು, ಮೆಡಿಕಲ್ ಮುಂತಾದ ಅಗತ್ಯ ಸೇವೆಗಳ ಪೂರೈಕೆದಾರರಿಗೆ ನೀಡಲಾಗುವ ಪಾಸ್ ಈ ಕಾರ್‌ನಲ್ಲಿದೆ.

  ಲಾಕ್‌ಡೌನ್ ಮಧ್ಯೆಯೂ ಮನೆಯಿಂದ ಹೊರಬಂದ ಸುಧಾರಾಣಿ, ಕಾರು ಓಡಿಸಿದ ಮಗಳು: ಕಾರಣ ಇದುಲಾಕ್‌ಡೌನ್ ಮಧ್ಯೆಯೂ ಮನೆಯಿಂದ ಹೊರಬಂದ ಸುಧಾರಾಣಿ, ಕಾರು ಓಡಿಸಿದ ಮಗಳು: ಕಾರಣ ಇದು

  ಪಾಸ್ ಸಿಕ್ಕಿದ್ದು ಹೇಗೆ?

  ಪಾಸ್ ಸಿಕ್ಕಿದ್ದು ಹೇಗೆ?

  ಈ ಪಾಸ್ ಅವರಿಗೆ ಹೇಗೆ ಸಿಕ್ಕಿತು? ಈ ಕಾರ್ ಮಾಲೀಕರು ನಿಜಕ್ಕೂ ಅಗತ್ಯ ಬಳಕೆಯ ಸೇವೆಗಳನ್ನು ಒದಗಿಸುತ್ತಿದ್ದರೇ? ಹಾಗೆ ಪೂರೈಸುವ ಸೇವಾದಾರರಾಗಿದ್ದರೆ ಮಧ್ಯರಾತ್ರಿ ಏಕೆ ಈ ಕಾರ್‌ನಲ್ಲಿ ಹೊರಹೋದರು? ಮಧ್ಯರಾತ್ರಿ ಯಾವ ಸೇವೆ ಸಲ್ಲಿಸುವ ಮಹತ್ಕಾರ್ಯವಿತ್ತು? ಮುಂತಾದ ಪ್ರಶ್ನೆಗಳು ಉದ್ಭವಿಸಿದೆ.

  ಹೇಳದೇ ಕೇಳದೆ ಪರಾರಿ?

  ಹೇಳದೇ ಕೇಳದೆ ಪರಾರಿ?

  ಅಪಘಾತದ ಬಳಿಕ ಶರ್ಮಿಳಾ ಮಾಂಡ್ರೆ ಮತ್ತು ಅವರ ಸ್ನೇಹಿತರು ಕಾರ್‌ಅನ್ನು ಅಲ್ಲಿಯೇ ಬಿಟ್ಟು ಮೊದಲು ವಿಕ್ರಂ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿಂದ ಫೋರ್ಟಿಸ್ ಆಸ್ಪತ್ರೆಗೆ ತೆರಳಿದ್ದಾರೆ. ಶರ್ಮಿಳಾ ಅವರ ಮುಖಕ್ಕೆ, ಹಾಗೂ ಸ್ನೇಹಿತನ ಕೈಗೆ ಪೆಟ್ಟಾಗಿದೆ. ಹೀಗಾಗಿ ಆಸ್ಪತ್ರೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುವಂತೆ ಸೂಚಿಸಿದ್ದರೂ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

  ಸುಮೊಟೊ ಕೇಸ್ ದಾಖಲು

  ಸುಮೊಟೊ ಕೇಸ್ ದಾಖಲು

  ಶರ್ಮಿಳಾ ಹಾಗೂ ಇತರರ ವಿರುದ್ಧ ಹೈಗ್ರೌಂಡ್ ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಲಾಕ್‌ಡೌನ್ ನಿಯಮ ಉಲ್ಲಂಘನೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಅಪಘಾತದ ವೇಳೆ ಮದ್ಯ ಸೇವನೆ ಮಾಡಿದ್ದರೇ ಎಂಬ ಬಗ್ಗೆ ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  English summary
  E Pass for essential services is found in car of actress Sharmiela Mandre which got accident in Vasanth Nagar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X