For Quick Alerts
  ALLOW NOTIFICATIONS  
  For Daily Alerts

  ಲಾಕ್‌ಡೌನ್‌ ನಡುವೆಯೂ ಗಣ್ಯರ ಮಕ್ಕಳೊಂದಿಗೆ ಪಾರ್ಟಿ ಮಾಡಿದ್ದರು ಶರ್ಮಿಳಾ ಮಾಂಡ್ರೆ

  |

  ನಟಿ ಶರ್ಮಿಳಾ ಮಾಂಡ್ರೆ ಮತ್ತು ಲೋಕೇಶ್ ಅಪಘಾತಕ್ಕೂ ಮುನ್ನ ಗಣ್ಯ ವ್ಯಕ್ತಿಗಳ ಮಕ್ಕಳೊಂದಿಗೆ ತಡರಾತ್ರಿ 2.30ರವರೆಗೂ ಪಾರ್ಟಿ ಮಾಡಿದ್ದರು ಎಂಬ ಮಾಹಿತಿ ಹೊರಬಂದಿದೆ. ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿರುವ ಪ್ರೆಸ್ಟೀಜ್ ಆಬ್‌ಶಾಟ್ ಅಪಾರ್ಟ್‌ಮೆಂಟ್‌ ಒಂದರಲ್ಲಿ ಶುಕ್ರವಾರ ರಾತ್ರಿ ಪಾರ್ಟಿ ನಡೆದಿತ್ತು.

  ಅಪಘಾತಕ್ಕೀಡಾದ ಶರ್ಮಿಳಾ ಮಾಂಡ್ರೆ ಕಾರ್‌ನಲ್ಲಿ ಈ ಪಾಸ್ ಹೇಗೆ ಬಂತು?: ಹೆಚ್ಚಿದ ಅನುಮಾನಅಪಘಾತಕ್ಕೀಡಾದ ಶರ್ಮಿಳಾ ಮಾಂಡ್ರೆ ಕಾರ್‌ನಲ್ಲಿ ಈ ಪಾಸ್ ಹೇಗೆ ಬಂತು?: ಹೆಚ್ಚಿದ ಅನುಮಾನ

  ಲಾಕ್‌ಡೌನ್ ಹಿನ್ನೆಲೆಯಲ್ಲಿ ಯಾವುದೇ ರೀತಿಯಲ್ಲಿ ಜನರು ಗುಂಪು ಸೇರಬಾರದು, ಪಾರ್ಟಿಗಳನ್ನು ನಡೆಸಬಾರದು ಎಂದು ಸೂಚನೆ ನೀಡಲಾಗಿತ್ತು. ಹಾಗೆಯೇ ಮದ್ಯ ಮಾರಾಟವನ್ನೂ ನಿರ್ಬಂಧಿಸಲಾಗಿದೆ. ಆದರೆ ಇವೆಲ್ಲವನ್ನೂ ಉಲ್ಲಂಘಿಸಿ ಭರ್ಜರಿ ಪಾರ್ಟಿ ಮಾಡಲಾಗಿದೆ. ಆಬ್‌ಶಾಟ್ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಲ್ಲಿರುವ ಮಾಜಿ ಸಚಿವರೊಬ್ಬರ ಮಗನ ಮನೆಯಲ್ಲಿ ಈ ಪಾರ್ಟಿ ಮಾಡಲಾಗಿದ್ದು, 30ಕ್ಕೂ ಹೆಚ್ಚು ಮಂದಿ ಗಣ್ಯ ವ್ಯಕ್ತಿಗಳ ಮಕ್ಕಳು ಭಾಗವಹಿಸಿದ್ದರು ಎನ್ನಲಾಗಿದೆ. ಮುಂದೆ ಓದಿ...

  ಕಾರ್‌ಗಳಿಗೆ ಎಮರ್ಜೆನ್ಸಿ ಪಾಸ್

  ಕಾರ್‌ಗಳಿಗೆ ಎಮರ್ಜೆನ್ಸಿ ಪಾಸ್

  ಡಾನ್ ಥಾಮಸ್ ಎಂಬುವವರ ಕಾರ್‌ನಲ್ಲಿ ಶರ್ಮಿಳಾ ಮಾಂಡ್ರೆ, ಲೋಕೇಶ್ ಹಾಗೂ ಇತರರು ತೆರಳಿದ್ದರು. ಪಾರ್ಟಿ ಮುಗಿಸಿ ಬರುವ ಸಂದರ್ಭದಲ್ಲಿ ಅಜಾಗರೂಕತೆಯಿಂದ ಕಾರ್ ಓಡಿಸಿ ಅಪಘಾತ ಮಾಡಿದ್ದಾರೆ. ಈ ಪಾರ್ಟಿಗೆ ಬಂದಿದ್ದ ಐದು ಕಾರ್‌ಗಳಿಗೂ ಎಮರ್ಜೆನ್ಸಿ ಪಾಸ್ ವಿತರಿಸಲಾಗಿತ್ತು ಎಂಬ ಅಂಶ ಕೂಡ ಬಯಲಾಗಿದೆ.

  ಕಾರ್‌ನಲ್ಲಿ ಐದು ಮಂದಿ ಇದ್ದರು

  ಕಾರ್‌ನಲ್ಲಿ ಐದು ಮಂದಿ ಇದ್ದರು

  ಕಾರ್‌ನಲ್ಲಿ ಮತ್ತೊಬ್ಬ ಯುವತಿ ಸೇರಿದಂತೆ ಐದು ಮಂದಿ ಇದ್ದರು. ಆ ಯುವತಿಗೂ ಗಾಯವಾಗಿತ್ತು. ಯುವತಿ ಮತ್ತು ಒಬ್ಬ ಯುವಕನನ್ನು ಹಿಂದೆ ಬಂದ ಮತ್ತೊಂದು ಕಾರ್‌ನಲ್ಲಿ ಕಳುಹಿಸಲಾಗಿತ್ತು. ಶರ್ಮಿಳಾ ಮತ್ತು ಲೋಕೇಶ್ ಅವರನ್ನು ಕನ್ನಿಂಗ್್ಹ್ಯಾಮ್ ರಸ್ತೆಯಲ್ಕಿರುವ ಫೋರ್ಟಿಸ್ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು.

  ಮನೆಯಲ್ಲಿಯೇ ಇರಿ ಎಂದು ಬುದ್ಧಿಮಾತು ಹೇಳಿದ್ದರು ಶರ್ಮಿಳಾ ಮಾಂಡ್ರೆ: ಆದರೆ ಅವರೇ ಮಾಡಿದ್ದೇನು?ಮನೆಯಲ್ಲಿಯೇ ಇರಿ ಎಂದು ಬುದ್ಧಿಮಾತು ಹೇಳಿದ್ದರು ಶರ್ಮಿಳಾ ಮಾಂಡ್ರೆ: ಆದರೆ ಅವರೇ ಮಾಡಿದ್ದೇನು?

  ಆಸ್ಪತ್ರೆಯಲ್ಲಿ ಸುಳ್ಳು ಮಾಹಿತಿ

  ಆಸ್ಪತ್ರೆಯಲ್ಲಿ ಸುಳ್ಳು ಮಾಹಿತಿ

  ಆಸ್ಪತ್ರೆಗೆ ನೀಡಿದ ವಿವರದಲ್ಲಿಯೂ ಶರ್ಮಿಳಾ ಮತ್ತು ಅವರ ಜತೆಗಾರರು ಸುಳ್ಳು ಮಾಹಿತಿ ದಾಖಲಿಸಿದ್ದಾರೆ. ಕಾರ್ ಜಯನಗರದಲ್ಲಿ ಅಪಘಾತಕ್ಕೀಡಾಯಿತು ಎಂದು ತಿಳಿಸಿದ್ದಾರೆ. ಈ ಮೂಲಕ ಪೊಲೀಸರ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದಾರೆ.

  ಪ್ರಭಾವ ಬೀರುವ ಸಾಧ್ಯತೆ

  ಪ್ರಭಾವ ಬೀರುವ ಸಾಧ್ಯತೆ

  ಲೋಕೇಶ್ ಅವರಿಗೆ ರಾಜಕಾರಣಿಗಳು, ದೊಡ್ಡ ಉದ್ಯಮಿಗಳ ನಂಟು ಇದ್ದು, ಕೇಸ್‌ನಿಂದ ಬಚಾವಾಗಲು ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಕಾರ್ ಮಾಲೀಕ ಡಾನ್ ಥಾಮಸ್ ಈವೆಂಟ್ ಮ್ಯಾನೇಜ್‌ಮೆಂಟ್ ವೃತ್ತಿ ಮಾಡುತ್ತಿದ್ದು, ಗಣ್ಯ ವ್ಯಕ್ತಿಗಳ ಪಾರ್ಟಿ ಮುಂತಾದ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಾರೆ ಎನ್ನಲಾಗಿದೆ.

  ವಿವಿಧ ಪ್ರಕರಣ ದಾಖಲು

  ವಿವಿಧ ಪ್ರಕರಣ ದಾಖಲು

  ಅಪಘಾತಕ್ಕೀಡಾದ ಕಾರ್ ಅನ್ನು ಯಾರು ಚಲಾಯಿಸುತ್ತಿದ್ದರು ಎನ್ನುವುದು ತಿಳಿದಿಲ್ಲ. ಅವರು ಮದ್ಯ ಸೇವನೆ ಮಾಡುತ್ತಿದ್ದರೇ ಎಂಬುದು ಖಾತರಿಯಾಗಬೇಕಿದೆ. ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಪೊಲೀಸರು, ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 187, 134 ಬಿ, 279, 337ರ ಅಡಿ ಪ್ರಕರಣ ದಾಖಲು ಮಾಡಿದ್ದಾರೆ. ವಿಪತ್ತು ನಿರ್ವಹಣಾ ಕಾಯ್ದೆ ಹಾಗೂ ಇತರೆ ಕಾಯ್ದೆಗಳ ಅಡಿಕೂಡ ಪ್ರಕರಣ ದಾಖಲು ಮಾಡಲಾಗಿದೆ.

  English summary
  Actress Sharmila Mandre and more than 30 people from prestigious families were partcipated in a party till midnight amid lockdown.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X