For Quick Alerts
  ALLOW NOTIFICATIONS  
  For Daily Alerts

  ಶೀಲಾ ಕೌರ್ ಬದುಕಲ್ಲಿ ಹೊಸ 'ಪ್ರೇಮ್ ಕಹಾನಿ': ಸಾಂಸಾರಿಕ ಬದುಕಿಗೆ ಕಾಲಿಟ್ಟ ಚೆಲುವೆ

  |

  ಅಜಯ್ ರಾವ್ ಜತೆ ಕನ್ನಡದ 'ಪ್ರೇಮ್ ಕಹಾನಿ' ಚಿತ್ರದಲ್ಲಿ ನಟಿಸಿದ್ದ ಶೀಲಾ ಕೌರ್ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಚೆನ್ನೈನಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಶೀಲಾ ಕೌರ್ ಉದ್ಯಮಿ ಸಂತೋಷ್ ರೆಡ್ಡಿ ಅವರೊಂದಿಗೆ ಹಸೆಮಣೆ ಏರಿದರು.

  2009ರಲ್ಲಿ ಬಿಡುಗಡೆಯಾದ ಆರ್. ಚಂದ್ರ ನಿರ್ದೇಶನದ 'ಪ್ರೇಮ್ ಕಹಾನಿ' ಚಿತ್ರದಲ್ಲಿ ಅಜಯ್ ರಾವ್ ಜತೆಗೆ ಶೀಲಾ ನಟಿಸಿದ್ದರು. ಗಣೇಶ್ ವಿನಾಯಕ್ ನಿರ್ದೇಶನದ 'ಹೈಪರ್' ಚಿತ್ರದಲ್ಲಿಯೂ ಅವರು ಕಾಣಿಸಿಕೊಂಡಿದ್ದರು. ಬಾಲನಟಿಯಾಗಿ ಕ್ಯಾಮೆರಾ ಎದುರಿಸಿದ್ದ ಅವರು ಕನ್ನಡದಲ್ಲಿ ಎರಡೇ ಸಿನಿಮಾಗಳಲ್ಲಿ ನಟಿಸಿದ್ದರೂ, ತಮಿಳಿನಲ್ಲಿ ಹೆಚ್ಚು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

  1996ರಲ್ಲಿ ತಮಿಳಿನ ಮೀನಾ ಚಿತ್ರದಲ್ಲಿ ಬಾಲನಟಿಯಾಗಿ ಅವರು ಸಿನಿಮಾ ರಂಗಕ್ಕೆ ಕಾಲಿರಿಸಿದ್ದರು. ತೆಲುಗಿನಲ್ಲಿ ಅಲ್ಲು ಅರ್ಜುನ್ ಜತೆ 'ಪರುಗು'ದಲ್ಲಿ ಮಿಂಚಿದ್ದರು. ಮಲಯಾಳಂ ಸಿನಮಾದಲ್ಲಿ ಕೂಟ ಅಭಿನಯಿಸಿದ್ದ ಅವರು ಕಳೆದ ಎರಡು ವರ್ಷಗಳಿಂದ ಚಿತ್ರರಂಗದಿಂದ ದೂರ ಉಳಿದಿದ್ದರು.

  Actress Sheela Kaur Ties Knot With A Businessman

  ಮಾರ್ಚ್ 11ರಂದು ನಡೆದ ಸರಳ ಮದುವೆಯಲ್ಲಿ ಅವರ ಕುಟುಂಬದವರು ಮತ್ತು ಸ್ನೇಹಿತರು ಮಾತ್ರ ಪಾಲ್ಗೊಂಡಿದ್ದರು. 'ಈ ದಿನ ನಮಗೆ ವಿಶೇಷವಾಗಿದೆ. ನಾವು ನಮ್ಮ ಹೃದಯಪೂರ್ವಕವಾಗಿ ಸಂಭ್ರಮಿಸುವ ಸಂಗತಿ. ಹೊಸ ದಿನ. ಜತೆಯಾಗಿ ಹೊಸ ಜೀವನ' ಎಂದು ಶೀಲಾ ಕೌರ್ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

  English summary
  Actress Sheela Kaur, who acted in Kannada movie Prem Kahani has tied knot with a businessman.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X