For Quick Alerts
  ALLOW NOTIFICATIONS  
  For Daily Alerts

  ತೆಲುಗು ಯಂಗ್ ಸ್ಟಾರ್ ಚಿತ್ರಕ್ಕೆ ಶ್ರದ್ಧಾ ಶ್ರೀನಾಥ್ ನಾಯಕಿ!

  By Bharath Kumar
  |

  'ಯು-ಟರ್ನ್' ಬೆಡಗಿ ಶ್ರದ್ಧಾ ಶ್ರೀನಾಥ್ ಗೆ ಅವಕಾಶಗಳ ಮೇಲೆ ಅವಕಾಶಗಳು ಹುಡುಕಿಕೊಂಡು ಬರುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿಯಾಗಿರುವ ಶ್ರದ್ಧಾಗೆ, ಪರಭಾಷೆಗಳಲ್ಲಿ ಹೆಚ್ಚು ಹೆಚ್ಚು ಆಫರ್ ಗಳು ಸಿಗುತ್ತಿದೆ.

  ಸದ್ಯ, 'ಆಪರೇಷನ್ ಅಲುಮೇಲಮ್ಮ' ಬಿಡುಗಡೆಗೆ ಕಾಯುತ್ತಿರುವ ಶ್ರದ್ಧಾ ಶ್ರೀನಾಥ್, ಈಗ ತೆಲುಗಿನ ಯಂಗ್ ಸ್ಟಾರ್ ಆದಿ ಅವರ ಮುಂದಿನ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಚಿತ್ರವನ್ನ ವಿಶ್ವನಾಥ್ ಅರಿಗೇಲ ನಿರ್ದೇಶನ ಮಾಡುತ್ತಿದ್ದು, ಚರಣ್ ತೇಜ ಉಪ್ಪಾಳಪತಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಬಗ್ಗೆ ಬೇರೆ ಯಾವ ಮಾಹಿತಿಯೂ ಬಿಟ್ಟುಕೊಡದ ಚಿತ್ರತಂಡ ಆದಷ್ಟೂ ಬೇಗ ಚಿತ್ರೀಕರಣ ಶುರು ಮಾಡುವುದಾಗಿ ಹೇಳಿಕೊಂಡಿದೆ.

  ಇನ್ನು ಬ್ಯಾಕ್ ಟು ಬ್ಯಾಕ್ ತಮಿಳು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಶ್ರದ್ಧಾ, 'ಇವನ್ ತಾಂಥೀರನ್', 'ವಿಕ್ರಂ ವೇದ', ಹಾಗೂ 'ಉಳಿದವರು ಕಂಡಂತೆ' ಚಿತ್ರ ತಮಿಳು ರೀಮೇಕ್ 'ರಿಚ್ಚಿ' ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಅದರ ಜೊತೆ ಪವನ್ ಒಡೆಯರ್ ನಿರ್ದೇಶನದ 'ಶಾದಿ ಭಾಗ್ಯ' ಚಿತ್ರದಲ್ಲಿ ನಾಯಕಿಯಾಗಿದ್ದಾರೆ.

  English summary
  Young star Aadi will be seen romancing Kannada actress Shraddha Srinath in his next. It will be directed by Vishwanath Arigela.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X