For Quick Alerts
  ALLOW NOTIFICATIONS  
  For Daily Alerts

  ನಟಿ ಶ್ರುತಿ ಹಾಲಿ ಪತಿ ವಿರುದ್ಧ ಮಾಜಿ ಪತ್ನಿ ದೂರು

  By Rajendra
  |

  ಇತ್ತೀಚೆಗೆ ಕೊಲ್ಲೂರಿನಲ್ಲಿ ನಟಿ ಶ್ರುತಿ ಹಾಗೂ ಚಂದ್ರಚೂಡ ಸಪ್ತಪದಿ ತುಳಿದಿದ್ದು ಗೊತ್ತೇ ಇದೆ. ಈಗ ಚಂದ್ರಚೂಡ್ ಅಲಿಯಾಸ್ ಚಂದ್ರಶೇಖರ್ ಅವರ ಮಾಜಿ ಪತ್ನಿ ಮಂಜುಳಾ ಅವರು ಶ್ರುತಿಯೊಂದಿಗಿನ ಮದುವೆಗೆ ವಿರೋಧ ವ್ಯಕ್ತಪಡಿಸಿ ಕೌಟುಂಬಿಕ ನ್ಯಾಯಲಯದ ಮೆಟ್ಟಿಲೇರಿದ್ದಾರೆ.

  ತಮ್ಮ ಪತಿ ಚಂದ್ರಶೇಖರ್ ಅವರ ಎರಡನೇ ಮದುವೆಯನ್ನು ಅಸಿಂಧುಗೊಳಿಸುವಂತೆ ಅವರು ನ್ಯಾಯಾಲಯಕ್ಕೆ ಮೊರೆಹೋಗಿದ್ದಾರೆ. ಮಂಜುಳಾ ಅವರ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿರುವ ನ್ಯಾಯಾಲಯ ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.

  ಚಂದ್ರಚೂಡ ಅವರು ನನಗೆ ವಿಚ್ಛೇದನ ನೀಡಿಲ್ಲ. ಎರಡನೇ ಮದುವೆಗೆ ನನ್ನ ಅನುಮತಿ ಪಡೆದಿಲ್ಲ. ತಮ್ಮ ಪತಿ ಹಾಗೂ ಶ್ರುತಿ ಅವರ ಮದುವೆಯನ್ನು ಮಾನ್ಯ ಮಾಡಬಾರದು ಎಂದು ಅವರು ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾರೆ.

  ಚಂದ್ರಚೂಡ್ ಅವರಿಗೆ ವಿಚ್ಛೇದನ ನೀಡಲು ನನಗೆ ಮನಸ್ಸಿಲ್ಲ. ನನಗೆ ನನ್ನ ಗಂಡ ಬೇಕು. ಒಂದಲ್ಲಾ ಒಂದು ದಿನ ಅವರು ನನ್ನ ಹತ್ತಿರ ಬರುತ್ತಾರೆ ಎಂಬ ನಂಬಿಕೆ ಇದೆ. ನನ್ನ ಗಂಡನಿಗೆ ನಾನು ಕೆಟ್ಟದು ಮಾಡಬೇಕೆಂದ ಉದ್ದೇಶ ಇಲ್ಲ ಎಂದಿದ್ದಾರೆ ಮಂಜುಳಾ.

  ಹದಿನೈದು ವರ್ಷಗಳ ಹಿಂದೆಯೇ ಮಂಜುಳಾ ನನ್ನಿಂದ ದೂರವಾಗಿದ್ದಾರೆ. ಸಮಸ್ಯೆಯನ್ನು ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನಪಟ್ಟೆ. ಪ್ರಯೋಜನವಾಗಲಿಲ್ಲ. ಈಗ ನ್ಯಾಯಾಲಯದ ತೀರ್ಪಿಗೆ ಬದ್ಧನಾಗಿರುತ್ತೇನೆ ಎಂದಿದ್ದಾರೆ ಚಂದ್ರಚೂಡ. (ಏಜೆನ್ಸೀಸ್)

  English summary
  Manjula, wife of Chandrachud, who married Kannada actress Shruti, has filed a petition in the family court seeking to declare her husband’s second marriage illegal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X