For Quick Alerts
  ALLOW NOTIFICATIONS  
  For Daily Alerts

  ಐಟಂ ರಾಣಿ ಸೋನಾ ಹೈಡೆನ್ ರಿಯಲ್ ಲೈಫ್ ಸ್ಟೋರಿ

  By Rajendra
  |

  ದಕ್ಷಿಣ ಭಾರತದ ಮಾಜಿ ಸೌಂದರ್ಯ ರಾಣಿ, ಬಿಚ್ಚಮ್ಮ ಸೋನಾ ಹೈಡೆನ್ ತಮ್ಮದೇ ಕತೆಯನ್ನು ತೆರೆಗೆ ತರಲು ಮುಂದಾಗಿದ್ದಾರೆ. ಸದ್ಯಕ್ಕೆ ಈ ಚಿತ್ರದ ನಟ, ನಟಿ ಹಾಗೂ ತಂತ್ರಜ್ಞರ ಆಯ್ಕೆಯಲ್ಲಿ ಆಕೆ ಈಗ ಬಿಜಿಯೋ ಬಿಜಿ.

  ಐಟಂ ಡಾನ್ಸರ್ ಆಗಿದ್ದ ತಮ್ಮನ್ನು ಅಭಿಮಾನಿಗಳು ಗ್ಲಾಮರ್ ಗೊಂಬೆ ಎಂದೇ ತಿಳಿದಿದ್ದಾರೆ. ಆದರೆ ಅವರಿಗೆ ನನ್ನ ನಿಜವಾದ ಜೀವನ ಹಾಗೂ ಸದ್ಗುಣಗಳ ಬಗ್ಗೆ ಗೊತ್ತಿಲ್ಲ. ಅವರಿಗೆ ನಿಜ ಏನು ಎಂದು ತಿಳಿಸಬೇಕಾಗಿದೆ. ಆದರೆ ತಮ್ಮ ಕತೆ 'ದಿ ಡರ್ಟಿ ಪಿಕ್ಚರ್' ತರಹವಂತೂ ಇರೋದಿಲ್ಲಪ್ಪ ಎಂದಿದ್ದಾರೆ.

  'ಡರ್ಟಿ ಪಿಕ್ಚರ್' ಹೇಡಿತನದ ಬಗ್ಗೆ ಬೆಳಕು ಚೆಲ್ಲುತ್ತದೆ. ಚಿತ್ರದ ನಾಯಕಿ ಕೊನೆಗೆ ಆತ್ಮಹತ್ಯೆಗೆ ಶರಣಾಗುತ್ತಾಳೆ. ಆದರೆ ನನ್ನ ಸ್ವಭಾವ ಆ ರೀತಿಯದಲ್ಲ. ನಾನೊಬ್ಬ ಧೈರ್ಯ ಸಾಹಸಗಳುಳ್ಳ ಎದೆಗಾತಿ ಮಹಿಳೆ. ಸಿನಿಮಾ ಜೀವನದ ನನ್ನ ಅನುಭವಗಳನ್ನು ಬೆಳ್ಳಿ ಪರದೆಗೆ ತರುತ್ತೇನೆ.

  ನನ್ನ ಜೀವನದಲ್ಲಿ ಬಂದಂತಹ ವ್ಯಕ್ತಿಗಳು, ನನ್ನನ್ನು ದುರ್ಬಳಕೆ ಮಾಡಿಕೊಂಡವರು ಎಲ್ಲರನ್ನೂ ತೋರಿಸುತ್ತೇನೆ. ನನ್ನ ಬಗ್ಗೆ ಒಬ್ಬೊಬ್ಬರಿಗೆ ಒಂದು ರೀತಿ ಅಭಿಪ್ರಾಯವಿದೆ. ನಾನ್ಯಾರು ಎಂಬುದೇ ಚಿತ್ರದ ಕಥಾವಸ್ತು. ಈ ಚಿತ್ರವನ್ನು ನೋಡಿದವರಿಗೆ ಆತ್ಮವಿಶ್ವಾಸ ಹೆಚ್ಚುತ್ತದೆ.

  ಈ ಚಿತ್ರ ಎಲ್ಲರಿಗೂ ತಲುಪಬೇಕು ಎಂಬ ಉದ್ದೇಶದಿಂದ ಇಂಗ್ಲಿಷ್ ಭಾಷೆಯಲ್ಲಿ ತರುತ್ತಿದ್ದೇನೆ. ಸಾಲದಕ್ಕೆ ಚಿತ್ರದಲ್ಲಿನ ಕೆಲವೊಂದು ದೃಶ್ಯಗಳು ವಯಸ್ಕರಿಗೆ ಮಾತ್ರ ಇರುತ್ತವೆ. ಸೆನ್ಸಾರ್ ಮಂಡಳಿಯೂ ತಗಾದೆ ತೆಗೆಯುವ ಸಾಧ್ಯತೆಗಳಿವೆ. ಇಂಗ್ಲಿಷ್ ನಲ್ಲಿ ತೆಗೆದರೆ ಈ ಸಮಸ್ಯೆ ಇರೋದೆ ಇಲ್ಲ ಎಂದಿದ್ದಾರೆ.

  ಈ ಚಿತ್ರಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯನ್ನು ಶೀಘ್ರದಲ್ಲೇ ಮಾಧ್ಯಮಗಳ ಮುಂದಿಡುತ್ತೇನೆ ಎಂದಿದ್ದಾರೆ ಸೋನಾ. ಒಟ್ಟಿನಲ್ಲಿ ಕೂಸು ಹುಟ್ಟುವುದಕ್ಕೂ ಮುನ್ನವೇ ಸೋನಾ ಕುಲಾವಿ ಹೊಲಿಸಿಕೊಂಡಿರುವುದು ವಿಶೇಷ.

  ಕನ್ನಡದ 'ನಂ ಯಜಮಾನ್ರು' ಚಿತ್ರದಲ್ಲಿ ಅಭಿನಯಿಸಿದ್ದ ಈ ಐಟಂ ಬೆಡಗಿ ಈ ಹಿಂದೊಮ್ಮೆ ಖ್ಯಾತ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಪುತ್ರ ಎಸ್ಪಿಬಿ ಚರಣ್ ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. ಬಳಿಕ ಇಬ್ಬರ ನಡುವೆ ನಡೆದ ರಹಸ್ಯ ಸಂಧಾನದ ಮೂಲಕ ವಿವಾದ ಬಗೆಹರಿದಿತ್ತು. (ಏಜೆನ್ಸೀಸ್)

  English summary
  Actress Sona Heiden has begun making a movie out of her life. The movie would not be like The Dirty Picture but it reflected cowardice, said the actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X