»   » ರಸ್ತೆಯಲ್ಲಿ ಬಟ್ಟೆ ಬಿಚ್ಚಿ ಅರೆನಗ್ನ ಪ್ರತಿಭಟನೆ ಮಾಡಿದ ನಟಿ ಶ್ರೀರೆಡ್ಡಿ

ರಸ್ತೆಯಲ್ಲಿ ಬಟ್ಟೆ ಬಿಚ್ಚಿ ಅರೆನಗ್ನ ಪ್ರತಿಭಟನೆ ಮಾಡಿದ ನಟಿ ಶ್ರೀರೆಡ್ಡಿ

Posted By:
Subscribe to Filmibeat Kannada

'ಕಾಸ್ಟಿಂಗ್ ಕೌಚ್' ಬಗ್ಗೆ ಸೆನ್ಸಷ್ನೆಲ್ ಹೇಳಿಕೆ ನೀಡಿ ಇಡೀ ಟಾಲಿವುಡ್ ಇಂಡಸ್ಟ್ರಿಯ ಆತಂಕಕ್ಕೆ ಕಾರಣವಾಗಿರುವ ನಟಿ ಶ್ರೀರೆಡ್ಡಿ ಬೀದಿಯಲ್ಲಿ ಅರೆನಗ್ನ ಪ್ರತಿಭಟನೆ ಮಾಡಿದ್ದಾರೆ. ಶನಿವಾರ ಬೆಳಿಗ್ಗೆ ತೆಲುಗು ವಾಣಿಜ್ಯ ಮಂಡಳಿ ಎದುರು ಅರೆ ನಗ್ನವಾಗಿ ಕೂತು ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

ಇದನ್ನ ನೋಡಿದ ಸ್ಥಳೀಯರು ಹಾಗೂ ವಾಣಿಜ್ಯ ಮಂಡಳಿಯ ಸದಸ್ಯರು ಕೆಲ ಕಾಲ ಅಚ್ಚರಿಗೊಳಗಾದರು. ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಶ್ರೀರೆಡ್ಡಿ ''ನಮ್ಮ ಇಂಡಸ್ಟ್ರಿಯಲ್ಲಿ ನಟಿಯರಿಗೆ ಅವಕಾಶ ಬೇಕು ಅಂದ್ರೆ, ನಿರ್ಮಾಪಕ, ನಿರ್ದೇಶಕರ ಜೊತೆ ಮಲಗಬೇಕು ಎಂದು ಬೇಡಿಕೆ ಇಡುತ್ತಾರೆ. ಇದು ನಿಜ. ಈ ಹೇಳಿಕೆ ನೀಡಿದ್ದಕ್ಕೆ ನನಗೆ ಬೆದರಿಕೆ ಕರೆ ಬರುತ್ತಿದೆ'' ಎಂದು ಆರೋಪಿಸಿದ್ದಾರೆ.

ಕಾಂಪ್ರಮೈಸ್ ಆದ್ರೆ ಮಾತ್ರ ಸಿನಿಮಾ: ನೋವನ್ನ ತೊಡಿಕೊಂಡ ನಟಿ ಶ್ರೇರೆಡ್ಡಿ

ಅಷ್ಟೇ ಅಲ್ಲದೇ, ''ನಿನಗೆ ಅವಕಾಶಗಳು ಬೇಕು ಅಂದ್ರೆ ನಿನ್ನ ಫೋಟೋಗಳು ಮತ್ತು ವಿಡಿಯೋಗಳನ್ನ ಕಳುಹಿಸು' ಎಂದು ಬೇಡಿಕೆ ಇಟ್ಟಿದ್ದರು ಎಂಬ ಸ್ಫೋಟಕ ಸಂಗತಿಯನ್ನ ಹೊರಹಾಕಿದ್ದರು. ಅಷ್ಟಕ್ಕೂ, ಈ ನಟಿಯ ಬೇಡಿಕೆ ಏನು.? ಮುಂದ ಓದಿ....

75 % ಅವಕಾಶ ತೆಲುಗು ನಟಿಯರಿಗೆ ನೀಡಬೇಕು.?

ಶ್ರೀರೆಡ್ಡಿ ಆರೋಪಿಸಿರುವ ಪ್ರಕಾರ ತೆಲುಗು ಇಂಡಸ್ಟ್ರಿಯಲ್ಲಿ ತಮಿಳು, ಕನ್ನಡ, ಹಿಂದಿ ನಟಿಯರಿಗೆ ಹೆಚ್ಚಿನ ಅವಕಾಶ ನೀಡಲಾಗುತ್ತಿದೆ. ಇನ್ಮುಂದೆ ಟಾಲಿವುಡ್ ನಲ್ಲಿ ತೆಲುಗು ನಟಿಯರಿಗೆ ಶೇಕಡಾ 75% ರಷ್ಟು ಅವಕಾಶ ನೀಡಲೇಬೇಕು ಎಂದು ಆಗ್ರಹಿಸಿದ್ದಾರೆ.

ರಕುಲ್ ಪ್ರೀತ್ ಸಿಂಗ್ ಹೇಳಿಕೆಗೆ ತಿರುಗೇಟು ನೀಡಿದ ಮಾಧವಿ ಲತಾ.!

ವಾಣಿಜ್ಯ ಮಂಡಳಿಯಲ್ಲಿ ಸ್ಥಾನಮಾನ

ಇನ್ನು ತೆಲುಗು ವಾಣಿಜ್ಯ ಮಂಡಳಿಯಲ್ಲಿ ನನಗೆ ಸದಸ್ಯತ್ವ ನೀಡಬೇಕು ಎಂದು ಮನವಿ ಇಟ್ಟಿದ್ದಾರೆ. ನಾನು ಮೂರು ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ನನಗೆ ಯಾಕೆ ಸದಸ್ಯತ್ವ ನೀಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಹೆಸರುಗಳು ಬಿಡುಗಡೆ ಮಾಡುವುದಾಗಿ ಎಚ್ಚರಿಕೆ.?

ತೆಲುಗು ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ಗೆ ಸಂಬಂಧ ಪಟ್ಟಂತೆ ದೊಡ್ಡ ಸಂಚಲನ ಸೃಷ್ಟಿಸುತ್ತಿರುವ ಶ್ರೀರೆಡ್ಡಿ ಕಳೆದ ವಾರ ಫೇಸ್ ಬುಕ್ ನಲ್ಲಿ ''ನಟಿಯರನ್ನ ಬಳಸಿಕೊಳ್ಳುತ್ತಿರುವ ಕೆಲವು ನಿರ್ದೇಶಕ, ನಿರ್ಮಾಪಕ ಹಾಗೂ ನಾಯಕರ ಹೆಸರು ಮತ್ತು ದಾಖಲೆಗಳನ್ನ ಬಿಡುಗಡೆ ಮಾಡುವುದಾಗಿ'' ಎಚ್ಚರಿಕೆ ನೀಡಿದ್ದರು.

ಶ್ರೀರೆಡ್ಡಿ ವಿರುದ್ಧ ತಿರುಗಿಬಿದ್ದಿರುವ ಇಂಡಸ್ಟ್ರಿ

ಶ್ರೀರೆಡ್ಡಿ ನೀಡಿರುವ ಹೇಳಿಕೆಯನ್ನ ಖಂಡಿಸಿ ತೆಲುಗು ಕಲಾವಿದರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ಈ ಬಗ್ಗೆ ಹೆಚ್ಚು ಸುದ್ದಿ ಪ್ರಸಾರವಾದ ಹಿನ್ನೆಲೆ ತೆಲುಗು ಕಲಾವಿದರು ಸೇರಿ ಒಗ್ಗಟ್ಟು ಪ್ರದರ್ಶಿಸಿ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ್ದರು. ದಾಖಲೆಗಳಿಲ್ಲದೇ ನಮ್ಮ ಗೌರವಕ್ಕೆ ಧಕ್ಕೆ ತರುತ್ತಿದ್ದೀರಾ ಎಂದು ತರಾಟೆಗೆ ತೆಗೆದುಕೊಂಡಿದ್ದರು.

English summary
Tollywood actress Sri Reddy sat topless outside the Telugu Film Chamber office in Hyderabad to protest against the existence of ‘casting couch’ in the industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X