»   » ಅಚ್ಚರಿ.! 'ಲಕ್ಷ್ಮಣ' ಸೆಟ್ ನಲ್ಲಿ ಶ್ರೀದೇವಿ ಮತ್ತು ಬಾಹುಬಲಿ ವಿಲನ್ ಪ್ರತ್ಯಕ್ಷ

ಅಚ್ಚರಿ.! 'ಲಕ್ಷ್ಮಣ' ಸೆಟ್ ನಲ್ಲಿ ಶ್ರೀದೇವಿ ಮತ್ತು ಬಾಹುಬಲಿ ವಿಲನ್ ಪ್ರತ್ಯಕ್ಷ

Posted By:
Subscribe to Filmibeat Kannada

ಆರ್.ಚಂದ್ರು ನಿರ್ದೇಶನದ, ನಟ ಅನೂಪ್ ರೇವಣ್ಣ ನಟನೆಯ ಚೊಚ್ಚಲ ಸಿನಿಮಾ 'ಲಕ್ಷ್ಮಣ' ಬಿಡುಗಡೆಗೆ ಇನ್ನೇನು ಎರಡೇ ದಿನ ಬಾಕಿ ಇದ್ದು, ಅಭಿಮಾನಿಗಳು ಚಿತ್ರವನ್ನು ತೆರೆಯ ಮೇಲೆ ನೋಡಲು ಬಕಪಕ್ಷಿಯಂತೆ ಕಾದು ಕುಳಿತಿದ್ದಾರೆ.

ಈಗಾಗಲೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿರುವ ನಟ ಅನೂಪ್ ರೇವಣ್ಣ ಅವರು 'ಲಕ್ಷ್ಮಣ' ಚಿತ್ರದಲ್ಲಿ ಅಕ್ಷರಶಃ ಮಾಸ್ ಹೀರೋ ಆಗಿ ಅಬ್ಬರಿಸಿದ್ದಾರೆ. ಇವರಿಗೆ ನಾಯಕಿಯಾಗಿ ಮೇಘನಾ ರಾಜ್ ಸಾಥ್ ಕೊಟ್ಟಿದ್ದಾರೆ.[ಯಶಸ್ಸು ಅಂದ್ರೆ 6 ತಿಂಗಳಿಗೊಂದು ಸಿನಿಮಾ ಮಾಡೋದಲ್ಲ: ಮೇಘನಾ]


ರೋಮ್ಯಾಂಟಿಕ್ ಸ್ಟಾರ್ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಹಲವಾರು ಗ್ಯಾಪ್ ಗಳ ನಂತರ ಮತ್ತೆ ಈ ಚಿತ್ರದ ಮೂಲಕ ಖಾಕಿ ಖದರ್ ತೋರಿದ್ದು, ಅಭಿಮಾನಿಗಳಲ್ಲಿ ಸಂಚಲನ ಹುಟ್ಟುಹಾಕಿದೆ.


ಹಲವಾರು ವಿಶೇಷತೆಗಳನ್ನು ಒಳಗೊಂಡಿರುವ 'ಲಕ್ಷ್ಮಣ' ಸಿನಿಮಾದಲ್ಲಿ ನೀವು ಊಹಿಸಿರದ ಕೆಲವು ನಟಿ-ನಟರು ಪ್ರಮುಖ ಪಾತ್ರ ವಹಿಸಿದ್ದಾರೆ ಅಂದ್ರೆ ನೀವು ನಂಬುತ್ತೀರಾ?, ನಂಬಲೇಬೇಕು.[ಸೆನ್ಸಾರ್ ಪರೀಕ್ಷೆಯಲ್ಲಿ ಪಾಸ್ ಆದ ಆರ್.ಚಂದ್ರು ಸಾರಥಿ 'ಲಕ್ಷ್ಮಣ']


ಅಷ್ಟಕ್ಕೂ 'ಆ' ನಟ-ನಟಿ ಯಾರು?, ಏನು ಎಂಬ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ಕೊಡುತ್ತೇವೆ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ......


ಶುಕ್ರವಾರ 'ಲಕ್ಷ್ಮಣ' ತೆರೆಗೆ

ಜೂನ್ 24, ಇದೇ ಶುಕ್ರವಾರದಂದು ಬಿಗ್ ಬಜೆಟ್ ನ 'ಲಕ್ಷ್ಮಣ' ಸಿನಿಮಾ ಮುಖ್ಯ ಚಿತ್ರಮಂದಿರ 'ನರ್ತಕಿ'ಯಲ್ಲಿ ತೆರೆ ಕಾಣುತ್ತಿದೆ. 'ಲಕ್ಷ್ಮಣ' ತೆರೆಗೆ ಅಪ್ಪಳಿಸುವ ಮುನ್ನ ಚಿತ್ರದಲ್ಲಿ ನಟಿಸಿರುವ ಕೆಲವು ಪ್ರಮುಖ ಪಾತ್ರಗಳ ಪರಿಚಯ ಮಾಡಿಕೊಳ್ಳೋಣ. ನೋಡಲು ಮುಂದಿನ ಸ್ಲೈಡ್ಸ್ ನೋಡಿ...


ನಟಿ ಶ್ರೀದೇವಿಗೇನು ಕೆಲಸ?

ಕನ್ನಡದಲ್ಲಿ ಶಿವಣ್ಣ ಜೊತೆ 'ಕಾಂಚನಗಂಗಾ' ಮತ್ತು ಶ್ರೀಮುರಳಿ ಜೊತೆ 'ಕಣ್ಣಿನಲ್ಲಿ ಕನಸಿದೆ' ಅಂತ 'ಪ್ರೀತಿಗಾಗಿ' ಚಿತ್ರದಲ್ಲಿ ನಟಿಸಿ, ಕನ್ನಡದ ಹುಡುಗರ ಎದೆಯಲ್ಲಿ ಕಿಚ್ಚು ಹಚ್ಚಿ ಪುರ್ರನೆ ದಕ್ಷಿಣ ಭಾರತದ ಕಡೆ ಹಾರಿ ಹೋದ, ನಟಿ ಶ್ರೀದೇವಿ ವಿಜಯಕುಮಾರ್ ಅವರು ಮತ್ತೆ 'ಲಕ್ಷಣ' ಚಿತ್ರದ ಮೂಲಕ ಗಾಂಧಿನಗರದಲ್ಲಿ ಪ್ರತ್ಯಕ್ಷ ಆಗಿದ್ದಾರೆ.


ಶ್ರೀದೇವಿ ಪಾತ್ರ?

ಈ ಚಿತ್ರದಲ್ಲಿ ನಟಿ ಶ್ರೀದೇವಿ ಅವರು ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪತ್ನಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂತೂ ಬಹಳ ವರ್ಷಗಳ ನಂತರ ಮತ್ತೆ ನಟಿ ಶ್ರೀದೇವಿ ಅವರು ಕನ್ನಡದ ತೆರೆಯ ಮೇಲೆ ಮಿಂಚುತ್ತಿರುವುದರಿಂದ ಸಾಮಾನ್ಯವಾಗಿ ಅಭಿಮಾನಿಗಳಲ್ಲಿ ಕೊಂಚ ಕುತೂಹಲ ಜಾಸ್ತಿ ಇದೆ.


ಬಾಹುಬಲಿ ಪ್ರಭಾಕರ್

ಕಳೆದ ವರ್ಷ ಕೋಟಿ ಕೋಟಿ ಹಣ ಬಾಚಿಕೊಂಡ ತೆಲುಗಿನ 'ಬಾಹುಬಲಿ' ಚಿತ್ರದಲ್ಲಿ ವಿಭಿನ್ನ ಭಾಷೆಯಲ್ಲಿ ಮಾತನಾಡುತ್ತಾ 'ಕಾಲಕೇಯ'ನ ಪಾತ್ರ ವಹಿಸಿದ್ದ ಖಳನಟ ಎಂ.ಪ್ರಭಾಕರ್ ಅವರು ಅನೂಪ್ ರೇವಣ್ಣ 'ಲಕ್ಷ್ಮಣ' ಚಿತ್ರದಲ್ಲಿ ವಿಲನ್ ಪಾತ್ರ ವಹಿಸಿದ್ದಾರೆ. ಮೊಟ್ಟ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ಪ್ರಭಾಕರ್ ಅವರು ಈ ಚಿತ್ರದಲ್ಲಿ ಮೈತುಂಬಾ ಒಡವೆ ಹಾಕಿಕೊಂಡು ಅನೂಪ್ ಅವರ ಜೊತೆ ಸಖತ್ ಆಗಿ ಫೈಟ್ ಮಾಡಲಿದ್ದಾರೆ.


'ಘಜನಿ' ನಟ ಪ್ರದೀಪ್ ರಾವತ್

'ಗಜ' ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಬಹುಭಾಷ ನಟ ಪ್ರದೀಪ್ ರಾವತ್ ಅವರು ತದನಂತರ ಬಚ್ಚನ್, 'ಶಿವಲಿಂಗ' ಮುಂತಾದ ಸಿನಿಮಾಗಳಲ್ಲಿ ಮಿಂಚಿ ಇದೀಗ ಆರ್ ಚಂದ್ರು ಸಾರಥ್ಯದ 'ಲಕ್ಷ್ಮಣ' ಚಿತ್ರದಲ್ಲಿ ಖಡಕ್ ಖಳನಟನ ಪಾತ್ರ ವಹಿಸಿದ್ದಾರೆ.


ಚಿಕ್ಕಣ್ಣ/ಸಾಧು ಕಾಮಿಡಿ ಮಸ್ತಿ

ಈ ಎಲ್ಲಾ ಪಾತ್ರಗಳ ಜೊತೆಗೆ ಕಾಮಿಡಿ ನಟರಾದ ಚಿಕ್ಕಣ್ಣ ಮತ್ತು ಸಾಧು ಕೋಕಿಲಾ ಅವರು ಪ್ರೇಕ್ಷಕರಿಗೆ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಲಿದ್ದಾರೆ.


ಅಪ್ಪ-ಮಗನ ಬಾಂಧವ್ಯವುಳ್ಳ 'ಲಕ್ಷ್ಮಣ'

ಅಪ್ಪ-ಮಗನ ಬಾಂಧವ್ಯವನ್ನು ಸಾರುವ 'ಲಕ್ಷ್ಮಣ' ಚಿತ್ರದಲ್ಲಿ ಅನೂಪ್ ಅವರ ತಂದೆಯಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮಿಂಚಿದ್ದಾರೆ.


English summary
Actress Sridevi of 'Preethigaagi' fame has been paired along side Ravichandran in 'Lakshmana'. And Telugu Actor M Prabhakar, Actor Pradeep rawat playing villain role in Actor Anoop and Actress Meghana Raj starrer Kannada movie 'Lakshmana'. The movie is directed by R Chandru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada