For Quick Alerts
  ALLOW NOTIFICATIONS  
  For Daily Alerts

  Shruti Hariharan: ಗ್ಲಾಮರಸ್ ಲುಕ್‌ನಲ್ಲಿ ಕಿಕ್ ಕೊಟ್ಟ ಶ್ರುತಿ ಹರಿಹರನ್!

  |

  ಸ್ಯಾಂಡಲ್‌ವುಡ್‌ನಲ್ಲಿ ಹಾಗೆ ಬಂದು, ಹೀಗೆ ಹೋಗುವ ನಟಿಯರೇ ಹೆಚ್ಚು. ಅದರಲ್ಲಿ ಬೆರಳೆಣಿಕೆಯಷ್ಟು ನಟಿಯರು ಮಾತ್ರವೇ ಹೆಚ್ಚು ಕಾಲ ಹೆಸರು ಮಾಡಿ ಉಳಿಯುತ್ತಾರೆ. ಅದರಲ್ಲಿ ಕೆಲವರು ಹೆಚ್ಚು ಅಭಿಮಾನಿಗಳನ್ನು ಸಂಪಾದನೆ ಮಾಡಿ ದೀರ್ಘಕಾಲದವರೆಗೂ ನೆನಪಿನಲ್ಲಿ ಉಳಿಯುತ್ತಾರೆ.

  ಅಂತಹ ನಟಿಯರಲ್ಲಿ ನಟಿ ಶ್ರುತಿ ಹರಿಹರನ್ ಕೂಡ ಒಬ್ಬರು. ಶ್ರುತಿ ಹರಿಹರನ್ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಸಿ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದರು. ಶ್ರುತಿಗೆ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳು ಇದ್ದವು. ಆದರೆ ಇದ್ದಕ್ಕಿದ್ದ ಹಾಗೆ ಶ್ರುತಿ ಹರಿಹರನ್ ಮೀಟೂ ಪ್ರಕರಣಗಳ ಬಳಿಕ ಕಣ್ಮರೆಯಾಗಿದ್ದರು. ‌

  ಮೀಟೂ ಪ್ರಕರಣದ ನಂತರ ಶ್ರುತಿ ಹರಿಹರನ್ ಬಣ್ಣದ ಲೋಕದಿಂದ ದೂರಾದರು. ಇನ್ನು ಮಗು ಆದ ಬಳಿಕ ಮತ್ತೆ ಶ್ರುತಿ ಹರಿಹರನ್ ವಾಪಸ್ ಬರುವುದಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ ಈಗ ಶ್ರುತಿ ಹರಿಹರನ್ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ.

  ಗ್ಲಾಮರ್ ಲುಕ್‌ನಲ್ಲಿ ಶ್ರುತಿ ಕಮಾಲ್!

  ಗ್ಲಾಮರ್ ಲುಕ್‌ನಲ್ಲಿ ಶ್ರುತಿ ಕಮಾಲ್!

  ಶ್ರುತಿ ಹರಿಹರನ್ ತಮ್ಮ ಅಭಿನಯದ ಜೊತೆಗೆ ಗ್ಲಾಮರಸ್ ಆಗಿ ಗುರುತಿಸಿಕೊಂಡಿದ್ದ ನಟಿ ಶ್ರುತಿ, ಮಗು ಆದ ಬಳಿಕ ಕೊಂಚ ದಪ್ಪಾ ಆಗಿದ್ದಾರೆ. ಆದರೆ ಇತ್ತೀಚೆಗೆ ಶ್ರುತಿ ಗ್ಲಾಮರಸ್ ಫೋಟೊಶೂಟ್ ಮಾಡಿಸಿದ್ದಾರೆ. ಈ ಫೋಟೊಶೂಟ್‌ನಲ್ಲಿ ನಟಿ ಶ್ರುತಿ ಸಿಕ್ಕಾಪಟ್ಟೆ ಸ್ಟೈಲಿಶ್ ಮತ್ತು ಗ್ಲಾಮರ್ ಗೊಂಬೆಯಂತೆ ಕಂಗೊಳಿಸಿದ್ದಾರೆ.

  ಹೆಡ್ ಬುಷ್ ಚಿತ್ರದಿಂದ ಶ್ರುತಿ ಕಮ್‌ಬ್ಯಾಕ್!

  ಹೆಡ್ ಬುಷ್ ಚಿತ್ರದಿಂದ ಶ್ರುತಿ ಕಮ್‌ಬ್ಯಾಕ್!

  ಶ್ರುತಿ ಹರಿಹರನ್ ವಿಶೇಷ ಪಾತ್ರದಲ್ಲಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಡಾಲಿ ಧನಂಜಯ್ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚುತ್ತಾ ಇದ್ದಾರೆ. 'ಹೆಡ್ ಬುಷ್' ಚಿತ್ರದಲ್ಲಿ ವಿಷೇಶವಾದ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಲೂಸ್ ಮಾದ ಯೋಗಿ, ವಸಿಷ್ಠ ಸಿಂಹ ಅಂತಹ ಕಲಾವಿದರು ಇದ್ದಾರೆ. ಸಿನಿಮಾ ಮಾತ್ರ ಅಲ್ಲ, ಹಲವು ಕಾರ್ಯಕ್ರಮಗಳ ಮೂಲಕ ಚಿತ್ರರಂಗದಲ್ಲಿ ಶ್ರುತಿ ಸಕ್ರಿಯರಾಗಿದ್ದಾರೆ.

  ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನಟಿ ಶ್ರುತಿ!

  ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನಟಿ ಶ್ರುತಿ!

  ನಟಿ ಶ್ರುತಿ ಹರಿಹರನ್ ಮೊದಲು ಡ್ಯಾನ್ಸರ್ ಆಗಿ, ಬಳಿಕ ನಟಿಯಾಗಿ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. 'ಲೂಸಿಯಾ' ಸಿನಿಮಾದಿಂದ 'ನಾತಿಚರಾಮಿ' ಸಿನಿಮಾದ ತನಕ ಹಲವು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.‌ 'ಲೂಸಿಯಾ' ಚಿತ್ರದಿಂದ ಶುರುವಾದ ಶ್ರುತಿ ಸಿನಿಮಾ ಜರ್ನಿ ಕೊಂಚ ಬ್ರೇಕ್ ಬಳಿಕ ಮತ್ತೆ ಶುರುವಾಗಿದೆ. ಶ್ರುತಿ ಅಭಿನಯ ಮೆಚ್ಚಿಕೊಂಡವರು ಮತ್ತೆ ಅವರ ಅಭಿನಯವನ್ನು ಸಿನಿಮಾದಲ್ಲಿ ನೋಡಲು ಕಾಯುತ್ತಿದ್ದಾರೆ.

  ಮೀಟೂ ಪ್ರಕರಣದ ಬಳಿಕ ಶ್ರುತಿ ನಾಪತ್ತೆ

  ಮೀಟೂ ಪ್ರಕರಣದ ಬಳಿಕ ಶ್ರುತಿ ನಾಪತ್ತೆ

  ಮೀಟೂ ಪ್ರಕರಣದ ನಂತರ ಶ್ರುತಿ ಹರಿಹರನ್ ಮದುವೆ ಆಗಿರುವ ವಿಚಾರ ಬಯಲಿಗೆ ಬಂತು. ಆ ಬಳಿಕ ಶ್ರುತಿ ಹರಿಹರನ್ ಕೆಲ ಕಾಲ ಸಿನಿಮಾದಿಂದ ದೂರ ಉಳಿದಿದ್ದರು. ಬಳಿಕ ಶ್ರುತಿ ಹರಿಹರನ್ ತಮ್ಮ ವೈಯಕ್ತಿಕ ಬದುಕಿನಲ್ಲಿ ಬ್ಯುಸಿ ಆಗಿಬಿಟ್ಟರು. ಈಗ ಮಗಳಿಗೆ ವರ್ಷ ತುಂಬಿದೆ. ಹೊಸ ಹುರುಪಿನಿಂದ ಮತ್ತೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ.

  English summary
  Actress Sruthi Hariharan New Glamorous Look Went Viral, Have Look,
  Saturday, March 19, 2022, 14:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X