»   » ಇವರು 'ಲೂಸಿಯಾ' ಬೆಡಗಿ ಶ್ರುತಿ ಅಂದ್ರೆ ನೀವು ನಂಬಲೇಬೇಕು.!

ಇವರು 'ಲೂಸಿಯಾ' ಬೆಡಗಿ ಶ್ರುತಿ ಅಂದ್ರೆ ನೀವು ನಂಬಲೇಬೇಕು.!

Posted By:
Subscribe to Filmibeat Kannada

'ಲೂಸಿಯಾ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಮನೆಮಾತಾದ ನಟಿ ಶ್ರುತಿ ಹರಿಹರನ್ ಅವರು ತದನಂತರ ತಮ್ಮದೇ ಆದ ವಿಭಿನ್ನ ನಟನೆಯ ಮೂಲಕ ಗಾಂಧಿನಗರದಲ್ಲಿ ಹೆಚ್ಚು ಗುರುತಿಸಿಕೊಂಡರು.

ಯಾವುದೇ ಪಾತ್ರಕ್ಕೂ ಸೈ ಎನ್ನುವ ನಟಿ ಧನಂಜಯ್ ಅವರ ಜೊತೆ 'ರಾಟೆ' ರಾಣಿಯಾಗಿ ಅಭಿಮಾನಿಗಳನ್ನು ಮೆಚ್ಚಿಸಿ, 'ಪ್ಲಸ್' ಚಿತ್ರದಲ್ಲಿ ಡ್ಯಾನ್ಸ್ ಗೂ ಸೈ ಅಂತ ಕಲರ್ ಫುಲ್ ಆಗಿ ಕುಣಿದು ಕುಪ್ಪಳಿಸಿದ್ರು.[ಶ್ರುತಿ ಹರಿಹರನ್ ಅವರ ಮುಂದಿನ ಚಿತ್ರ ಯಾರ ಜೊತೆ?]

Actress Sruthi Hariharan wears the face of 'Kaali' in Kannada Movie 'Urvi'

ಇವೆಲ್ಲಕ್ಕಿಂತ ಹೆಚ್ಚಾಗಿ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿ ಸಹನೆಯುಳ್ಳ ಕೋಮಲ ಹೆಣ್ಣು ಡಾ.ಸಹನಾ ಆಗಿ ಪ್ರೇಕ್ಷಕರ ಮನಸ್ಸಲ್ಲಿ ಭದ್ರವಾದ ಜಾಗ ಗಿಟ್ಟಿಸಿಕೊಂಡರು.

ಅದೇ ಶ್ರುತಿ ಹರಿಹರನ್ ಇದೀಗ ಮುಂಬರುವ 'ಉರ್ವೀ' ಎಂಬ ಮಹಿಳಾ ಪ್ರದಾನ ಚಿತ್ರದಲ್ಲಿ ಮತ್ತೆ ತಮ್ಮ ಅದ್ಭುತ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಈ ಬಾರಿ 'ಉರ್ವೀ' ಚಿತ್ರದಲ್ಲಿ ಮಾತ್ರ ಬಹಳ ಪವರ್ ಫುಲ್ ದೇವಿ 'ಕಾಳಿ' ಅವತಾರ ತಾಳಿದ್ದಾರೆ.[ಮಹಿಳಾಮಣಿಗಳ ವಿರುದ್ಧ ನಿಂತ ಅಚ್ಯುತ್ ಕುಮಾರ್]

Actress Sruthi Hariharan wears the face of 'Kaali' in Kannada Movie 'Urvi'

ನಿರ್ದೇಶಕ ಪ್ರದೀಪ್ ವರ್ಮಾ ಅವರ ಚೊಚ್ಚಲ ಸಿನಿಮಾ 'ಉರ್ವೀ' ಬಹಳ ಕಲಾತ್ಮಕ ಸಿನಿಮಾ ಅನ್ನೋದು, ಶ್ರುತಿ ಹರಿಹರನ್ ಅವರ ಈ ಕಾಳಿ ಅವತಾರ ನೋಡಿದರೆ ತಿಳಿಯುತ್ತದೆ.

'ಉರ್ವೀ' ಎಂದರೆ ಕಾಳಿ ದೇವಿಯ ಮುಖ ಮತ್ತು ಶಕ್ತಿಯ ಅವತಾರ, ಆದ್ದರಿಂದ ಈ ಚಿತ್ರದಲ್ಲಿ ನಟಿ ಶ್ರುತಿ ಹರಿಹರನ್ ಅವರು 'ಉರ್ವೀ' ಅವತಾರ ತಾಳಿದ್ದಾರೆ. ಆದರೆ ಇದು 'ದೇವಿ'ಗೆ ಸಂಬಂಧಪಟ್ಟ ಚಿತ್ರವಲ್ಲ. ಇಡೀ ಚಿತ್ರವನ್ನು ಸಂಪೂರ್ಣ ಕಲಾತ್ಮಕವಾಗಿ ಕಟ್ಟಿಕೊಡಲಾಗಿರುವ ಕಾರಣ ಇಲ್ಲಿ ಹೆಚ್ಚು ಕಲೆಗೆ ಬೆಲೆ ಕೊಡಲಾಗಿದೆ.

Actress Sruthi Hariharan wears the face of 'Kaali' in Kannada Movie 'Urvi'

ಅಂದಹಾಗೆ ನಟಿ ಶ್ರುತಿ ಹರಿಹರನ್ ಅವರು ಈ ಅವತಾರ ತಾಳಲು ಭರ್ತಿ ಮೂರು ಗಂಟೆ ಮೇಕಪ್ಪ್ ನಲ್ಲಿ ತೊಡಗಿಸಿಕೊಳ್ಳಬೇಕಾಯಿತಂತೆ. ಮಹಿಳಾ ಆಧಾರಿತ ಈ ಚಿತ್ರದಲ್ಲಿ ನಟಿ ಶ್ರದ್ಧಾ ಶ್ರೀನಾಥ್, ಶ್ವೇತಾ ಪಂಡಿತ್, ನಟಿ ಭವಾನಿ ಪ್ರಕಾಶ್ ಮಿಂಚಿದ್ದು, ನಟ ಅಚ್ಯುತ್ ಕುಮಾರ್ ಅವರು ಖಳನಟನಾಗಿ ಅಭಿನಯಿಸಿದ್ದಾರೆ.

English summary
Kannada Actress Sruthi Hariharan wears the face of 'Kaali' in an 'Urvi' avatar. Actress Shraddha Srinath, Actress Shweta Pandit, Actor Achyuth Kumar in the lead role. The movie is directed by Pradeep Varma.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada