For Quick Alerts
  ALLOW NOTIFICATIONS  
  For Daily Alerts

  ಸೆಲೆಬ್ರಿಟಿಗಳಿಗೂ ತಪ್ಪದ ಕಾಟ: ಮಧ್ಯರಾತ್ರಿ ಆಸ್ಪತ್ರೆ ಎದುರು ಅಲೆದಾಡಿದ ನಟಿ ಸುಧಾರಾಣಿ

  |

  ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಈ ಸಂಕಷ್ಟದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸುವುದು, ಅಧಿಕ ಬಿಲ್ ಮಾಡುವುದು, ಮೃತದೇಹ ಮರಳಿಸಲು ಲಕ್ಷಗಟ್ಟಲೆ ಬಿಲ್ ನೀಡುವಂತೆ ಹೇಳುವುದು ಮುಂತಾದ ಘಟನೆಗಳು ವರದಿಯಾಗುತ್ತಿವೆ. ಜನಸಾಮಾನ್ಯರು ಈ ರೀತಿ ಸಂಕಷ್ಟಪಡುತ್ತಿರುವಾಗ ಸೆಲೆಬ್ರಿಟಿಗಳೂ ಇದರಿಂದ ಹೊರತಾಗಿಲ್ಲ ಎನ್ನುವುದಕ್ಕೆ ಸೋಮವಾರ ರಾತ್ರಿ ನಡೆದ ಘಟನೆ ಉದಾಹರಣೆಯಾಗಿದೆ.

  ಸುಧಾರಾಣಿ ವಿಚಾರದಲ್ಲಿ ಎಡವಟ್ಟು ಮಾಡಿಕೊಂಡ ಅಪೋಲೋ ಆಸ್ಪತ್ರೆ.

  ಅನಾರೋಗ್ಯದಿಂದ ಬಳಲುತ್ತಿದ್ದ ಅಣ್ಣನ ಮಗಳಿಗೆ ಚಿಕಿತ್ಸೆ ನೀಡಿಸುವ ಸಲುವಾಗಿ ನಟಿ ಸುಧಾರಾಣಿ ಆಕೆಯನ್ನು ಬೆಂಗಳೂರಿನ ಅಪೋಲೋ ಆಸ್ಪತ್ರೆಗೆ ಸೋಮವಾರ ರಾತ್ರಿ ಕರೆದೊಯ್ದಿದ್ದರು. ಆದರೆ ರಾತ್ರಿಯಿಡೀ ಆಸ್ಪತ್ರೆಯ ಗೇಟ್ ಎದುರು ಕಾದರೂ ಆಕೆಯನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಲು ಆಸ್ಪತ್ರೆ ಸಿಬ್ಬಂದಿ ಅವಕಾಶ ನೀಡಿಲ್ಲ. ಇದರಿಂದ ಸುಧಾರಾಣಿ ಸಿಟ್ಟಿಗೆದ್ದಿದ್ದಾರೆ. ಮುಂದೆ ಓದಿ...

  ಒಳಗೆ ಬಿಡದ ಸಿಬ್ಬಂದಿ

  ಒಳಗೆ ಬಿಡದ ಸಿಬ್ಬಂದಿ

  ಸುಧಾರಾಣಿ ಅವರ ಅಣ್ಣನ ಮಗಳು ಕಿಡ್ನಿ ಸ್ಟೋನ್ ಸಮಸ್ಯೆಯಿಂದಾಗಿ ರಾತ್ರಿ ತಲೆಸುತ್ತುಬಂದು ಬಿದ್ದಿದ್ದರು. ಕೂಡಲೇ ಸುಧಾರಾಣಿ ಮತ್ತು ಅವರ ಮನೆಯವರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ರಾತ್ರಿ 10 ಗಂಟೆಗೆ ಆಸ್ಪತ್ರೆಗೆ ಬಂದರೂ 11 ಗಂಟೆಯಾದರೂ ಆಸ್ಪತ್ರೆ ಸಿಬ್ಬಂದಿ ಒಳಗೆ ಬಿಟ್ಟಿಲ್ಲ.

  38 ವರ್ಷದ ಹಿಂದಿನ ಲೇಖನ ಹಂಚಿಕೊಂಡ ನಟಿ ಸುಧಾರಾಣಿ

  ಭಾಸ್ಕರ್ ರಾವ್‌ಗೆ ಕರೆ

  ಭಾಸ್ಕರ್ ರಾವ್‌ಗೆ ಕರೆ

  ಆಕೆಯನ್ನು ದಾಖಲಿಸಿಕೊಂಡು ಪ್ರಾಥಮಿಕ ಚಿಕಿತ್ಸೆ ನೀಡಲೂ ವೈದ್ಯರು ನಿರಾಕರಿಸಿದ್ದಾರೆ. ಆಕೆಗೆ ಈ ಹಿಂದೆ ಇಲ್ಲಿಯೇ ಚಿಕಿತ್ಸೆ ನೀಡಲಾಗಿತ್ತು. ಆದರೆ ರಾತ್ರಿ ತುರ್ತು ಅಗತ್ಯವಿದ್ದಾಗ ಒಳಗೆ ದಾಖಲಿಸಿಕೊಂಡಿಲ್ಲ. ಇದಕ್ಕೆ ಸುಧಾರಾಣಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಅವರಿಗೆ ಫೋನ್ ಮಾಡಿ ದೂರು ಹೇಳಿದ ಬಳಿಕ ಆಸ್ಪತ್ರೆಯವರು ಒಳಗೆ ಬಿಟ್ಟಿದ್ದಾರೆ.

  ಪ್ರಾಥಮಿಕ ಚಿಕಿತ್ಸೆಯನ್ನೂ ನೀಡಿಲ್ಲ

  ಪ್ರಾಥಮಿಕ ಚಿಕಿತ್ಸೆಯನ್ನೂ ನೀಡಿಲ್ಲ

  ಆಕೆಗೆ ಕಿಡ್ನಿ ಸ್ಟೋನ್ ನೋವಿನಿಂದ ಜ್ವರ ಬಂದಿತ್ತು. ಇದರಿಂದ ಸುಸ್ತಾಗಿ ಬಿದ್ದಿದ್ದಳು. ಇಲ್ಲಿ ಕರೆದುಕೊಂಡು ಬಂದರೆ ಬೆಡ್, ಇಲ್ಲ ವೆಂಟಿಲೇಟರ್ ಇಲ್ಲ ಎಂದು ಹೇಳುತ್ತಿದ್ದಾರೆ. ಪ್ರಾಥಮಿಕ ಚಿಕಿತ್ಸೆಯನ್ನೂ ನೀಡಿಲ್ಲ. ಆಂಬುಲೆನ್ಸ್ ಡ್ರೈವರ್ ಪಾಪ ಆಕ್ಸಿಜನ್ ಕೊಡುತ್ತಿದ್ದರೆ, ಇವರೆಲ್ಲ ನಿಂತು ತಮಾಷೆ ನೋಡುತ್ತಿದ್ದಾರೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಸುಧಾರಾಣಿ ಕಿಡಿಕಾರಿದರು.

  ಸಂತಸದ ಸುದ್ದಿಯ ಜತೆಗೆ ಎಲ್ಲರೂ ಗಮನಿಸಬೇಕಾದ ಸಲಹೆ ನೀಡಿದ ನಟ 'ನೆನಪಿರಲಿ' ಪ್ರೇಮ್

  ಸಾಮಾನ್ಯ ಜನರು ಏನು ಮಾಡೋದು?

  ಸಾಮಾನ್ಯ ಜನರು ಏನು ಮಾಡೋದು?

  ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರಿಗೆ ಕರೆ ಮಾಡಿದ ಬಳಿಕ ಒಳಗೆ ಬಿಟ್ಟಿದ್ದಾರೆ. ಯಾರಿಗೂ ಚಿಕಿತ್ಸೆ ನಿರಾಕರಿಸಬಾರದು ಎಂದು ಸರ್ಕಾರದವರು ಎಲ್ಲ ಹೇಳಿದ ಬಳಿಕವೂ ಆಸ್ಪತ್ರೆಯವರು ಹೀಗೆ ಮಾಡುತ್ತಿದ್ದಾರೆ. ನನಗೆ ಸಾಧ್ಯವಾಯ್ತು, ಫೋನ್ ಮಾಡಿ ಹೇಳಿಸಿದೆ. ಆದರೆ ಸಾಮಾನ್ಯ ಜನರು ಏನು ಮಾಡಬೇಕು? ಅವರಿಗೆ ಹೀಗೆ ಮಾಡಿದರೆ ಎಲ್ಲಿಗೆ ಹೋಗುತ್ತಾರೆ? ಖಾಸಗಿ ಆಸ್ಪತ್ರೆಗಳ ಬಗ್ಗೆ ಮಾಧ್ಯಮದಲ್ಲಿ ಬರುತ್ತಿರುವುದು ಶೇ ನೂರರಷ್ಟು ನಿಜ.

  ಇವರು ವಾರಿಯರ್‌ಗಳೇ?

  ಇವರು ವಾರಿಯರ್‌ಗಳೇ?

  ಕೊರೊನಾ ವೈರಸ್ ಸಮಯದಲ್ಲಿ ಬೇರೆ ಕಾಯಿಲೆಗಳು ಬರುವುದಿಲ್ಲವೇ? ಅಥವಾ ಬೇಕಂತಲೇ ಕಾಯಿಲೆಗಳನ್ನು ಬರಿಸಿಕೊಳ್ಳುತ್ತೇವೆಯೇ? ವೆಂಟಿಲೇಟರ್ ಇಲ್ಲ ಎಂದರೆ ಬೇರೆ ಕಡೆ ಕರೆದೊಯ್ಯುತ್ತೇವೆ. ಆದರೆ ಪ್ರಾಥಮಿಕ ಚಿಕಿತ್ಸೆಯನ್ನಾದರೂ ನೀಡಬೇಕಲ್ಲವೇ? ವೈದ್ಯರು ಕಷ್ಟಪಡುತ್ತಿದ್ದಾರೆ ನಿಜ. ಅವರ ಕಷ್ಟ ನಮಗೂ ಅರ್ಥವಾಗುತ್ತದೆ. ಆದರೆ ಎಮರ್ಜನ್ಸಿ ವಿಭಾಗದಲ್ಲಿ ಇರುವವರು ಕೊರೊನಾ ವಾರ್ಡ್‌ಗೇನೂ ಹೋಗುವುದಿಲ್ಲವಲ್ಲ? ಇಂತಹ ವೈದ್ಯರನ್ನು ವಾರಿಯರ್ಸ್ ಎಂದು ಏಕೆ ಕರೆಯಬೇಕು? ಈ ಬೇಜವಾಬ್ದಾರಿತನಕ್ಕೆ ಹೊಣೆಗಾರರು ಯಾರು? ಎಂದು ಸುಧಾರಾಣಿ ಅಸಮಾಧಾನ ವ್ಯಕ್ತಪಡಿಸಿದರು.

  ಆಸ್ಪತ್ರೆ ವಿರುದ್ಧ ಕ್ರಮ

  ಆಸ್ಪತ್ರೆ ವಿರುದ್ಧ ಕ್ರಮ

  ನಟಿ ಸುಧಾರಾಣಿ ಅರೋಗ್ಯ ಸಮಸ್ಯೆಯಿಂದ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ಬಂದರೂ ಚಿಕಿತ್ಸೆಗೆ ತಡಮಾಡಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ನೋಡಿದೆ. ಅವರಷ್ಟೇ ಅಲ್ಲ ಸಾಮಾನ್ಯ ವ್ಯಕ್ತಿ ಯಾರೇ ಆಗಲಿ ಚಿಕಿತ್ಸೆ ಸಿಗದೇ ಪರದಾಡಬಾರದು. ಆ ಖಾಸಗಿ ಆಸ್ಪತ್ರೆಯ ವಿರುದ್ಧ ಶಿಸ್ತು ಕ್ರಮವಹಿಸಲಾಗುವುದು ಎಂದು ಸಚಿವ ಕೆ. ಸುಧಾಕರ್ ಹೇಳಿದ್ದಾರೆ.

  English summary
  Actress Sudharani express anger over a private hospital in Bengaluru which denied to admit her nicee on Monday midnight.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X