»   » ದರ್ಶನ್-ಸುದೀಪ್ ಸಂಧಾನಕ್ಕೆ ರೆಬೆಲ್ ಸ್ಟಾರ್ ಮಧ್ಯಸ್ಥಿಕೆ?

ದರ್ಶನ್-ಸುದೀಪ್ ಸಂಧಾನಕ್ಕೆ ರೆಬೆಲ್ ಸ್ಟಾರ್ ಮಧ್ಯಸ್ಥಿಕೆ?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ನಡುವಿನ ಸ್ನೇಹದ ಬಿರುಕನ್ನ ಸರಿಪಡಿಸಲು ರೆಬೆಲ್ ಸ್ಟಾರ್ ಅಂಬರೀಶ್ ಸರಿಯಾದ ವ್ಯಕ್ತಿ ಎಂದು ಅಭಿಮಾನಿಗಳು ಹಾಗೂ ಇಂಡಸ್ಟ್ರಿಯಲ್ಲಿರುವವರ ಅಂದಾಜು.

ಯಾಕಂದ್ರೆ, ಸುದೀಪ್ ಮತ್ತು ದರ್ಶನ್ ಇಬ್ಬರಿಗೂ ಅಂಬರೀಶ್ ಅವರಂದ್ರೆ ಅಪಾರ ಅಭಿಮಾನ ಮತ್ತು ಗೌರವ. ಹೀಗಾಗಿ, ಇವರಿಬ್ಬರು ಅಂಬಿಯ ಮಾತು ಕೇಳುತ್ತಾರೆ ಎನ್ನುವ ಧೃಡವಾದ ನಂಬಿಕೆ ಎಲ್ಲರದ್ದು.

ಹಾಗಾದ್ರೆ, ದಚ್ಚು ಮತ್ತು ಕಿಚ್ಚ ನಡುವಿನ ಬಿರುಕನ್ನ ಸರಿಪಡಿಸಿಲು ಮಂಡ್ಯದ ಗಂಡು ಮಧ್ಯಸ್ಥಿಕೆ ವಹಿಸುತ್ತಾರಾ? ಎಂಬ ಅನುಮಾನಕ್ಕೆ ಸುಮಲತಾ ಅಂಬರೀಶ್ ಕ್ಲಾರಿಟಿ ಕೊಟ್ಟಿದ್ದಾರೆ.

ದರ್ಶನ್-ಸುದೀಪ್ ಜಗಳಕ್ಕೆ ಅಂಬಿ ಎಂಟ್ರಿ?

ನಟ ದರ್ಶನ್ ಟ್ವಿಟ್ಟರ್ ನಲ್ಲಿ ''ನಾನು ಮತ್ತು ಸುದೀಪ್ ಸ್ನೇಹಿತರಲ್ಲ'' ಎಂದು ಬಹಿರಂಗಪಡಿಸುತ್ತಿದ್ದಂತೆ ಇವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಇರುವುದು ಜಗಜ್ಜಾಹೀರಾಯ್ತು. ಆದ್ರೆ, ಸ್ನೇಹಿತರು ಅಂದ್ರೆ ಇದೆಲ್ಲಾ ಸಾಮಾನ್ಯ.... ಅಂಬರೀಶ್ ಇದನ್ನ ಬಗೆಹರಿಸ್ತಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬರುತ್ತಿದ್ದವು.['ದರ್ಶನ್-ಸುದೀಪ್' ಸ್ನೇಹದ ಬಿರುಕಿಗೆ ಕಾರಣವಾಗಿದ್ದು 'ಸುದೀಪ್ ಕೊಟ್ಟ ಆ ಹೇಳಿಕೆ'!]

ಸುಮಲತಾ ಕೊಟ್ರು ಸ್ಪಷ್ಟನೆ

'ದರ್ಶನ್ ಮತ್ತು ಸುದೀಪ್ ನಡುವಿನ ಬಿರುಕನ್ನ ಅಂಬರೀಶ್ ಬಗೆಹರಿಸುತ್ತಾರಾ ಅಥವಾ ಇಲ್ಲವಾ' ಎಂದು ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಸುಮಲತಾ ಅಂಬರೀಶ್ ಅವರು ಸ್ಪಷ್ಟನೆ ನೀಡಿದ್ದಾರೆ.[ಸ್ನೇಹದ ಕಡಲಲ್ಲಿ ತೇಲುತ್ತಿದ್ದ ಕುಚ್ಚಿಕ್ಕೂ ಗೆಳೆಯರ 'ಕಿಚ್ಚಿ'ನ ಕಹಾನಿ]

ಅಭಿಮಾನಿ ಕೇಳಿದ ಪ್ರಶ್ನೆ ಏನು.?

''ಸುಮಲತಾ ಅವರೇ... ಅಂಬರೀಶ್ ಅವರಿಗೆ ಹೇಳಿ, ದರ್ಶನ್ ಮತ್ತು ಸುದೀಪ್ ವಿವಾದವನ್ನ ಬಗೆಹರಿಸಿ'' ಎಂದು ಅಭಿಮಾನಿಯೊಬ್ಬರು ಸುಮಲತಾ ರವರಿಗೆ ಟ್ವೀಟ್ ಮಾಡಿದ್ದರು. [ದರ್ಶನ್ ಪ್ರಶ್ನೆಗೆ ಹುಬ್ಬಳಿಯಲ್ಲಿ ಘರ್ಜಿಸಿದ ಸುದೀಪ್!]

ಸುಮಲತಾ ಕೊಟ್ಟ ಉತ್ತರ

''ದರ್ಶನ್ ಮತ್ತು ಸುದೀಪ್ ಇಬ್ಬರು ತಿಳುವಳಿಕೆ ಇರುವವರು, ಸರಿ ಯಾವುದು ತಪ್ಪು ಯಾವುದು ಎಂದು ತಿಳಿದವರು. ಅವರ ಸಮಸ್ಯೆಯನ್ನ ಅವರೇ ಬಗೆಹರಿಸಿಕೊಂಡು ಹೋಗ್ತಾರೆ ಬಿಡಿ'' ಎಂದು ಸುಮಲತಾ ಉತ್ತರ ಕೊಟ್ಟಿದ್ದಾರೆ.[ಕಿಚ್ಚ ಸುದೀಪ್ ಹೇಳಿದ್ದೊಂದು, ಆಗಿದ್ದು ಇನ್ನೊಂದು, ಈಗ ನಡೀತಾಯಿರೋದು ಮತ್ತೊಂದು.!]

ಅಂಬಿ ಎಂಟ್ರಿ ಆಗೋದು ಡೌಟ್!

ಹೀಗಾಗಿ, ದರ್ಶನ್ ಮತ್ತು ಸುದೀಪ್ ಅವರ ನಡುವಿನ ಜಗಳವನ್ನ ಸರಿಪಡಿಸುವುದಕ್ಕೆ ಅಂಬರೀಶ್ ಅವರು ಎಂಟ್ರಿ ಆಗಬಹುದು ಎಂಬ ಆಶಯಕ್ಕೆ ನೀರು ಬಿದ್ದಂತಾಗಿದೆ.[ಕಿಚ್ಚ-ದಚ್ಚು ಬಿರುಕಿನ ರಹಸ್ಯ ಸ್ಫೋಟಿಸಿದ ಸುದೀಪ್ ಸಾಂಸ್ಕೃತಿಕ ಪರಿಷತ್ತು: ಇದು ನಿಜವೇ.?]

English summary
Kannada Actress Sumalatha tweets on Challenging Star Darshan and Kiccha Sudeep controversy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada