»   » 'ರನ್ ಆಂಟನಿ' ನಟಿ ಸುಶ್ಮಿತಾ ಜೋಷಿ ಬಗ್ಗೆ ಒಂದಿಷ್ಟು ವಿಚಾರಗಳು

'ರನ್ ಆಂಟನಿ' ನಟಿ ಸುಶ್ಮಿತಾ ಜೋಷಿ ಬಗ್ಗೆ ಒಂದಿಷ್ಟು ವಿಚಾರಗಳು

Posted By:
Subscribe to Filmibeat Kannada

'ರನ್ ಆಂಟನಿ' ಜುಲೈ 8ಕ್ಕೆ ಅಂದ್ರೆ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಚಿತ್ರದಲ್ಲಿ ನಟ ವಿನಯ್ ರಾಜ್ ಕುಮಾರ್ ಅವರಿಗೆ ಇಬ್ಬರು ಹೊಸ ನಟಿಯರಾದ ರುಕ್ಸಾರ್ ಮೀರ್ ಮತ್ತು ನಟಿ ಸುಶ್ಮಿತಾ ಜೋಷಿ ಅವರು ಸಾಥ್ ನೀಡಿದ್ದಾರೆ.

ಅಂದಹಾಗೆ ನಟಿ ಸುಶ್ಮಿತಾ ಜೋಷಿ ಅವರು ಕನ್ನಡ ಬಾರದಿದ್ದರೂ ಕನ್ನಡ ಕಲಿತು ಮಾತನಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 'ರನ್ ಆಂಟನಿ' ಪ್ರೊಮೋಷನ್ ಸಂದರ್ಭದಲ್ಲಿ ಕೂಡ ಸುಶ್ಮಿತಾ ಜೋಷಿ ಅವರು ಕನ್ನಡದಲ್ಲಿ ಮಾತನಾಡಿದ್ದರು.[ಸೆನ್ಸಾರ್ ನಲ್ಲಿ ಕ್ಲೀನ್ ಚಿಟ್ ಪಡೆದು ರನ್ ಮಾಡಲು ತಯಾರಾದ 'ಆಂಟನಿ']


ಬೆಂಗಳೂರಿನಲ್ಲಿ ವ್ಯಾಸಂಗದ ಜೊತೆಗೆ ಮಾಡೆಲಿಂಗ್ ಮಾಡುತ್ತಿದ್ದ ನಟಿ ಸುಶ್ಮಿತಾ ಜೋಷಿ ಅವರಿಗೆ 'ರನ್ ಆಂಟನಿ' ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು ತಮ್ಮ ಅದೃಷ್ಟ ಎನ್ನುತ್ತಾರೆ ಸುಶ್ಮಿತಾ ಜೋಷಿ.['ಸುಮ್ಮನೆ' ಹಾಡು ಕೇಳಿ ಹಾಗೆ ಒಮ್ಮೆ ಕಳೆದು ಹೋಗಿ]


ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಮುದ್ದು ಮುಖದ ಬೆಡಗಿ ಸುಶ್ಮಿತಾ ಜೋಷಿ ಅವರು 'ರನ್ ಆಂಟನಿ' ಚಿತ್ರದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಹೆಚ್ಚಿನ ಮಾಹಿತಿ ತಿಳಿಯಲು ಕೆಳಗಿನ ಸ್ಲೈಡ್ಸ್ ಒಂದೊಂದಾಗಿ ಕ್ಲಿಕ್ಕಿಸುತ್ತಾ ಹೋಗಿ....


ಸುಶ್ಮಿತಾ ಮೂಲತಃ ಎಲ್ಲಿಯವರು?

ನಟಿ ಸುಶ್ಮಿತಾ ಜೋಷಿ ಅವರು ಮೂಲತಃ ದೆಹಲಿಯವರಾಗಿದ್ದು, 2014 ರಲ್ಲಿ ವಿದ್ಯಾಭ್ಯಾಸಕ್ಕಾಗಿ ಉದ್ಯಾನನಗರಿ ಬೆಂಗಳೂರಿಗೆ ಆಗಮಿಸಿದರು. ಸದ್ಯಕ್ಕೆ ಬೆಂಗಳೂರಿನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಕಾಲೇಜಿನಲ್ಲಿ ತೃತೀಯ ವರ್ಷದ ವ್ಯಾಸಂಗ ಮಾಡುತ್ತಿದ್ದಾರೆ.[ಕ್ಷಣ-ಕ್ಷಣಕ್ಕೂ ಕುತೂಹಲ ಕೆರಳಿಸುವ 'ರನ್ ಆಂಟನಿ' ವಾಂಟೆಡ್ ಟ್ರೈಲರ್.!]


ರಘು ಶಾಸ್ತ್ರಿ ಕಣ್ಣಿಗೆ ಬಿದ್ದಿದ್ದು ಹೇಗೆ?

ಬೆಂಗಳೂರಿನಲ್ಲಿ 'ಲಾ ಮೋಡ್' ಎಂಬ ಮಾಡೆಲ್ ಹಂಟ್ ಕಾರ್ಯಕ್ರಮದಲ್ಲಿ ನಟಿ ಸುಶ್ಮಿತಾ ಜೋಷಿ ಅವರು ಪಾಲ್ಗೊಂಡಿದ್ದ ಸಂದರ್ಭದಲ್ಲಿ 'ರನ್ ಆಂಟನಿ' ನಿರ್ದೇಶಕ ರಘು ಶಾಸ್ತ್ರಿ ಅವರ ಕಣ್ಣಿಗೆ ಬಿದ್ದರು. ನಾಯಕಿಯರ ಹುಡುಕಾಟದಲ್ಲಿ ತೊಡಗಿದ್ದ ರಘು ಶಾಸ್ತ್ರಿ ಅವರು ಸುಶ್ಮಿತಾ ಅವರನ್ನೇ ತಮ್ಮ ಚಿತ್ರಕ್ಕೆ ನಾಯಕಿಯನ್ನಾಗಿ ಮಾಡಿಕೊಂಡರು.


ನಟಿಯಾಗಬೇಕು ಅಂದುಕೊಂಡಿರಲಿಲ್ಲ

"ನಾನು ಯಾವತ್ತೂ ನಟಿಯಾಗಬೇಕು ಅಂತ ಅಂದುಕೊಂಡಿರಲಿಲ್ಲ. ನನ್ನ ಹಣೆಬರಹ ನನ್ನನ್ನು ಇಲ್ಲಿಯವರೆಗೆ ಕರೆದುಕೊಂಡು ಬಂದಿದೆ" -ಸುಶ್ಮಿತಾ ಜೋಷಿ.


ನಟನೆ ಕಲಿಯಲು 'ರನ್ ಆಂಟನಿ' ಸಹಾಯ

'ನಟನೆ ತಿಳಿಯದ ನನಗೆ ನಟನೆ ಕಲಿಯಲು ಸಹಾಯ ಮಾಡಿದ್ದು, ನಟ ವಿನಯ್ ರಾಜ್ ಕುಮಾರ್ ಮತ್ತು ಇನ್ನೋರ್ವ ನಟಿ ರುಕ್ಸಾರ್ ಮೀರ್. ಮಾತ್ರವಲ್ಲದೇ ಇಡೀ 'ರನ್ ಆಂಟನಿ' ಚಿತ್ರತಂಡ ನನಗೆ ಬೆನ್ನುಲುಬಾಗಿ ನಿಂತು ನಟನೆಗೆ ಪ್ರೋತ್ಸಾಹ ನೀಡಿದ್ದಾರೆ. ಇದೇ ಸೆಟ್ ನಲ್ಲಿ ನಾನು ನನ್ನ ಮೊದಲ ಅಭಿನಯ ಕಲಿತೆ'. -ಸುಶ್ಮಿತಾ ಜೋಷಿ.


ಬಿಡುಗಡೆಗೆ ಮುನ್ನವೇ ಮತ್ತೊಂದು ಚಿತ್ರಕ್ಕೆ ಆಯ್ಕೆ

ನವ ನಿರ್ದೇಶಕ ಕುಮರೇಶ್ ಅವರು ನಿರ್ದೇಶನ ಮಾಡಲಿರುವ ಮರಾಠಿ ಕಾದಂಬರಿ 'ದುನಿಯಾದಾರಿ' ಆಧಾರಿತ ಚಿತ್ರಕ್ಕೆ ನಟಿ ಸುಶ್ಮಿತಾ ಜೋಷಿ ಅವರು ಈಗಾಗಲೇ ಆಯ್ಕೆ ಆಗಿದ್ದಾರೆ. ಈ ಚಿತ್ರದಲ್ಲಿ 'ಮೈನಾ' ಖ್ಯಾತಿಯ ನಟ ಚೇತನ್ ಮತ್ತು ರಾಜ್ ವರ್ಧನ್ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.[ಮತ್ತೆ ಬಣ್ಣ ಹಚ್ಚಲು ಬಂದ್ರು 'ಮೈನಾ' ಚೇತನ್, ಇಷ್ಟು ದಿನ ಎಲ್ಲಿದ್ರು.?]


ಕನ್ನಡ ಕಲಿಯುತ್ತಿರುವ ಸುಶ್ಮಿತಾ

ಸ್ಯಾಂಡಲ್ ವುಡ್ ನಲ್ಲಿ ಕಂಫರ್ಟೇಬಲ್ ಆಗಿರಲು ಈಗಾಗಲೇ ಕನ್ನಡ ಮಾತನಾಡಲು ಕಲಿತಿರುವ ಸುಶ್ಮಿತಾ ಜೋಷಿ ಅವರು ತಮ್ಮ ಕನ್ನಡ ಸಹಪಾಠಿಗಳ ಜೊತೆ ಕೂಡ ಕನ್ನಡ ಮಾತನಾಡುತ್ತಿದ್ದಾರೆ. ಇನ್ನು ಈಗಾಗಲೇ ಒಪ್ಪಿಕೊಂಡ ಸಿನಿಮಾ ಮುಗಿಸಿ ತದನಂತರ ತಮ್ಮ ವಿದ್ಯಾಭ್ಯಾಸ ಕಂಪ್ಲೀಟ್ ಆದ ಮೇಲೆ ಮುಂದಿನ ಚಿತ್ರಗಳಿಗೆ ಸಹಿ ಹಾಕುವುದಾಗಿ ಸುಶ್ಮಿತಾ ತಿಳಿಸಿದ್ದಾರೆ.


English summary
Actress Sushmita Joshi is the latest young talent to enter sandalwood with Kannada Movie 'Run Antony'. Though she never planned on becoming an actress, she says it was destiny that brought her here. Kannada Actor Vinay Rajkumar, Actress Rukhsar in the lead role. the movie is directed by Raghu Shastry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada