For Quick Alerts
  ALLOW NOTIFICATIONS  
  For Daily Alerts

  Puneeth Rajkumar: ಐವರು ಮಕ್ಕಳಿಗೆ ಪುನೀತ್ ಹೆಸರು ನಾಮಕರಣ ಮಾಡಿದ ನಟಿ ತಾರಾ!

  |

  ಪುನೀತ್ ರಾಜ್‌ಕುಮಾರ್ ನಮ್ಮನ್ನ ಅಗಲಿ ತಿಂಗಳುಗಳೆ ಕಳೆದಿದೆ. ಅಪ್ಪು ನೆನಪಲ್ಲೆ ಅಭಿಮಾನಿಗಳು, ಕುಟುಂಬ ಸದಸ್ಯರು ದಿನ ದೂಡುತ್ತಿದ್ದಾರೆ. ಅಪ್ಪು ಅವರ ಮಾರ್ಗದರ್ಶನದಲ್ಲೆ ಅದೆಷ್ಟೋ ಅಭಿಮಾನಿಗಳು ಜೇವನ ನಡೆಸುತ್ತಿದ್ದಾರೆ. ಅಪ್ಪು ಅವರನ್ನು ದೇವರಂತೆ ಪೂಜಿಸುತ್ತಿರುವ ಅಭಿಮಾನಿಗಳು, ಜೇಮ್ಸ್ ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಅಲ್ಲದೇ ಅಪ್ಪು ಹೆಸರಲ್ಲಿ ಸಮಾಜಮುಖಿ ಕೆಲಸಗಳು ಈಗಲೂ ನಡೆಯುತ್ತಿದೆ. ಇದೀಗ ಸ್ಯಾಂಡಲ್‌ವುಡ್ ನಟಿ ತಾರಾ ಪುನೀತ್ ಅವರ ಹೆಸರಲ್ಲಿ ಐದು ಮಕ್ಕಳಿಗೆ ನಾಮಕರಣ ಮಾಡಿದ್ದಾರೆ. ಇಂತದ್ದೊಂದು ಸಮಾರಂಭಕ್ಕೆ ಇವತ್ತು ರಾಜ್ ಕುಟುಂಬದವರು ಸಾಕ್ಷಿಯಾಗಿದ್ದಾರೆ.

  Recommended Video

  Na Kanda Appu | ಅಮೇರಿಕದಲ್ಲೂ ಅಪ್ಪುಗೆ ಎಷ್ಟು ಫ್ಯಾನ್ಸ್ ಇದ್ದಾರೆ ಅನ್ನೋದನ್ನ ನೇರವಾಗಿ ನೋಡಿದ್ದೇ | Tanvi Rao

  ನಟಿ ತಾರಾ ಇಂದು ನಗರದ ಕಾಕ್ಸ್ ಟೌನ್‌ನಲ್ಲಿ ಜನಿಸಿರುವ ಐದು ಮಕ್ಕಳಿಗೆ ಪುನೀತ್ ರಾಜ್‌ ಕುಮಾರ್ ಎಂದು ನಾಮಕರಣ ಮಾಡಿದ್ದಾರೆ. ಪುನೀತ್ ಹೆಸರನ್ನು ಮಕ್ಕಳಿಗೆ ಇಡೋದು ಈ ಮಕ್ಕಳ ಪೋಷಕರ ಕನಸು ಕೂಡ ಆಗಿತ್ತು. ಅದರಂತೆ ನಟಿ ತಾರ ಇಂದು ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಪೋಷಕರ ಸಮ್ಮುಖದಲ್ಲಿ ಐವರು ಮಕ್ಕಳ ಕಿವಿಯಲ್ಲಿ ಪುನೀತ್ ರಾಜ್‌ಕುಮಾರ್ ಎಂದು ಹೆಸರು ಹೇಳುವ ಮೂಲಕ ನಾಮಕರಣ ಮಾಡಿದ್ದಾರೆ.

  'James' Fact Check: 'ಜೇಮ್ಸ್' ಸಿನಿಮಾ ನೋಡಲು ಶಾಲಾ-ಕಾಲೇಜಿಗೆ ರಜೆ ಘೋಷಿಸಿದರೆ ಪ್ರಧಾನಿ ಮೋದಿ?'James' Fact Check: 'ಜೇಮ್ಸ್' ಸಿನಿಮಾ ನೋಡಲು ಶಾಲಾ-ಕಾಲೇಜಿಗೆ ರಜೆ ಘೋಷಿಸಿದರೆ ಪ್ರಧಾನಿ ಮೋದಿ?

  ಈ ಸಂದರ್ಭದಲ್ಲಿ ನಟಿ ತಾರ ಮಾತ್ರವಲ್ಲ ಇವರೊಂದಿಗೆ ಪುನೀತ್‌ ರಾಜ್‌ಕುಮಾರ್ ಅವರ ಸಹೋದರಿ ಪೂರ್ಣಿಮಾ ರಾಜ್‌ಕುಮಾರ್ ಕೂಡ ಭಾಗಿ ಆಗಿದ್ದರು. ಈ ಮೂಲಕ ತಾರಾ ಮತ್ತು ಪೂರ್ಣಿಮಾ ಇಬ್ಬರು ಜಂಟಿಯಾಗಿ ಇಂದಷ್ಟೆ ಜನಿಸಿದ ಮಕ್ಕಳಿಗೆ ಪುನೀತ್ ಹೆಸರನ್ನು ಇಟ್ಟು ಖುಷಿ ಪಟ್ಟಿದ್ದಾರೆ. ಮಕ್ಕಳ ಪೋಷಕರು ಕೂಡ ನಟಿ ತಾರಾ ಅವರಿಂದ ನಾಮಕರಣ ಮಾಡಿರೋದಕ್ಕೆ ಧನ್ಯವಾದ ತಿಳಿಸಿದ್ದಾರೆ. ನಟಿ ತಾರಾ ಕೂಡ ಮಕ್ಕಳ ಭವಿಷ್ಯ ಉಜ್ವಲವಾಗಿರಲಿ ಅಂದು ಹರಸಿದ್ದಾರೆ.

  ಈ ಸಂದರ್ಭದಲ್ಲಿ ಮಾತನಾಡಿದ ನಟಿ ತಾರ "ಈ ಐದು ಮಕ್ಕಳಿಗೆ ಪುನೀತ್ ಅಂತ ಹೆಸರಿಡಬೇಕು ಎನ್ನುವುದು ಅವರ ಅಮ್ಮಂದಿರ ಆಸೆ ಆಗಿತ್ತು. ಹೀಗಾಗಿ ಪುನೀತ್ ಅವರ ಕುಟುಂಬವನ್ನು ಸಂಪರ್ಕಿಸಿ, ಅವರ ಉಪಸ್ಥಿತಿಯಲ್ಲೆ ಈ ಮಕ್ಕಳ ನಾಮಕರಣ ಮಾಡಿದ್ದೇವೆ.

   Actress Tara Named Five Children By The Name Puneeth Rajkumar

  ಮಕ್ಕಳು ಪುನೀತ್ ರೀತಿಯಲ್ಲೇ ಜಗತ್ತಿಗೆ ಮಾದರಿ ಆಗಲಿ ಎಂದು ಹಾರೈಸಿದ್ದೇನೆ' ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು ಪುನೀತ್ ಅವರ ಹುಟ್ಟುಹಬ್ಬ ಆಚರಣೆಗೆ ಅಭಿಮಾನಿಗಳು ಕಾತುರರಾಗಿದ್ದಾರೆ. ಹುಟ್ಟು ಹಬ್ಬದ ಜೊತೆಗೆ ಪುನೀತ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ಕೂಡ ತೆರೆಕಾಣುತ್ತಿದೆ. ಇದಕ್ಕಾಗಿ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ಸಿನಿಮಾ ಮತ್ತು ಹುಟ್ಟುಹಬ್ಬವನ್ನು ಜಾತ್ರೆಯಂತೆ ಸಂಭ್ರಮಿಸಲು ಫ್ಯಾನ್ಸ್ ಸಜ್ಜಾಗಿದ್ದಾರೆ.

  English summary
  Actress Tara and Puneeth Rajkumar sister Purnima Rajkumar Has named the children as Puneeth Rajakumar.
  Wednesday, March 16, 2022, 15:10
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X