For Quick Alerts
  ALLOW NOTIFICATIONS  
  For Daily Alerts

  ಮಳೆಯ ರೌದ್ರನರ್ತನ: ತಿರುಪತಿಯಿಂದ ಪಾರಾಗಿ ಬಂದ ತಾರಾ ಬಿಚ್ಚಿಟ್ಟ ಭಯಾನಕ ಅನುಭವ

  |

  ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆ ಜನಜೀವನನ್ನು ಅಸ್ಥವ್ಯಸ್ಥಗೊಳಿಸಿದೆ. ಮಳೆಯಿಂದಾಗಿ ಹಲವು ಜೀವಗಳು ಈಗಾಗಲೇ ಬಲಿಯಾಗಿವೆ. ಸಾವಿರಾರು ಜನರು ಮನೆ, ಆಸ್ತಿ ನಷ್ಟ ಅನುಭವಿಸಿದ್ದಾರೆ. ಇನ್ನಾದರೂ ಮಳೆ ಶಾಂತವಾಗಿಲ್ಲ.

  ತಿರುಪತಿಯಂತೂ ಅಕ್ಷರಶಃ ನದಿಯಂತಾಗಿದೆ. ಎಲ್ಲಿ ನೋಡಿದರೂ ಬರೀ ನೀರು, ಭಾರಿ ಜಲಪಾತಗಳೇ ತಿರುಮಲ ಬೆಟ್ಟದಲ್ಲಿ ಸೃಷ್ಟಿಯಾಗಿವೆ. ತಿರುಪತಿ, ತಿರುಮಲದ ವಸ್ತುಸ್ಥಿತಿ ತೋರುವ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ ನಟಿ ತಾರಾ ಅಲ್ಲಿನ ಸ್ಥಿತಿಯನ್ನು ಕಣ್ಣಾರೆ ಕಂಡು ವಾಪಸ್ಸಾಗಿದ್ದಾರೆ.

  ನಟಿ ತಾರಾ ತಮ್ಮ ಕುಟುಂಬದೊಂದಿಗೆ ನಿನ್ನೆಯಷ್ಟೆ ತಿರುಪತಿ ದೇವಸ್ಥಾನಕ್ಕೆ ತೆರಳಿದ್ದರು. ಆದರೆ ಅವರು ಅಲ್ಲಿಗೆ ಹೋಗುವವ ವೇಳೆಗೆ ರೆಡ್ ಅಲರ್ಟ್ ಘೋಷಣೆಯಾಯಿತು. ತಾರಾ ತಮ್ಮ ಕಣ್ಣಾರೆ ಕಂಡ ಮಳೆಯ ರುದ್ರನರ್ತನದ ಬಗ್ಗೆ, ತಿರುಪತಿಯ ಭಯಾನಕ ಸ್ಥಿತಿಯ ಬಗ್ಗೆ ಅನುಭವವನ್ನು ಮಾಧ್ಯಮಗಳೊಟ್ಟಿಗೆ ಹಂಚಿಕೊಂಡಿದ್ದಾರೆ.

  ನಿನ್ನೆ ಬೆಳಗ್ಗೆ ತಿರುಪತಿಗೆ ಹೊರೆಟೆವು: ತಾರಾ

  ನಿನ್ನೆ ಬೆಳಗ್ಗೆ ತಿರುಪತಿಗೆ ಹೊರೆಟೆವು: ತಾರಾ

  ''ನಾನು, ಅಮ್ಮ, ಮಗ, ಅಣ್ಣ, ನನ್ನ ಪಿಎ, ಡ್ರೈವರ್ ಎಲ್ಲರೂ ನಿನ್ನೆ ಬೆಳಿಗ್ಗೆ ತಿರುಪತಿಗೆ ಹೋಗೋಣವೆಂದು ಹೊರಟೆವು, ದಾರಿಯುದ್ದಕ್ಕೂ ಮಳೆ ಇತ್ತು. ಆದರೆ ತಿರುಪತಿ ದೇವಸ್ಥಾನದ ಪರಿಚಯಸ್ಥರೊಬ್ಬರು ಪರವಾಗಿಲ್ಲ ಬನ್ನಿ ಎಂದರು ಹಾಗಾಗಿ ನಾವು ಹೋದೆವು. ತಿರುಪತಿ ಸೇರುವ ವೇಳೆಗಾಗಲೇ ಕತ್ತಲಾಗಿತ್ತು, ಅಲ್ಲಿ ರಸ್ತೆಗಳಲ್ಲೆಲ್ಲ ಸೊಂಟದವರೆಗೆ ನೀರು ತುಂಬಿತ್ತು. ಅಲ್ಲಿನ ಪರಿಚಿತರಿಗೆ ಕರೆ ಮಾಡಿದರೆ, ಈಗಷ್ಟೆ ರೆಡ್ ಅಲರ್ಟ್ ಘೋಷಣೆಯಾಗಿದೆ ಅಲ್ಲಿಯೇ ಬೆಟ್ಟದ ಕೆಳಗೆ ಯಾವುದಾದರೂ ರೂಂ ಮಾಡಿಕೊಂಡಿ ಇರಿ'' ಎಂದು ಅನುಭವ ವಿವರಿಸಿದ್ದಾರೆ ತಾರಾ.

  ನಮ್ಮ ಕಾರು ನೀರಿನಲ್ಲಿ ತೇಲಲಾರಂಭಿಸಿತು: ತಾರಾ

  ನಮ್ಮ ಕಾರು ನೀರಿನಲ್ಲಿ ತೇಲಲಾರಂಭಿಸಿತು: ತಾರಾ

  ''ಆದರೆ ಅಲ್ಲಿ ರೂಂ ಮಾಡಿ ಇರಲು ಸಾಧ್ಯವೇ ಇಲ್ಲವಾದ ಸ್ಥಿತಿ. ಎಲ್ಲಿ ನೋಡಿದರೂ ಬರೀ ನೀರೆ ತುಂಬಿತ್ತು. ತಿರುಪತಿ ಅಕ್ಷರಷಃ ನೀರಿನಲ್ಲಿ ಮುಳುಗಿ ಹೋಗಿದೆ. ನೀರು ಸೊಂಟಕ್ಕಿಂತ ಮೇಲಕ್ಕೆ ಬಂದಿದೆ. ಯಾವ ಅಂಗಡಿಗಳು ಹೋಟೆಲ್‌ಗಳೂ ತೆರೆದಿಲ್ಲ. ಸಮಯ ಕಳೆದಂತೆ ನೀರಿನ ಸೆಳೆತ ಹೆಚ್ಚಾಗುತ್ತಲೇ ಇತ್ತು. ನೀರಿನ ಸೆಳೆತ ಅದೆಷ್ಟು ಹೆಚ್ಚಾಯಿತೆಂದರೆ ಕಾರುಗಳು ನಿಯಂತ್ರಣ ತಪ್ಪಿ ತೇಲಲಾರಂಭಿಸಿದವು. ನಮ್ಮ ಕಾರು ಸಹ ತೇಲಲಾರಂಭಿಸಿತು'' ಎಂದು ಭೀಕರ ಅನುಭವ ಹಂಚಿಕೊಂಡರು ತಾರಾ.

  ಸುರಕ್ಷಿತ ಜಾಗ ಸಿಕ್ಕರೆ ಸಾಕು ಎಂದುಕೊಂಡಿದ್ದೆವು: ತಾರಾ

  ಸುರಕ್ಷಿತ ಜಾಗ ಸಿಕ್ಕರೆ ಸಾಕು ಎಂದುಕೊಂಡಿದ್ದೆವು: ತಾರಾ

  ''ನಮ್ಮ ಪರಿಚಯದವರು ಕರೆ ಮಾಡಿ ನಾನೊಂದು ಹೋಟೆಲ್‌ಗೆ ಹೇಳಿದ್ದೇನೆ ಅಲ್ಲಿಗೆ ಹೋಗಿ ಇದ್ದುಬಿಡಿ ಎಂದರು. ಅಂತೆಯೇ ನಾವು ಹೋಟೆಲ್‌ಗೆ ಹೋಗೋಣವೆಂದು ಹೊರಟರೆ ನೀರಿನ ಸೆಳೆತ ಹೆಚ್ಚಾಗಿ ಕಾರು ನಿಯಂತ್ರಣ ತಪ್ಪಿತು, ನಮಗೆಲ್ಲ ಆತಂಕ, ತೀವ್ರ ಭಯ ಕಾಡಲು ಆರಂಭಿಸಿತು. 'ಎಲ್ಲಿಯಾದರೂ ಸೇಫ್‌ ಆದ ಜಾಗದಲ್ಲಿ ಕಾರು ನಿಲ್ಲಿಸಿ ಸಾಕು' ಎಂದು ಡ್ರೈವರ್‌ಗೆ ಹೇಳಿದೆ. ಅವರು ಕಷ್ಟಪಟ್ಟು ಓಡಿಸಿ ಎಲ್ಲೆಲ್ಲಿಯೋ ಸುತ್ತು ಹಾಕಿ ಕೊನೆಗೆ ಒಂದು ಸುರಕ್ಷಿತವಾದ ಸ್ಥಳಕ್ಕೆ ತಂದು ನಿಲ್ಲಿಸಿದರು. ಆ ನಂತರ ಗೊತ್ತಾಯಿತು ಅದು ಬೆಂಗಳೂರು ಹೈವೆ ಎಂದು. ದೇವರೇ ನಮ್ಮನ್ನು ಇಲ್ಲಿಗೆ ಕರೆತಂದಿದ್ದಾನೆ ಎಂದು ಕೊಂಡು ಹೆಚ್ಚು ತಡ ಮಾಡದೆ ಅದೇ ಹಾದಿ ಹಿಡಿದು ಬೆಂಗಳೂರಿನತ್ತ ಬಂದು ಬಿಟ್ಟೆವು'' ಎಂದಿದ್ದಾರೆ ತಾರಾ.

  ಕಣ್ಣೆದುರೇ ಕಾರು ತೇಲಿಕೊಂಡು ಹೋಯಿತು: ತಾರಾ

  ''ಬರುವ ಹಾದಿಯಲ್ಲಿ ಚಿತ್ತೂರಿನ ಬಳಿ ದೊಡ್ಡ ಟ್ರಾಫಿಕ್‌ ಜಾಮ್ ಆಗಿತ್ತು. ಅಲ್ಲಿಯೂ ನೀರು ಧಾರಾಕಾರವಾಗಿ ಹರಿಯುತ್ತಿತ್ತು. ನನ್ನ ಕಣ್ಣೆದುರೇ ಕಾರೊಂದು ನೀರಿನ ಮೇಲೆ ತೇಲಿಕೊಂಡು ಹೋಯಿತು. ಆ ಕಾರು ಅದೆಲ್ಲಿ ಹೋಗಿ ನಿಂತಿತೊ ದೇವರೇ ಬಲ್ಲ. ಅಂಥ ದುರ್ಘಮ ಸ್ಥಿತಿಯನ್ನು ನಾನು ನೋಡಿರಲೇ ಇಲ್ಲ. ತಿರುಪತಿ ಒಳಗೆ ಇದ್ದಷ್ಟು ಹೋತ್ತು ನಾವೆಲ್ಲರೂ ಜೀವ ಕೈಯಲ್ಲಿ ಹಿಡಿದುಕೊಂಡಿದ್ದೆವು. ನಮ್ಮ ಡ್ರೈವರ್ ಸಹ ಅಸಾಹಕನಾಗಿದ್ದ, ಕೆಲವು ಕಡೆ ಆತ ಎಷ್ಟು ಪ್ರಯತ್ನ ಪಟ್ಟರು ಗಾಡಿ ನಿಲ್ಲುತ್ತಿರಲಿಲ್ಲ, ನಾನಂತೂ ಕೆಲವೊಮ್ಮೆ ಕೂಗಾಡಿದೆ, ಅಲ್ಲಿ ನಿಲ್ಲಿಸಿ, ಇಲ್ಲಿ ನಿಲ್ಲಿಸಿ ಎಂದು ಕೊನೆಗೆ ಎಲ್ಲೆಲ್ಲೋ ಹೋಗಿ ನಾವು ಬೆಂಗಳೂರು ಹೆದ್ದಾರಿಗೇ ಬಂತು ನಿಂತೆವು. ನಾವು ಹೈವೆಗೆ ಬರುತ್ತಿದ್ದೇವೆ ಎಂಬ ಕಲ್ಪನೆಯೂ ನಮಗೆ ಇರಲಿಲ್ಲ. ದೇವರೇ ನಮ್ಮನ್ನು ಇಲ್ಲಿಗೆ ತಂದು ಬಿಟ್ಟ ಎಂದುಕೊಂಡು ನಾವು ವಾಪಸ್ ಬಂದುಬಿಟ್ಟೆವು'' ಎಂದಿದ್ದಾರೆ ತಾರಾ.

  English summary
  Actress Tara went to Tirupati yesterday she shared here horrifying experience she had there. Tirupati is filled with water due to heavy rain.
  Saturday, November 20, 2021, 9:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X