»   » ಸ್ಯಾಂಡಲ್ ವುಡ್ ನಲ್ಲಿ ಭುಗಿಲೆದ್ದ 'ಗೂಳಿಹಟ್ಟಿ' ಗದ್ದಲ

ಸ್ಯಾಂಡಲ್ ವುಡ್ ನಲ್ಲಿ ಭುಗಿಲೆದ್ದ 'ಗೂಳಿಹಟ್ಟಿ' ಗದ್ದಲ

Posted By:
Subscribe to Filmibeat Kannada

'ಗೂಳಿಹಟ್ಟಿ' ಸಿನಿಮಾ ರಿಲೀಸ್ ಆಗಿ ಮೂರು ದಿನಗಳು ಕಳೆದಿವೆ ಅಷ್ಟೆ. ಅಷ್ಟು ಬೇಗ 'ಗೂಳಿಹಟ್ಟಿ' ಅಡ್ಡದಲ್ಲಿ ಗಲಾಟೆ ಶುರುವಾಗಿದೆ.

'ಗೂಳಿಹಟ್ಟಿ' ಚಿತ್ರದ ನಾಯಕಿ ತೇಜಸ್ವಿನಿಗೆ ನಾಯಕ ಪವನ್ ಸೂರ್ಯ ಬಾಯಿಗೆ ಬಂದ ಹಾಗೆ ಬೈಯ್ದಿದ್ದಾರೆ. ಇದ್ದಕ್ಕಿದ್ದಂತೆ ತೇಜಸ್ವಿನಿ ಮನೆಗೆ ತೆರಳಿದ ಹೀರೋ ಪವನ್ ಸೂರ್ಯ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರಂತೆ. ['ಗೂಳಿಹಟ್ಟಿ' ಮೇಲೆ ಗುಟುರು ಹಾಕಿರುವ ವಿಮರ್ಶಕರು]

ಹಾಗಂತ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ನಟಿ ತೇಜಸ್ವಿನಿ ದೂರು ದಾಖಲಿಸಿದ್ದಾರೆ. ನಾಯಕಿ ತೇಜಸ್ವಿನಿ ಏಕ್ದಂ ಪೊಲೀಸ್ ಸ್ಟೇಷನ್ ಮೆಟ್ಟಿಲೇರುವುದಕ್ಕೆ ಕಾರಣ ಏನು ಅನ್ನೋದರ ಡೀಟೇಲ್ಸ್ ಇಲ್ಲಿದೆ ನೋಡಿ.....

ಶನಿವಾರ ನಡೆದ 'ಗೂಳಿಹಟ್ಟಿ' ಗಲಾಟೆ

ಮೊನ್ನೆ ಶನಿವಾರ ಬೆಳ್ಳಗೆ ನಟಿ ತೇಜಸ್ವಿನಿ ಮನೆಗೆ 'ಗೂಳಿಹಟ್ಟಿ' ಚಿತ್ರದ ನಾಯಕ ಪವನ್ ಸೂರ್ಯ ತೆರಳಿದ್ದಾರೆ. ಮನೆಗೆ ತೆರಳಿದ ತಕ್ಷಣ ತೇಜಸ್ವಿನಿ ಮೇಲೆ ಹೌಹಾರಿದ್ದಾರೆ. ಏರು ಧ್ವನಿಯಲ್ಲಿ ಮಾತನಾಡುವುದಕ್ಕೆ ಶುರುಮಾಡಿದ ಪವನ್ ಸೂರ್ಯ ಈಗ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.

ಪ್ರಮೋಷನ್ ಗೆ ಬರ್ಲಿಲ್ಲ ಅಂತ ಗಲಾಟೆ

ಅಸಲಿಗೆ ನಟಿ ತೇಜಸ್ವಿನಿ ಮನೆಗೆ ಪವನ್ ಸೂರ್ಯ ತೆರಳುವುದಕ್ಕೆ ಕಾರಣ 'ಪ್ರಮೋಷನ್ ಸ್ಟ್ರಾಟೆಜಿ'. ನಾಯಕಿ ತೇಜಸ್ವಿನಿ 'ಗೂಳಿಹಟ್ಟಿ' ಪ್ರಮೋಷನ್ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿಲ್ಲವಂತೆ. ನಿರ್ದೇಶಕರು ಫೋನ್ ಮಾಡಿದರೂ, ಅವರ ಕರೆಗೆ ಸ್ಪಂದಿಸದ ನಟಿ ತೇಜಸ್ವಿನಿ ಮೇಲೆ ಗರಂ ಆದ ಪವನ್, ಸೀದಾ ಅವರ ಮನೆಗೆ ಹೋಗಿ ಕೂಗಾಡಿದ್ದಾರೆ.

ಅವಾಚ್ಯ ಶಬ್ದಗಳಿಂದ ನಿಂದನೆ

ಬರೀ ಕೂಗಾಡಿದ್ದು ಮಾತ್ರವಲ್ಲ. ನಟಿ ತೇಜಸ್ವಿನಿಗೆ ಅವಾಚ್ಯ ಶಬ್ದಗಳಿಂದ ಪವನ್ ಸೂರ್ಯ ನಿಂದಿಸಿದ್ದಾರೆ. ಅಷ್ಟೇ ಅಲ್ಲದೇ, ಬೆದರಿಕೆ ಕೂಡ ಹಾಕಿದ್ದಾರೆ ಅಂತ ತೇಜಸ್ವಿನಿ ಆರೋಪಿಸಿದ್ದಾರೆ.

ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲು

ಆದ ಘಟನೆಯಿಂದ ಬೇಸರಗೊಂಡ ನಟಿ ತೇಜಸ್ವಿನಿ, ಜೆ.ಪಿ.ನಗರ ಪೊಲೀಸ್ ಠಾಣೆ ಮೆಟ್ಟಲೇರಿದ್ದಾರೆ. ನಟ ಪವನ್ ಸೂರ್ಯ ವಿರುದ್ಧ ದೂರು ದಾಖಲಿಸಿದ್ದಾರೆ.

ಪ್ರಮೋಷನ್ ಗೆ ಬಾರದೇ ಇರುವುದಕ್ಕೆ ಕಾರಣ

ನಟಿ ತೇಜಸ್ವಿನಿ 'ನಿತ್ಯವೇ ಸತ್ಯ' ಅನ್ನುವ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಆದ ಕಾರಣ, 'ಗೂಳಿಹಟ್ಟಿ' ಪ್ರಮೋಷನ್ ನಲ್ಲಿ ಭಾಗವಹಿಸುತ್ತಿಲ್ಲ ಅನ್ನೋದು ಮೂಲಗಳಿಂದ ಬಂದಿರುವ ಮಾಹಿತಿ.

ಟಿ.ಆರ್.ಪಿ ಫೇಸ್ ಗಳು ಬೇಕು

''ಪ್ರಮೋಷನ್ ಗಳಿಗೆ ಅಂತ ಚಾನೆಲ್ ಗಳಿಗೆ ಹೋದರೆ, ನೋಟೆಡ್ ಫೇಸ್ ಗಳು ಬೇಕು. ಅವರಿದ್ದರೆ ಮಾತ್ರ ಪ್ರೋಗ್ರಾಂ ಅಂತಾರೆ. ಆದ್ರೆ, ನಟಿ ತೇಜಸ್ವಿನಿ ಬರ್ತಾಯಿಲ್ಲ. ಅವರಿಲ್ಲ ಅಂದ್ರೆ, ಪ್ರಮೋಷನ್ ಹೇಗೆ ಸಾಧ್ಯ'' ಅಂತ ನಟ ಪವನ್ ಸೂರ್ಯ ಹೇಳುತ್ತಾರೆ.

ಬಿಟ್ಟಿ ಪಬ್ಲಿಸಿಟಿ ಆಯ್ತಲ್ಲ.!

ಸಿನಿಮಾ ಪ್ರಮೋಷನ್ ಒಳ್ಳೆ ರೀತಿಯಲ್ಲಿ ಆಗದೇ ಇದ್ದರೂ, ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದ ಮೇಲೆ 'ಗೂಳಿಹಟ್ಟಿ' ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಅಲ್ಲಿಗೆ, ಸಿನಿಮಾಗೆ ಪಬ್ಲಿಸಿಟಿ ಆಗ್ತಿದೆಯಲ್ವಾ.!

English summary
Kannada Actress Tejaswini files complaint against 'Goolihatti' hero Pawan Surya. 'Goolihatti' movie was released on June 26th.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada