For Quick Alerts
  ALLOW NOTIFICATIONS  
  For Daily Alerts

  ದೇವರು ಬದಲಿಸಿದ 'ಕಾನ್ಸ್ ಟೇಬಲ್ ಸರೋಜ' ಬದುಕು

  By Pavithra
  |

  ಕಾನ್ಸ್ ಟೇಬಲ್ ಸರೋಜ ಈ ಹೆಸರು ಕೇಳಿದ ತಕ್ಷಣ ಸಿನಿಮಾ ಪ್ರೇಮಿಗಳ ಕಿವಿ ನೆಟ್ಟಗಾಗುತ್ತೆ. ಅಷ್ಟರ ಮಟ್ಟಿಗೆ ಈಕೆ ತನ್ನ ಅಭಿನಯದ ಮೂಲಕವೇ ಪ್ರೇಕ್ಷಕರ ಮನಸ್ಸಿನಲ್ಲಿ ಜಾಗ ಗಿಟ್ಟಿಸಿಕೊಂಡಿದ್ದರು. ಟಗರು ಚಿತ್ರದಲ್ಲಿ ಕಾನ್ಸ್ ಟೇಬಲ್ ಸರೋಜ ಆಗಿದ್ದ ನಟಿ ತ್ರಿವೇಣಿ ಬದುಕಿನಲ್ಲಿ ಬದಲಾವಣೆ ಆಗಿದೆ.

  ತ್ರಿವೇಣಿ ಬದುಕನ್ನು ಬದಲಾಯಿಸಿದ್ದು ದೇವರು ಎಂದರೆ ನೀವು ನಂಬಲೇ ಬೇಕು. ಹೌದು ನಟಿ ತ್ರಿವೇಣಿ ದೇವರ ಅವತಾರ ಎತ್ತಿದ್ದಾರೆ. ತೆಲುಗಿನ ಭಕ್ತಿ ಪ್ರಧಾನ ಸಿನಿಮಾದಲ್ಲಿ ತ್ರಿವೇಣಿ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಪಾತ್ರಕ್ಕೆ ಸರಿ ಹೊಂದುತ್ತಾರಾ ಎನ್ನುವುದನ್ನ ತಿಳಿದುಕೊಳ್ಳಲು ದೇವಿಯ ಕಾಸ್ಟ್ಯೂಮ್ಸ್ ನಲ್ಲಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ.

  'ಟಗರು' ಸಿನಿಮಾದ 'ಕಾನ್ಸ್ ಟೇಬಲ್ ಸರೋಜ' ಯಾರು ಗೊತ್ತಾ ?

  ಕಾನ್ಸ್ ಟೇಬಲ್ ಸರೋಜ ಲುಕ್ ನಲ್ಲಿ ಕಾಣಿಸಿಕೊಂಡು ವೀಕ್ಷರನ್ನ ರಂಜಿಸಿದ ತ್ರಿವೇಣಿ ಅವರ ಹೊಸ ಅವತಾರಕ್ಕೆ ಅಭಿಮಾನಿಗಳು ದಂಗಾಗಿದ್ದಾರೆ. ಫೋಟೋ ನೋಡಿದ ನಂತರವೂ ಈಕೆ ನಮ್ಮ ಕಾನ್ಸ್ ಟೇಬಲ್ ಸರೋಜ ಅಲ್ಲ ಎನ್ನುತ್ತಿದ್ದಾರೆ.

  ಟಗರು ಚಿತ್ರದ ನಂತರ ತ್ರಿವೇಣಿ ಕನ್ನಡ ಸೇರಿದಂತೆ ಟಾಲಿವುಡ್ ನಲ್ಲಿಯೂ ಫೇಮಸ್ ಆಗಿದ್ದು ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಇವುಗಳ ಮಧ್ಯೆ ದೇವರ ಅವತಾರದಲ್ಲಿನ ಪೋಟೋ ಸಖತ್ ವೈರಲ್ ಆಗಿದೆ.

  English summary
  Kannada actress Trivani is acting in the Telugu devotional film. Triveni has previously acted in a Tagaru film

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X