»   » ಮಿಸ್ ಯುನಿವರ್ಸ್ ಆಗಲು ಹೊರಟ 'ಐರಾವತ' ಬೆಡಗಿ

ಮಿಸ್ ಯುನಿವರ್ಸ್ ಆಗಲು ಹೊರಟ 'ಐರಾವತ' ಬೆಡಗಿ

Posted By:
Subscribe to Filmibeat Kannada

ರೂಪದರ್ಶಿ ಕಮ್ ಬಾಲಿವುಡ್ ನಟಿ ಊರ್ವಶಿ ರೌಟೇಲ ಅವರು ಬಾಲಿವುಡ್ ಸಿನಿಮಾ 'ಸಿಂಗ್ ಸಾಬ್ ದಿ ಗ್ರೇಟ್' ಮೂಲಕ ತಮ್ಮ ಸಿನಿ ಜರ್ನಿಯನ್ನು ಆರಂಭಿಸಿದವರು. ಈ ನಟಿ ಚಿತ್ರರಂಗಕ್ಕೆ ಬರುವ ಮೊದಲು ರೂಪದರ್ಶಿಯಾಗಿದ್ದು, 2011 ರಲ್ಲಿ ಸೌತ್ ಕೊರಿಯಾ ದಲ್ಲಿ ನಡೆದ 'ಮಿಸ್ ಏಷಿಯನ್ ಸೂಪರ್ ಮಾಡೆಲ್' ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು.

ಇದೀಗ 'ಮಿಸ್ ದಿವ 2015' ಎಂಬ ಟೈಟಲ್ ಗಳಿಸಿಕೊಂಡಿರುವ ನಟಿ ಊರ್ವಶಿ ರೌಟೇಲ ಅವರು ಈ ವರ್ಷ(2015) ಡಿಸೆಂಬರ್ 19 ರಂದು ಲಾಸ್ ವೇಗಸ್ ನಲ್ಲಿ ನಡೆಯುವ ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.[ಐರಾವತ ಬೆಡಗಿಯ ಮನಮೋಹಕ ಚಿತ್ರಗಳು!]

2012ರಲ್ಲಿ ನಡೆದ 'ಐ ಆಮ್ ಶಿ', ಕಂಟೆಸ್ಟ್ ನಲ್ಲಿ ನಟಿ ಊರ್ವಶಿ ಅವರು ಭಾಗವಹಿಸಿದ್ದರು ಕೂಡ ಅವರ ವಯಸ್ಸಿನ ವಿವಾದಗಳಿಂದ ಪರಾಜಯಗೊಂಡಿದ್ದರು. ಆ ಸಂದರ್ಭದಲ್ಲಿ ನಟಿ ಊರ್ವಶಿಗೆ ಕೇವಲ 18 ವಯಸ್ಸು ಆಗಿತ್ತು ಈ ಕಾರಣದಿಂದ ಊರ್ವಶಿ ಅವರು ಸೋತಿದ್ದು, ಅವರೊಂದಿಗೆ ಸ್ಪರ್ಧಿಸಿದ್ದ ಇನ್ನಿಬ್ಬರು ಸ್ಪರ್ಧಿಗಳಾದ ನತಾಶಾ ಅಸಾದಿ ಮತ್ತು ನವೇಲಿ ದೇಶ್ ಮುಖ್ ಅವರು ಫಸ್ಟ್ ಹಾಗು ಸೆಕೆಂಡ್‌ ರನ್ನರ್ ಅಪ್ ಆಗಿದ್ದರು. ಮುಂದೆ ಓದಿ..

ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಳ್ಳುತ್ತಿರುವ ಊರ್ವಶಿ

ಇದೀಗ ರೂಪದರ್ಶಿ ಕಮ್ ನಟಿ ಊರ್ವಶಿ ಅವರಿಗೆ ವಯಸ್ಸು 21 ಆಗಿರುವುದರಿಂದ ಸೀದಾ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡು ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ನಮ್ಮ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.[ಚಿತ್ರ ವಿಮರ್ಶೆ : 'ಸುಂಟರಗಾಳಿ' ಬೀಸಿದ ದರ್ಶನ್ 'Mr.ಐರಾವತ' ]

ಮಿಸ್ ಯುನಿವರ್ಸ್ ಲಾರಾ ದತ್ತ ನಂತರ ಊರ್ವಶಿ

2000ರಲ್ಲಿ ಭಾರತದಿಂದ ಬಾಲಿವುಡ್ ಬೆಡಗಿ ಲಾರಾ ದತ್ತ ಮಿಸ್ ಯುನಿವರ್ಸ್ ಕಿರೀಟ ತಮ್ಮ ಮುಡಿಗೇರಿಸಿಕೊಂಡ ನಂತರ ಇದೀಗ 4 ವರ್ಷಗಳ ನಂತರ ನಟಿ ಊರ್ವಶಿ ಅವರು ಮಿಸ್ ಯುನಿವರ್ಸ್ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.

ಹಿಸ್ಟರಿ ರಿಪೀಟ್

ಮಿಸ್ ಯುನಿವರ್ಸ್ ಲಾರಾ ದತ್ತನ ನಂತರ ಮಿಸ್ ಯುನಿವರ್ಸ್ ಸ್ಪರ್ಧೆಗೆ ಇದೀಗ ಸ್ಪರ್ಧಿಸುತ್ತಿರುವ ನಟಿ ಊರ್ವಶಿ ಅವರು ಈಗಾಗಲೇ ಹಾರ್ಡ್ ವರ್ಕ್ ಮಾಡುತ್ತಿದ್ದಾರೆ. ಸಿನಿಮಾ ನಿರ್ಮಾಪಕರ ಅನುಮತಿ ಪಡೆದುಕೊಂಡು ತಾವು ಒಪ್ಪಿರುವ ಸಿನಿಮಾ ಪ್ರಾಜೆಕ್ಟ್ ಗಳನ್ನು ಬದಿಗೊತ್ತಿ, ಮಿಸ್ ಯುನಿವರ್ಸ್ ಪ್ರಶಸ್ತಿಯನ್ನು ಈ ಬಾರಿ ಭಾರತಕ್ಕೆ ತರುವ ಎಲ್ಲಾ ತಯಾರಿಯನ್ನು ಊರ್ವಶಿ ಅವರು ಮಾಡುತ್ತಿದ್ದಾರೆ.

ಉತ್ತರಕಾಂಡದ ಹುಡುಗಿ ಊರ್ವಶಿ

ಈಗಾಗಲೇ ಸ್ಪರ್ಧೆಗೆ ಶ್ರದ್ಧೆಯಿಂದ ತಯಾರಿ ನಡೆಸುತ್ತಿರುವ ನಟಿ ಕಮ್ ರೂಪದರ್ಶಿ ಊರ್ವಶಿ ರೌಟೇಲ ಅವರು ಮಾಡೆಲಿಂಗ್ ಗೆ ತನ್ನನ್ನು ತಾವು ಅರ್ಪಿಸಿಕೊಂಡಿದ್ದಾರೆ. ಇಷ್ಟು ಡೆಡಿಕೇಶನ್ ಇಟ್ಟುಕೊಂಡಿರುವ ಉತ್ತರಕಾಂಡದ ಬೆಡಗಿ ಈ ಬಾರಿ ಭಾರತಕ್ಕೆ ಕಿರೀಟ ತಂದುಕೊಡುವಲ್ಲಿ ಯಶಸ್ವಿಯಾಗಲಿ ಅಂತ ನಾವು ಹಾರೈಸೋಣ.

'Mr ಐರಾವತ' ಚಿತ್ರದಲ್ಲಿ ನಟಿಯಾಗಿ ಮಿಂಚಿದ್ದರು

ಮಿಸ್ ಯುನಿವರ್ಸ್ ಆಗಲು ಹೊರಟಿರುವ ನಟಿ ಊರ್ವಶಿ ಅವರು ನಮ್ಮ ಕನ್ನಡ ಚಿತ್ರ 'Mr ಐರಾವತ'ದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಸಖತ್ ಆಗಿ ಮಿಂಚಿದ್ದರು.['ಮಿಸ್ಟರ್ ಐರಾವತ' ಟ್ರೈಲರ್ ದರ್ಶನ್ ಖಡಕ್ ಲುಕ್ ]

ಸನಮ್ ರೇ ಯಲ್ಲಿ ಬಿಕಿನಿ ಬಿನ್ನಾಣ

ತಮ್ಮ ಮುಂದಿನ ಲವ್-ರೊಮ್ಯಾಂಟಿಕ್ ಸಿನಿಮಾ 'ಸನಮ್ ರೇ' ಯಲ್ಲಿ ನಟಿ ಊರ್ವಶಿ ಅವರು ಕಾಣಿಸಿಕೊಂಡಿದ್ದು, ಬಿಕಿನಿ ಹಾಕುವ ಮೂಲಕ ತಮ್ಮ ದೇಹಸಿರಿಯನ್ನು ಪ್ರದರ್ಶನ ಮಾಡಿದ್ದಾರೆ.[ಈ ಬೆಡಗಿಗೆ ಬಿಕಿನಿ ಧರಿಸಲು ಯಾವುದೇ ಮುಜುಗರ ಇಲ್ಲವಂತೆ!]

English summary
Actress Urvashi Rautela who made her bollywood debut with 'Singh Saab The Great', has won the 'Miss Diva' title and will repreesent India at 'Miss Universe Pageant' on 19th December at Las Vegas, this year 2015.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada